ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ಸರ್ಕಾರಿ ಸ್ವಾಮ್ಯದ ಉದ್ದಿಮೆಗಳುಪುನಶ್ಚೇತನಕ್ಕೆ ಅರ್ಹವಲ್ಲ : ಕೃಷ್ಣ

By Staff
|
Google Oneindia Kannada News

ಬೆಂಗಳೂರು : ಸರಕಾರಿ ಸ್ವಾಮ್ಯದ ಬಹುತೇಕ ಉದ್ದಿಮೆಗಳು ನಷ್ಟದಲ್ಲಿದ್ದು, ಅವುಗಳನ್ನು ಮುಚ್ಚುವ ಇಲ್ಲವೆ ಖಾಸಗೀಕರಣ ಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಿ ಚಿಂತಿಸಿದೆ. ಆದರೆ, ಈ ಉದ್ದಿಮೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಮಾ.13ರಂದು ಧರಣಿ ನಡೆಸುವುದಾಗಿ ಪ್ರಕಟಿಸಿವೆ.

ಈ ಸಂಬಂಧ ವಿಧಾನ ಪರಿಷತ್ತಿನಲ್ಲಿ ವಿಷಯ ಪ್ರಸ್ತಾಪವಾದಾಗ ಉತ್ತರ ನೀಡಿದ ಮುಖ್ಯಮಂತ್ರಿಗಳು ನಷ್ಟದ ಉದ್ದಿಮೆಗಳ ಸ್ಥಿತಿಗತಿಯ ಅಧ್ಯಯನಕ್ಕೆ ಪದ್ಮನಾಭ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಆ ವರದಿ ಬಂದ ಬಳಿಕ, ಉದ್ದಿಮೆಗ ಪುನಶ್ಚೇತನ ಇಲ್ಲವೇ ಖಾಸಗೀಕರಣ ಪ್ರಕ್ರಿಯೆಯ ಯೋಚನೆ ಮಾಡಲಾಗುವುದು ಎಂದು ತಿಳಿಸಿದರು.

ಸ್ವಯಂ ನಿವೃತ್ತಿಗೆ 160 ಕೋಟಿ ಬೇಕು: ರಾಜ್ಯದ 15 ಸಾರ್ವಜನಿಕ ವಲಯದ ಉದ್ದಿಮೆಗಳು ಪುನಶ್ಚೇತನ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದೂ ಕೃಷ್ಣ , ಬಿ.ಎಲ್‌. ಶಂಕರ್‌ ಅವರ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು. ಈ ಉದ್ದಿಮೆಗಳಲ್ಲಿ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತರಲು 166 ಕೋಟಿ ರುಪಾಯಿಗಳ ಅಗತ್ಯವಿದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗಿಯವರಿಗೆ ಒಪ್ಪಿಸುವಾಗ ಷೇರು ಮೌಲ್ಯವನ್ನು ಮಾರುಕಟ್ಟೆಯ ದರವನ್ನು ಆಧರಿಸಿ ನಿರ್ಧರಿಸಲಾಗುವುದೂ ಎಂದೂ ಕೃಷ್ಣ ತಿಳಿಸಿದರು.

ನಿರುಪಯುಕ್ತ ಇಲ್ಲವೇ ರೋಗಗ್ರಸ್ಥವಾಗಿರುವ 15 ಸಾರ್ವಜನಿಕ ಉದ್ದಿಮೆಗಳಲ್ಲಿ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತರುವುದು ಅನಿವಾರ್ಯವಾಗಿದೆ ಎಂದೂ ಅವರು ಪರಿಷತ್ತಿನಲ್ಲಿ ತಿಳಿಸಿದರು. ಈ ಸಂಬಂಧ ಸರಕಾರ ಚಿಂತಿಸುತ್ತಿದೆ ಎಂದೂ ಹೇಳಿದರು. ಮಾರ್ಚ್‌ ಅಂದ್ಯದೊಳಗೇ ಎರಡು ಉದ್ದಿಮೆಗಳನ್ನು ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X