Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಎಲ್ಲರೊಂದಿಗೆ ನಿಮ್ಮ ಗೆಲುವಿನ ಬಗ್ಗೆ ಅತಿಯಾಗಿ ಮಾತನಾಡಿದರೆ ಕೆಟ್ಟ ಮನುಷ್ಯ ಅಂತ ಅನಿಸಿಕೊಳ್ಳುವುದಿಲ್ಲವೇ ? ಸುಮ್ಮನೇ ಬೇಜಾರಾದರೆ ಒಂದು ಸಿನೆಮಾ ನೋಡಬಾರದೇಕೆ ?

ವೃಷಭ :ನೀವು ಮಾಡುವ ಕೆಲಸದ ಬಗ್ಗೆ ನೀರಸ ಮನೋಭಾವ ಬೇಡ. ಪ್ರೀತಿಯಿಂದ ಆ ಕೆಲಸವನ್ನು ಹಚ್ಚಿಕೊಳ್ಳಿ. ಆಗ ಖುಷಿ ತಂತಾನೇ ನಿಮ್ಮ ಬಳಿ ಬರುತ್ತದೆ. ಮನೆಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಪೇಚಾಡುತ್ತೀರಿ.

ಮಿಥುನ : ಓದು, ಅಧ್ಯಯನಗಳಿಂದ ವಿಮುಖರಾಗಿ ದಿನಗಳಾಯಿತು. ಸ್ನೇಹಿತರೊಂದಿಗೆ ಸುಮ್ಮನೇ ತಗಾದೆ ಮಾಡಿ ಜಗಳ ಕಾಯುವ ಆಸೆಯನ್ನು ತಡೆ ಹಿಡಿಯಿರಿ.

ಕಟಕ : ಆಫೀಸಿನಲ್ಲಿ ಮೇಲಧಿಕಾರಿಗಳ ಪ್ರಶಂಸೆಯಿಂದ ಮನಸ್ಸಿನಲ್ಲಿದ್ದ ಬೇಜಾರನ್ನೆಲ್ಲಾ ಮರೆಯುತ್ತೀರಿ. ವೈಯಕ್ತಿಕ ಕೆಲಸಗಳು ಬಾಕಿ ಉಳಿದು ಜಮಾ ಆಗುತ್ತಿರುವುದರಿಂದ ಹೆದರಿಕೆ ಅಗತ್ಯ ಇಲ್ಲ.

ಸಿಂಹ : ಧನಲಾಭವಿದೆ. ಆದರೆ ಮನೆಯಲ್ಲಿನ ಖರ್ಚು ವೆಚ್ಚಗಳು ಹೆಚ್ಚಾಗುತ್ತಿರುವುದು ನಿಧಾನಕ್ಕೆ ನಿಮ್ಮ ಗಮನಕ್ಕೆ ಬರುತ್ತಿರುವುದರಿಂದ ತುಸು ಗಲಿಬಿಲಿಗೊಳ್ಳಲಿದ್ದೀರಿ. ಸುಮ್ಮನೇ ಚಿಂತೆ ಯಾಕೆ? ಎಲ್ಲವೂ ಸರಿ ಹೋಗುತ್ತದೆ.

ಕನ್ಯಾ : ನಿಮ್ಮ ಸಂಗಾತಿಗೆ ನಿಮ್ಮ ಸಾನ್ನಿಧ್ಯ ಅಗತ್ಯ ಎನಿಸಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತೀರಿ. ಆದರೆ ಇದುವೇ ಕ್ರುಷಿಯಲ್‌ ಟೈಮ್‌.

ತುಲಾ : ಇಂದು ಗೆಲುವು ಎಂಬುದು ನಿಮ್ಮ ಕಿಸೆಯಿಂದ ಆಚೆ ಹೋಗುವುದಿಲ್ಲ. ಆದ್ದರಿಂದ ಬಿಡುವಿರದ ಕೆಲಸಗಳ ನಡುವೆಯೂ ತುಂಬ ಉಲ್ಲಸಿತರಾಗಿರುತ್ತೀರಿ. ಸ್ನೇಹಿತರನ್ನು ಮರೆಯಬೇಡಿ.

ವೃಶ್ಚಿಕ : ಆರೋಗ್ಯ ಸುಧಾರಿಸಿಕೊಂಡು ಖುಷಿಯಾಗಿದ್ದೀರಷ್ಟೇ. ಧನಲಾಭದ ನಿರೀಕ್ಷೆ, ಕನಸುಗಳು ಸದ್ಯಕ್ಕೆ ದೂರವಿದ್ದರೇ ನೆಮ್ಮದಿ. ಮುಂದೊಂದು ದಿನ ಅಚಾನಕ್‌ ಖುಷಿ ನಿಮ್ಮ ಬಳಿ ಬರಲಿದೆ.

ಧನಸ್ಸು : ಇವತ್ತು ನೀವು ದೇವರ ಕಾರ್ಯಗಳತ್ತ ಹೆಚ್ಚು ಗಮನಕೊಡುತ್ತೀರಿ. ಮನೆ ಮಂದಿಯೆಲ್ಲಾ ಒಂದು ಕಡೆ ಸೇರುವುದರಿಂದ ಮನೆಯಲ್ಲಿ ಸಂಭ್ರಮ ತುಂಬಿರುತ್ತದೆ. ಹಾಗೆ ಜೇಬು ತೂತಾಗಿರುತ್ತದೆ.

ಮಕರ : ಮನೆಯ ನೆನಪು ಕಾಡಿದರೆ ಸದ್ಯಕ್ಕಂತೂ ಯಾವ ದಾರಿಯೂ ಇಲ್ಲ. ಕಡಿಮೆ ಹಣದಲ್ಲಿ ಬದುಕುವುದು ನಿಮಗೇನೂ ಹೊತಸತಲ್ಲವಾದ್ದರಿಂದ ಆರಾಮವಾಗಿರುತ್ತೀರಿ.

ಕುಂಭ : ಷೇರು ವ್ಯವಹಾರಗಳಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳಬೇಕೆಂದಿಲ್ಲ. ನಿಮ್ಮ ಜೇಬಿಗೇನೂ ಸದ್ಯಕ್ಕೆ ಕತ್ತರಿ ಬೀಳುವ ಲಕ್ಷಣ ಇಲ್ಲ. ಆಫೀಸಿನಲ್ಲಿ ಸಹೋದ್ಯೋಗಿಗಳ ನೆರವಿನಿಂದ ಎಲ್ಲ ಕೆಲಸಗಳು ಸಸೂತ್ರವಾಗಿ ನಡೆಯುತ್ತದೆ.

ಮೀನ : ನಿಮ್ಮದೇ ಕಾರುಬಾರು ನಡೆಯುವ ಕಾಲ ಬಂದಿದೆ. ಸಜ್ಜಾಗಿರಿ. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನಿಮಗೆ ಅನುಕೂಲವಾಗಿರುವಂತೆ ನೋಡಿಕೊಂಡಿರುವುದು ಅಗತ್ಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+