Get Updates
Get notified of breaking news, exclusive insights, and must-see stories!

ನಿಂತಲ್ಲಿ ನಿಲ್ಲಲಾರದ ನರಹಂತಕ ವೀರಪ್ಪನ್‌ ಕರ್ನಾಟಕದ ಕಾಡಿನತ್ತ

ಚಾಮರಾಜನಗರ : ಕರ್ನಾಟಕ ಹಾಗೂ ತಮಿಳುನಾಡು ಎಸ್‌ಟಿಎಫ್‌ ಪಡೆಗಳನ್ನು ದಿಕ್ಕು ತಪ್ಪಿಸುತ್ತ ನಿಂತಲ್ಲಿ ನಿಲ್ಲಲಾರದೆ ಕಾಡಿನಲ್ಲಿ ಅಲೆಯುತ್ತಿರುವ ನರಹಂತಕ ವೀರಪ್ಪನ್‌ ತಮಿಳುನಾಡು, ಕೇರಳ ಅರಣ್ಯಗಳನ್ನು ಪೂರೈಸಿಕೊಂಡು ಪ್ರಸ್ತುತ ಕರ್ನಾಟಕದ ಕಾಡಿನತ್ತ ನಡೆಯುತ್ತಿರುವ ಇಂಗಿತವನ್ನು ಗುಪ್ತದಳ ಮೂಲಗಳು ವ್ಯಕ್ತ ಪಡಿಸಿವೆ.

ತಮಿಳುನಾಡಿನ ಸತ್ಯಮಂಗಲಂ ಅರಣ್ಯ ವ್ಯಾಪ್ತಿಯ ಬಣ್ಣಾರಿ, ರಾಮಬೈಲೂರು, ಚಿಕ್ಕರಸನಪಾಳ್ಯಂ ಹಾಗೂ ಪುಳಿಯಂ ಗೋಂಬೈ ಅರಣ್ಯ ಪ್ರದೇಶಗಳಲ್ಲಿ ವೀರಪ್ಪನ್‌ ಚಟುವಟಿಕೆ ಕಳೆದೆರಡು ದಿನಗಳಲ್ಲಿ ಕಂಡು ಬಂದಿದ್ದು , ಈ ಅರಣ್ಯ ಪ್ರದೇಶದ ಮೂಲಕ ಕರ್ನಾಟಕದ ಅರಣ್ಯಕ್ಕೆ ಸುರಕ್ಷತೆಯ ಉದ್ದೇಶದಿಂದ ವೀರಪ್ಪನ್‌ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ವಿಶೇಷ ಕಾರ್ಯಾಚರಣೆ ಪಡೆಗೆ ಹೊಂದಿಕೊಂಡಿರುವ ಗುಪ್ತದಳದ ಅಧಿಕಾರಿಯಾಬ್ಬರು ತಿಳಿಸಿದ್ದಾರೆ.

ಈ ನಡುವೆ, ವೀರಪ್ಪನ್‌ ಪ್ರವೇಶದ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಪ್ರದೇಶದ ಅರಣ್ಯ ಪ್ರದೇಶಗಳ ಮೇಲೆ ಕರ್ನಾಟಕ ಪಡೆಗಳು ವಿಶೇಷ ಗಮನ ಹರಿಸಿವೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+