ಸ್ಫೋಟದಾಟಗಾರ ರಿಚರ್ಡ್ಸ್ ಹೆಸರಲ್ಲೊಂದು ಟೆಸ್ಟ್ ಟ್ರೋಫಿ
ಜಾರ್ಜ್ಟೌನ್ : ಇನ್ನು ಮುಂದೆ ವೆಸ್ಟಿಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುವ ಟೆಸ್ಟ್ ಸರಣಿ ವಿಜೇತರಿಗೆ ನೀಡುವ ಟ್ರೋಫಿಯನ್ನು ವಿಶ್ವ ಕ್ರಿಕೆಟ್ನ ಶ್ರೇಷ್ಠ ಬೀಸು ಬ್ಯಾಟುಗಾರರಾದ ಬ್ಯಾಟಿಂಗ್ ದಂತಕಥೆ ಸರ್ ವಿವಿಯನ್ ರಿಚರ್ಡ್ಸ್ ಹೆಸರಿನಿಂದ ಗುರ್ತಿಸಲಾಗುವುದು.
ಇದು ವಿಶ್ವ ಕ್ರಿಕೆಟ್ಗೆ ರಿಚರ್ಡ್ಸ್ ಸಲ್ಲಿಸಿರುವ ಸೇವೆಗೆ ಸಂದ ಗೌರವ ಎಂದು ವಿಂಡೀಸ್ ಕ್ರಿಕೆಟ್ ಬೋರ್ಡ್ (ಡಬ್ಲ್ಯೂಐಸಿಬಿ) ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗ್ರೆಗರಿ ಷಿಲ್ಲಿಂಗ್ಪೋರ್ಡ್ ಬಣ್ಣಿಸಿದ್ದಾರೆ. ಸ್ಫೋಟಕ ಹೊಡೆತಗಳ ಆಟಗಾರನಾಗಿದ್ದ ವಿವಿಯನ್ ಅವರದ್ದು ಕಲಾತ್ಮಕ ಆಟ. ವರ್ಣಭೇದ ಪ್ರಬಲವಾಗಿದ್ದ ದಿನಗಳಲ್ಲಿ ಕ್ರಿಕೆಟ್ರಂಗ ಪ್ರವೇಶಿಸಿದ ಅವರು ದಕ್ಷಿಣ ಆಫ್ರಿಕಾದ ಪ್ರತಿಯಾಬ್ಬ ಕರಿಯನ ಪಾಲಿಗೂ ಶಕ್ತಿ ಹಾಗೂ ಘನತೆಗಳ ಪ್ರತೀಕವಾಗಿದ್ದರು ಎಂದು ಗ್ರೆಗರಿ ಹೇಳಿದ್ದಾರೆ.
ರಿಚರ್ಡ್ಸ್ ಟ್ರೋಫಿಗಾಗಿ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿ ಶುಕ್ರವಾರದಿಂದ ಬೌರ್ಡದಲ್ಲಿ ಪ್ರಾರಂಭವಾಗಲಿದೆ. ಟ್ರೋಫಿಯನ್ನು ರಿಚರ್ಡ್ಸ್ ಹೆಸರಿನಿಂದ ಗುರ್ತಿಸಿರುವುದರಿಂದ ಟ್ರೋಫಿಯನ್ನು ಎತ್ತಲು ನಾನು ಮತ್ತಷ್ಟು ಕಾತರನಾಗಿದ್ದೇನೆ ಎಂದು ದಕ್ಷಿಣ ಆಫ್ರಿಕಾದ ನಾಯಕ ಶಾನ್ ಪೊಲ್ಲಾಕ್ ಹೇಳಿದ್ದಾರೆ.
(ರಾಯ್ಟರ್ಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications