ಅಮೆರಿಕ ಮುಸ್ಲಿಂರಿಂದ ಕಂಪನ ಸಂತ್ರಸ್ತರಿಗೆ 47 ಸಾವಿರ ಡಾಲರ್
*ಅಜೀಜ್ ಹನೀಫ್
ವಾಷಿಂಗ್ಟನ್ : ಅಮೆರಿಕೆಯಲ್ಲಿನ ಭಾರತೀಯ ಮುಸ್ಲಿಮರ ಸಂಘ (ಎಐಎಂಎ) ಹಾಗೂ ದಕ್ಷಿಣ ಏಷ್ಯಾ ವೃತ್ತಿಪರರ ಜಾಲ (ನೆಟ್ ಸ್ಯಾಪ್) ದ ಸದಸ್ಯರು ಕಳೆದೊಂದು ತಿಂಗಳಿಂದ ಸುತ್ತಾಡಿ, ಗುಜರಾತ್ ಸಂತ್ರಸ್ತರಿಗಾಗಿ ನಗರದ ಮುಸ್ಲಿಂ ಬಂಧುಗಳಿಂದ 47 ಸಾವಿರ ಡಾಲರ್ ದೇಣಿಗೆ ಸಂಗ್ರಹಿಸಿದ್ದಾರೆ.
ಜನವರಿ 26, ಗಣರಾಜ್ಯೋತ್ಸವ (ಶುಕ್ರವಾರ) ಗುಜರಾತ್ ನಡುಗಿದ ಸುದ್ದಿ ನಮ್ಮನ್ನೂ ನಡುಗಿಸಿತು. ಅಂದು ಜುಮ್ಮಾ ಪ್ರಾರ್ಥನೆಗೆ ಮಸೀದಿಯಲ್ಲಿ ಸೇರಿದ ಮುಸ್ಲಿಂ ಬಂಧುಗಳು ಗುಜರಾತ್ ಸಂತ್ರಸ್ತರಿಗೆ ನೆರವು ಸಂಗ್ರಹಿಸುವ ಪಣ ತೊಟ್ಟರು. ಪ್ರತಿ ವಾರದ ಜುಮ್ಮಾ ಪ್ರಾರ್ಥನೆಗೆ ಬರುವ ಮಂದಿ ದೇಣಿಗೆ ಡಬ್ಬ ತುಂಬಿಸಿದರು. ಕಳೆದ ಶುಕ್ರವಾರದಲ್ಲೇ 25 ಸಾವಿರ ಡಾಲರ್ ಮೊತ್ತ ಸಂಗ್ರಹವಾಗಿದೆ. ಸಿಲ್ವರ್ ಸ್ಪ್ರಿಂಗ್ ಹಾಗೂ ಮೇರಿಲ್ಯಾಂಡ್ ಮುಸ್ಲಿಂ ಬಂಧುಗಳಿಗೆ ಧನ್ಯವಾದಗಳು ಎನ್ನುತ್ತಾರೆ ಎಐಎಂಎ ನಿರ್ದೇಶಕ ಕಲೀಂ ಕವಾಜ.
ಎಐಎಂಎ ಸಂಗ್ರಹಿಸಿರುವ ಹಣವನ್ನ ಭುಜ್ ಹಾಗೂ ಕವಾಜಗಳಲ್ಲಿರುವ ಕಛ್ ಭೂಕಂಪ ರಾಹತ್ ಸಮಿತಿಗೆ ಈಗಾಗಲೇ ತಲುಪಿಸಲಾಗಿದೆ. ಅಮೆರಿಕೆಯಲ್ಲಿ ಸುಮಾರು 1 ಲಕ್ಷ ಮುಸ್ಲಿಂ ಬಾಂಧವರಿದ್ದು, ವಿವಿಧ ಸಂಘಟನೆಗೊಳೊಂದಿಗೆ ಗುಜರಾತ್ ಪರಿಹಾರಕ್ಕೆ ದೇಣಿಗೆ ಸಂಗ್ರಹಿಸಲು ಉತ್ಸುಕರಾಗಿದ್ದಾರೆ. ನೆರವಿನ ಮೊತ್ತಕ್ಕೆ ಮುಸ್ಲಿಂ ಸಮುದಾಯಗಳದ್ದೇ 1ಲಕ್ಷ ಡಾಲರ್ ಸಂದಾಯವಾಗುವ ನಿರೀಕ್ಷೆಯಿದೆ.
(ಐಎಎನ್ಎಸ್)
| ಮುಖಪುಟ |
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications