ರಾಜ್ಯದ ಮೆಕ್ಕೆಜೋಳ ಖರೀದಿಗೆ ಶ್ರೀಲಂಕಾ- ಬಾಂಗ್ಲಾ ಮುಂದು
ಬೆಂಗಳೂರು : ರೈತರ ಕಣ್ಣೊರೆಸಲು ತಡಕಾಡುತ್ತಿರುವ ಸರ್ಕಾರಕ್ಕೊಂದು ಆಶಾಕಿರಣ. ಬಾಂಗ್ಲಾದೇಶ ಮತ್ತು ಶ್ರೀಲಂಕಾ 1 ಲಕ್ಷ ಟನ್ ಮೆಕ್ಕೆಜೋಳ ಖರೀದಿಸಲು ಮುಂದೆ ಬಂದಿವೆ.
ವಿಧಾನ ಪರಿಷತ್ತಿನ ಕಲಾಪದ ಚಕಮಕಿ ಮಧ್ಯೆ ಗದ್ದಲ ಅಡಗಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ರಾಜ್ಯ ಸಚಿವ ಡಿ.ಬಿ.ಇನಾಂದಾರ್, ಬಾಂಗ್ಲಾ ಹಾಗೂ ಶ್ರೀಲಂಕಾ ದೇಶಗಳು ಖರೀದಿ ಆರ್ಡರ್‌ಗಳನ್ನು ಸರ್ಕಾರದ ಮುಂದಿಟ್ಟಿವೆ. ಮೆಕ್ಕೆಜೋಳದ ರಫ್ತಿಗೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೇಂದ್ರ ವಾಣಿಜ್ಯ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದರು.
ರಾಜ್ಯದಲ್ಲಿ ಬೆಳೆದಿರುವ ಲಕ್ಷಾಂತರ ಟನ್ ಮೆಕ್ಕೆಜೋಳ ಖರೀದಿಸಲು ಸರ್ಕಾರ ತುದಿಗಾಲಲ್ಲಿ ನಿಂತಿದೆ. ಆದರೆ ಖರೀದಿಸಿದ ಮಾಲನ್ನು ಸಂಗ್ರಹಿಸಿಡಲು ಗೋದಾಮು ಇಲ್ಲದಿರುವುದು ದೊಡ್ಡ ತಲೆನೋವಾಗಿದೆ. ಮಹಾರಾಷ್ಟ್ರ ಗೋದಾಮುಗಳಲ್ಲಿ ಬೆಳೆಯನ್ನು ಶೇಖರಿಸಿಡುವ ಸಾಧ್ಯತೆಯ ಬಗೆಗೂ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳೂ ನಡೆದಿವೆ. ಈಗ ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳು ಖರೀದಿಗೆ ಮುಂದೆ ಬಂದಿರುವುದು ಮರುಭೂಮಿಯಲ್ಲಿ ಓಯಸಿಸ್ ಕಂಡಂತಾಗಿದೆ ಎಂದು ಹೇಳಿದರು.
ದಗಾ ದಲ್ಲಾಳಿಗಳಿಗೆ ತಕ್ಕ ಶಾಸ್ತಿ : ಇದೇ ವಿಷಯವಾಗಿ ಮಾತನಾಡಿದ ನೀರಾವರಿ ಸಚಿವ ಎಚ್.ಕೆ.ಪಾಟೀಲ್, ರೈತರ ಪ್ರಾಣ ಹಿಂಡುವ ದಲ್ಲಾಳಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲೂ ಸರ್ಕಾರ ಹಿಂಜರಿಯುವುದಿಲ್ಲ. ತನ್ನ ಬೆಳೆಯನ್ನು ಖರೀದಿಸುವರೆಂದರೆ ಸಾಕು, ರೈತ ಪುಟಿದೇಳುವ ಇವತ್ತಿನ ಸಂದಭದಲ್ಲಿ ಪರಿಸ್ಥಿತಿಯ ಲಾಭ ಪಡೆದು, ಸ್ವಾರ್ಥ ಮೆರೆಯುವ ಮಧ್ಯಸ್ಥರಿಗೆ ಕಿಂಚಿತ್ತೂ ಮಾನವೀಯತೆಯಿಲ್ಲ ಎಂದು ವಿಷಾದಿಸಿದರು.
ರೈತನ ಸಮಸ್ಯೆಗೆ ಮಾರ್ಚ್ 12ರಂದು ಸರ್ಕಾರದ ಉತ್ತರ : ಒಣ ಕೊಬ್ಬರಿ ಖರೀದಿಸಿರುವ ರಾಷ್ಟ್ರೀಯ ಕೃಷಿ ಒಕ್ಕೂಟದಿಂದ ರಾಜ್ಯಕ್ಕೆ 3.5 ಕೋಟಿ ರುಪಾಯಿ ಬಾಕಿ ಬರಬೇಕು. ಆದರೆ ಸರ್ಕಾರ ಆ ಹಣಕ್ಕೆ ಕಾಯದೆ, ಕೊಬ್ಬರಿ ರೈತರಿಗೆ 2.5 ಕೋಟಿ ರುಪಾಯಿ ಕೊಟ್ಟಿದೆ. ಬೆಂಬಲ ಬೆಲೆ ಕುಸಿದಿರುವ ಬಗ್ಗೆ ಉಭಯ ಸದನಗಳಲ್ಲೂ ನಡೆದಿರುವ ಬಿಸಿ ಚರ್ಚೆಗೆ ಮಾರ್ಚ್ 12ರಂದು ಸರ್ಕಾರ ವಿವರಣಾತ್ಮಕ ಉತ್ತರ ನೀಡಲಿದೆ ಎಂದು ಪಾಟೀಲ್ ಹೇಳಿದರು.
(ಯುಎನ್‌ಐ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications