Get Updates
Get notified of breaking news, exclusive insights, and must-see stories!

ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ

(ಇನ್ಫೋ ವಿಶೇಷ)

ಈಗ್ಗೆ ಸರಿಯಾಗಿ 140 ವರ್ಷಗಳ ಹಿಂದೆ, 1857ರ ಮಾರ್ಚ್‌ 8ರಂದು ಭಾರತದ ಪ್ರಥಮ ಸ್ವಾತಂತ್ರ್ಯ ಸಮರ ಬಲವಾಗುತ್ತಿದ್ದಾಗ, ಕೈಗಾರಿಕಾ ಕ್ರಾಂತಿಯ ಮೊಳಗೂ ವಿಶ್ವದೆಲ್ಲೆಡೆ ಹಬ್ಬಿತ್ತು. ಆ ಸಮಯದಲ್ಲೇ ಮಹಿಳಾ ಕಾರ್ಮಿಕರ ಒಕ್ಕೊರಲು ಪ್ರತಿಧ್ವನಿಸಿದ್ದು. ನಾವು ಗಂಡಸರಂತೆಯೇ ದುಡಿಯುತ್ತೇವೆ. ಅವರಷ್ಟೇ ಹೊತ್ತು ಕೆಲಸ ಮಾಡುತ್ತೇವೆ. ನಮಗೂ ಗಂಡಸರಿಗೆ ಕೊಡುವಷ್ಟೇ ಸಂಬಳ ಕೊಡಿ ಎಂದು ಜವಳಿ ಉದ್ದಿಮೆಗಳಲ್ಲಿ ಎಡಬಿಡದೆ ಹೊಲಿಗೆಯಂತ್ರ ತುಳಿಯುತ್ತಿದ್ದ ಅಮೆರಿಕೆಯ ನೂರಾರು ಹೆಂಗಸರು ದನಿಯೆತ್ತಿದ್ದರು.

1910ರಲ್ಲಿ ಕೋಪೆನ್‌ಹ್ಯಾಗನ್‌ನಲ್ಲಿ ಅಂತರರಾಷ್ಟ್ರೀಯ ಮಹಿಳಾ ಸಮಾಜ ಸಭೆ ನಡೆಸಿತು. ವರ್ಷದ ಒಂದು ದಿನವನ್ನು ಮಹಿಳೆಯರ ಪ್ರತಿಭಟನಾ ಪ್ರತೀಕವಾಗಿ ವಿಶ್ವಾದ್ಯಂತ ಆಚರಿಸಬೇಕು ಎಂದು ಸಭೆ ತೀರ್ಮಾನಿಸಿತು. ಆಗಾಗ ಏಳುತ್ತಿದ್ದ ಮಹಿಳೆಯರ ಪ್ರತಿಭಟನೆಯ ಸೊಲ್ಲನ್ನು, ತಕ್ಷಣಕ್ಕೆ ಕಣ್ಣೊರೆಸುವ ತಂತ್ರದಿಂದ ಸರ್ಕಾರಗಳು ತಣ್ಣಗೆ ಮಾಡಿದವು. ಮುಂದೆ 1975ರಲ್ಲಿ ಸಾಕಷ್ಟು ಚರ್ಚೆಗಳ ನಂತರ ಪ್ರತಿವರ್ಷ ಮಾರ್ಚ್‌ 8 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ನಿಗದಿಯಾಯಿತು.

ಮಹಿಳೆಯರ ಒರಲು ಸರ್ಕಾರಗಳ ಗದ್ದುಗೆಗಳಿಗೆ ಬಡಿಯತೊಡಗಿ 140 ವರ್ಷಗಳು ಕಳೆದಿದ್ದರೂ ಹೆಂಗಸರ ಸ್ಥಿತಿ- ಗತಿ ಇವತ್ತಿಗೂ ನಿರೀಕ್ಷಿತ ಮಟ್ಟಕ್ಕೆ ಏರಿಲ್ಲ. ಇದನ್ನು ರುಜುವಾತು ಮಾಡಲು ಈ ಅಂಕಿ- ಅಂಶಗಳೇ ಸಾಕು...

  • ವಿಶ್ವದ ಕಡು ಬಡವರಲ್ಲಿ 1.3 ಬಿಲಿಯನ್‌ ಮಹಿಳೆಯರಿದ್ದಾರೆ
  • 1970ರ ನಂತರ ಜಗತ್ತಿನ ಗ್ರಾಮೀಣ ಪ್ರದೇಶಗಳ ಬಡ ಮಹಿಳೆಯರ ಸಂಖ್ಯೆ ದುಪ್ಪಟ್ಟಾಗಿದೆ
  • ವಿಶ್ವದ ಬೆಳೆಯಲ್ಲಿ ಅರ್ಧದಷ್ಟನ್ನು ಹೆಂಗಸರ ಕೈಗಳೇ ತೆನೆಗಟ್ಟಿಸಿರುತ್ತವೆ. ಆದರೆ 100 ಹೆಂಗಸರ ಪೈಕಿ ಒಬ್ಬಾಕೆ ಮಾತ್ರ ಭೂಒಡೆತನ ಪಡೆದಿದ್ದಾಳೆ.
  • ಮೂವರು ಅನಕ್ಷರಸ್ಥರ ಪೈಕಿ ಇಬ್ಬರು ಮಹಿಳೆಯರು. ಉಳಿದೊಬ್ಬ ಮಾತ್ರ ಪುರುಷ
  • ಗಂಡಸಿಗಿಂತ ಹೆಂಗಸರು ಸರಾಸರಿ 30ರಿಂದ 40 ಪ್ರತಿಶತ ಸಂಬಳ ಕಡಿಮೆ ಪಡೆಯುತ್ತಾರೆ
ಭಾರತದಲ್ಲಿ ...

  • ಸ್ತನ ಕ್ಯಾನ್ಸರ್‌ ಪ್ರಮಾಣ ಯದ್ವಾತದ್ವಾ ಹೆಚ್ಚಿದೆ
  • ಗ್ರಾಮೀಣ ಮಹಿಳೆಯರಲ್ಲಿ ಶೇ.90ರಷ್ಟು ಮಂದಿ ಸ್ವಾವಲಂಬಿಗಳಾಗಿಲ್ಲ
  • ವರದಕ್ಷಿಣೆ ಹತ್ಯೆಗಳು ಇನ್ನೂ ನಿಂತಿಲ್ಲ
  • ಸಮಾನ ಕೂಲಿಯಂತೂ ಕನಸಿನ ಮಾತು
  • ಪ್ರತಿ ಹತ್ತು ಭ್ರೂಣಹತ್ಯೆಗಳ ಪೈಕಿ ಒಂದು ಕಾನೂನು ಬಾಹಿರವಾದದ್ದು
  • ಎಷ್ಟೋ ಮಹಿಳಾ ಯೋಜನೆಗಳು ಜಾರಿಯಾಗಿಲ್ಲ
  • ರಾಜಕೀಯದಲ್ಲಿ ಮಹಿಳಾ ಮೀಸಲಾತಿ ನೀಡಿಕೆ ಪ್ರಸ್ತಾವನೆ ನೆನೆಗುದಿಗೆ ಬಿದ್ದಿದೆ
ಹೀಗೇ ಬರೆಯುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಹಳ್ಳಿ ಹೆಂಗಸಿಗೆ ಇವತ್ತಿಗೂ ಮಹಿಳಾ ದಿನಾಚರಣೆ ಎಂದು ಅಂತಲೇ ಗೊತ್ತಿಲ್ಲ . ಎಂದು ಅನ್ನುವುದೇ ಗ್ತೊತಿಲ್ಲದ್ದಿದ ಮೇಲೆ ಯಾಕೆ ಅನ್ನೋದು ಗೊತ್ತಿರುವ ಎಳ್ಳಷ್ಟೂ ಸಾಧ್ಯತೆಯಿಲ್ಲ. ತಮ್ಮ ಹಕ್ಕಿಗೆ ಅಂಗಲಾಚುವ ಪರಿಸ್ಥಿತಿ ತಪ್ಪಿಸುವ, ಶೋಷಣೆ ಹತ್ತಿಕ್ಕಲು ಪಣ ತೊಡುವ ದಿನ ಇದಾಗಲಿ ಅನ್ನೋದು ಅಂತರರಾಷ್ಟ್ರೀಯ ಮಹಿಳಾ ದಿನದ ಉದ್ದಿಶ್ಯ. ಜೊತೆಗೆ ಈಗ ಮಹಿಳೆಯರ ಸ್ಥಿತಿಯಲ್ಲಿ ಒಂದಿಷ್ಟು ಸುಧಾರಣೆ ಅಂತ ಆಗಿದ್ದರೆ, ಅದಕ್ಕೆ ನಾಂದಿ ಹಾಡಿದ 1957ರ ಮಾರ್ಚ್‌ 8ನ್ನು ಮೆಲುಕು ಹಾಕುವ ದಿನವಿದು.

ಹೊಲದ ಪೈರಿಗೆ ಕೈಹಚ್ಚಿ ಹೆಚ್ಚು ಕೂಲಿ ಕೇಳುವ ಯೋಚನೆಯನ್ನೇ ಮಾಡದ ಹೆಂಗಸೊಂದು ಕಡೆ. ಇದು ತನ್ನ ದಿನ ಎಂದು ಗಂಡ, ಮಕ್ಕಳು, ಸ್ನೇಹಿತರಿಗೆ ತಾಕೀತು ಮಾಡಿ, ಪಿಡ್‌ಜಾ- ನೂಡಲ್ಸ್‌ ಸವಿಯುವ ಹೆಣ್ಣು ಇನ್ನೊಂದು ಕಡೆ. ವಾಸ್ತವ ಅಂದರೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ಈ ಇಬ್ಬರೂ ಹೆಂಗಸರಿಗೆ ಗೊತ್ತಿಲ್ಲ.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+