ಅಕ್ಕ ಮಹಾದೇವಿ ವಚನಗಳನ್ನು ವಿರೂಪಗೊಳಿಸಿರುವ ಮಾತೆ ಮಹಾದೇವಿ
ಬೆಂಗಳೂರು : ಬಸವಣ್ಣನವರ ವಚನಗಳ ಅಂಕಿತವನ್ನು ಬದಲಾವಣೆಗೊಳಿಸಿದ ಉದ್ಧಟತನದ ಆರೋಪ ಹೊತ್ತಿರುವ ಮಾತೆ ಮಹಾದೇವಿ ಈಗ ಅಕ್ಕ ಮಹಾದೇವಿ ಅವರ ವಚನಗಳನ್ನು ವಿರೂಪಗೊಳಿಸಿರುವ ಆಪಾದನೆಯಲ್ಲಿ ಸಿಲುಕಿದ್ದಾರೆ. ಅವರು ಹೊರತಂದಿರುವ ಶರಣವಾಣಿ ಕ್ಯಾಸೆಟ್ಟಿನಲ್ಲಿ ಅಕ್ಕನವರ ವಚನಗಳನ್ನು ವಿರೂಪಗೊಳಿಸಿರುವುದರಿಂದ, ಕ್ಯಾಸೆಟ್ಟುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ವಿರೋಧ ಪಕ್ಷಗಳ ಕೆಲವು ಸದಸ್ಯರು ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ಬಿಜೆಪಿಯ ಡಾ. ಎ.ಎಚ್. ಶಿವಯೋಗ ಸ್ವಾಮಿ ಕ್ಯಾಸೆಟ್ಟಿನ ವಿಷಯವನ್ನು ಪ್ರಸ್ತಾಪಿಸಿದರು. ಶರಣವಾಣಿ ಕ್ಯಾಸೆಟ್ಟಿನ ವಿರುದ್ಧ ದಾವಣಗೆರೆಯಲ್ಲಿ ದೊಡ್ಡ ಪ್ರತಿಭಟನಾ ಮೆರವಣಿಗೆ ನಡೆದ ವಿಷಯವನ್ನು ಸ್ವಾಮಿ ಸದನದ ಗಮನಕ್ಕೆ ತಂದರು.
ಈ ಮೊದಲು ಕೂಡ ಬಸವಣ್ಣನವರ ವಚನಗಳನ್ನು ಮಾತೆ ಮಹಾದೇವಿ ಕುರೂಪಗೊಳಿಸಿದ್ದರು. ಜನತಾದಳ ಸರ್ಕಾರ ಮಹಾದೇವಿ ಅವರ ವಚನದೀಪ್ತಿ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು . ಪ್ರಸ್ತುತ ಅದೇ ವಿವಾದಿತ ವಚನಗಳು ಮಹಾದೇವಿ ನಡೆಸುತ್ತಿರುವ ಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ ಎಂದು ಶಿವಯೋಗ ಸ್ವಾಮಿ ವಿಷಾದಿಸಿದರು.
ಜನಾಂಗಕ್ಕೆ ಮಾಡಿದ ಅವಮಾನ, ಮಹಾದೇವಿಯನ್ನು ಬಂಧಿಸಿ
ಶಿವಯೋಗಿ ಸ್ವಾಮಿಯವರ ಮಾತುಗಳನ್ನು ಸಂಯುಕ್ತ ಜನತಾದಳದ ಡಾ. ಮಹದೇವ ಬಣಕಾರ್ ಬೆಂಬಲಿಸಿದರು. ಮಹಾದೇವಿ ಅಕ್ಕ ಮಹಾದೇವಿಯವರ ಅಂಕಿತವನ್ನು ಬದಲಿಸಿದ್ದಾರೆ. ಚೆನ್ನ ಮಲ್ಲಿಕಾರ್ಜುನ ಎಂದು ಇರುವೆಡೆ ಲಿಂಗದೇವರು ಪದ ಬಳಸಿದ್ದಾರೆ. ಉಳಿದಂತೆ ಅಕ್ಕನವರ ಸಾಹಿತ್ಯ ಮೂಲದಂತೆಯೇ ಇದೆ. ಈ ಬದಲಾವಣೆ ಜನಾಂಗಕ್ಕೆ ಮಾಡಿದ ಅವಮಾನ, ಪರಿಸ್ಥಿತಿ ಕೈ ಮೀರುತ್ತಿದೆ ಎಂದು ಬಣಕಾರ್ ಎಚ್ಚರಿಸಿದರು.
ಸಂಯುಕ್ತ ಜನತಾದಳದ ಮತ್ತೊಬ್ಬ ಸದಸ್ಯ ಬಸವರಾಜ ಹೊರಟ್ಟಿ, ವಚನಗಳನ್ನು ಕುರೂಪಗೊಳಿಸಿದ ಆರೋಪದ ಮೇಲೆ ಮಹಾದೇವಿ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು.
ಕ್ಯಾಸೆಟ್ಟಿನ ಬಗ್ಗೆ ವಿರೋಧ ಪಕ್ಷಗಳ ಸದಸ್ಯರ ವಾದವನ್ನು ಆಲಿಸಿದ ಸಚಿವ ಎಚ್.ಕೆ. ಪಾಟೀಲ್, ಸದಸ್ಯರ ಭಾವನೆಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತದೆ. ಈ ಹಿಂದಿನ ಪ್ರಕರಣವನ್ನು ಅನುಸರಿಸಲಾಗುವುದು ಹಾಗೂ ಕ್ಯಾಸೆಟ್ಟನ್ನು ಆಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸದನಕ್ಕೆ ಆಶ್ವಾಸನೆ ನೀಡಿದರು. ಯಾವುದೇ ರೀತಿಯ ಸಾಹಿತ್ಯ ಚೌರ್ಯ ತಪ್ಪು ಎಂದು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಅಭಿಪ್ರಾಯ ಪಟ್ಟರು.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications