Get Updates
Get notified of breaking news, exclusive insights, and must-see stories!

ವಿಧವೆ-ವಿಧುರರಿಗೆ ಪರಿವರ್ತನದಿಂದ ಬಳ್ಳಾರಿಯಲ್ಲೊಂದು ಸ್ವಯಂವರ

ಬಳ್ಳಾರಿ : ಮಾರ್ಚ್‌ ಹನ್ನೊಂದರ ಭಾನುವಾರ ಮರು ಮದುವೆಯಾಗಬಯಸುವ ವಿಧವೆಯರು ಮತ್ತು ವಿಧುರರು ತಮ್ಮ ಬಾಳಸಂಗಾತಿಯನ್ನು ಆರಿಸಿಕೊಳ್ಳಲು ಅನುಕೂಲವಾಗುವಂತೆ ಕಾರ್ಯಕ್ರಮವೊಂದನ್ನು ಇಲ್ಲಿನ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಹಿಂದಿರುವ ವ್ಯಕ್ತಿ ಪರಿವರ್ತನ ಸಂಘಟನೆಯ ಟ್ರಸ್ಟೀ ನಾಡಹಳ್ಳಿ ಶ್ರೀಪಾದ ರಾವ್‌. ವಿಧವಾ ವಿವಾಹಕ್ಕೆ ಸಂಬಂಧಿಸಿದಂತೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಶ್ರೀಪಾದ ರಾವ್‌ ಹೇಳಿದರು.

ಹೂಮಳೆ ಚಿತ್ರ ಶ್ರೀಪಾದ ರಾವ್‌ ಅವರ ಹೊಸ ಬದುಕು ಕಾದಂಬರಿ ಆಧಾರಿತ ಚಿತ್ರ. ಭಾನುವಾರದ ಕಾರ್ಯಕ್ರಮಕ್ಕೆ ಪೂರಕವಾಗುವಂತೆ ಇಲ್ಲಿನ ನಟರಾಜ ಚಿತ್ರಮಂದಿರದಲ್ಲಿ ವಿಧವಾ ವಿವಾಹವನ್ನು ಎತ್ತಿ ಹಿಡಿಯುವ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಹೂಮಳೆ ಚಲನ ಚಿತ್ರವನ್ನು ಪ್ರದರ್ಶಿಸಲಾಗುವುದು.

ವಿಧವಾ ವಿವಾಹಕ್ಕೆ ಪರಿವರ್ತನ ಸಂಸ್ಥೆ ಪ್ರೋತ್ಸಾಹ ನೀಡುತ್ತಿದ್ದು, ಸದ್ಯದಲ್ಲಿಯೇ ವಿಧವೆಯರ ಪುನರ್ವಸತಿ ಕೇಂದ್ರವನ್ನು ತೆರೆಯಲಿದೆ ಎಂದು ಶ್ರೀಪಾದ ರಾವ್‌ ಹೇಳಿದ್ದಾರೆ. ವಿಧವೆಯರ ಏಳಿಗೆಗೆ ಶ್ರಮಿಸುತ್ತಿರುವ ಪರಿವರ್ತನ ಸಂಘಟನೆಗೆ ಸಹಾಯ ಮಾಡಬಯಸುವವರು ಪರಿವರ್ತನ, 303 ‘ಎ’ ಕಸ್ತೂರಿ ಧಾಮಾ ಅಪಾರ್ಟ್‌ಮೆಂಟ್ಸ್‌, 9ನೇ ಅಡ್ಡರಸ್ತೆ, 8ನೇ ಮುಖ್ಯ ರಸ್ತೆ, ಮಲ್ಲೇಶ್ವರಂಗೆ ಡಿಡಿ ಅಥವಾ ಚೆಕ್‌ ಕಳುಹಿಸಬಹುದು. ಈ ಸಹಾಯ ಧನಕ್ಕೆ ಆದಾಯ ತೆರಿಗೆ ವಿನಾಯಿತಿ ಇರುತ್ತದೆ. ಪರಿವರ್ತನ ಸಂಘಟನೆಯ ಬಗ್ಗೆ ತಿಳಿದುಕೊಳ್ಳಬಯಸುವವರು ಈ ವಿಳಾಸವನ್ನೇ ಸಂಪರ್ಕಿಸಬಹುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+