Get Updates
Get notified of breaking news, exclusive insights, and must-see stories!

ಪ್ರತಿಭಾ ಪಲಾಯನ : ಸಚಿವ ಪ್ರಮೋದ್‌ ಮಹಾಜನ್‌ ಸಮರ್ಥನೆ

ನವದೆಹಲಿ : ಭಾರತದ ಸಾಫ್ಟ್‌ವೇರ್‌ ತಂತ್ರಜ್ಞರು ಭಾರತದಲ್ಲಿ ಪರಿಣತಿ ಪಡೆದು ವಿದೇಶಕ್ಕೆ ಹಾರುತ್ತಿರುವುದು ಪ್ರತಿಭಾ ಪಲಾಯನ ಎಂದು ಬಣ್ಣಿಸುವುದನ್ನು ನಾನು ಒಪ್ಪುವುದಿಲ್ಲ ಎಂದಿರುವ ಕೇಂದ್ರ ಸಚಿವ ಪ್ರಮೋದ್‌ ಮಹಾಜನ್‌, ನಮ್ಮ ಕಂಪ್ಯೂಟರ್‌ ಎಂಜಿನಿಯರ್‌ಗಳು ರಾಷ್ಟ್ರದ ಹೆಮ್ಮೆಯನ್ನು ವಿಶ್ವಾದ್ಯಂತ ಸಾರುತ್ತಿದ್ದಾರೆ ಎಂದು ಹೇಳುವ ಮೂಲಕ ಈ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, ವಿಶ್ವದ ಕಂಪ್ಯೂಟರ್‌ ಕ್ಷೇತ್ರದಲ್ಲಿ ಭಾರತದ ಶೇಕಡ 20ಕ್ಕೂ ಹೆಚ್ಚು ಎಂಜಿನಿಯರ್‌ಗಳಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಅವರು ಭಾರತದ ಪ್ರತಿಭೆ ಎಷ್ಟೆಂಬುದನ್ನು ವಿಶ್ವಕ್ಕೆ ತೋರಿಸುತ್ತಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ಹೆಚ್ಚಿನ ವೇತನ, ಸೌಲಭ್ಯಗಳ ಆಕರ್ಷಣೆಯಿಂದ ನಮ್ಮ ಪ್ರತಿಭೆಗಳು ದೇಶದ ಹೊರಗೆ ತಮ್ಮ ಕೌಶಲವನ್ನು ಉಪಯೋಗಿಸುತ್ತಿದ್ದಾರೆ ಎನಿಸಿದರೂ, ಭಾರತದಲ್ಲಿ ತಂತ್ರಜ್ಞಾನ ಬಳಕೆಯ ಸೂಕ್ತ ವೇದಿಕೆ ಸಿದ್ಧವಾದೊಡನೆ ಅವರೆಲ್ಲಾ ದೇಶಕ್ಕೆ ಮರಳುತ್ತಾರೆ. ಅವರ ಸೇವೆ ರಾಷ್ಟ್ರಕ್ಕೂ ಲಭ್ಯವಾಗಲಿದೆ ಎಂದರು.

ಭಾರತೀಯ ಪ್ರತಿಭೆಗಳು ಇತರ ರಾಷ್ಟ್ರಗಳಲ್ಲಿ ತಮ್ಮ ಪ್ರಭುತ್ವ ಸಾಧಿಸುತ್ತಿದ್ದಾರೆ. ಇದರಿಂದ ಭಾರತಕ್ಕೆ ನಷ್ಟ ಉಂಟಾಗುತ್ತಿದೆ ಎಂಬುದನ್ನು ತಾವು ಒಪ್ಪಲು ಸಿದ್ಧರಿಲ್ಲ ಎಂದರು. ಪ್ರಸಕ್ತ ಸಂದರ್ಭದಲ್ಲಿ ಭಾರತದಲ್ಲಿ ಇನ್ನೂ ಹೆಚ್ಚಿನ ಕಂಪ್ಯೂಟರ್‌ ತಂತ್ರಜ್ಞರ ಅಗತ್ಯ ಇದ್ದು, ಇದಕ್ಕಾಗಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಕಂಪ್ಯೂಟರ್‌ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಪ್ರವೇಶ ಸಂಖ್ಯೆಯನ್ನು ಎರಡರಷ್ಟು ಹೆಚ್ಚಿಸಲಾಗುವುದು ಎಂದ ಮಹಾಜನ್‌ ತಾಂತ್ರಿಕ ಕಾಲೇಜುಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದರು. ಭಾರತದ ಕಂಪ್ಯೂಟರ್‌ ತಂತ್ರಜ್ಞರಿಗೆ ವಿದೇಶಗಳಲ್ಲಿ ಬೇಡಿಕೆಯಿರುವುದು ಹೆಮ್ಮೆಯ ಸಂಗತಿ ಎಂದೂ ಅವರು ಹೇಳಿದರು.

ಬುಧವಾರವಷ್ಟೇ ಕಂಚಿ ಕಾಮಕೋಟಿ ಪೀಠವು ಭಾರತೀಯತೆ ಹಾಗೂ ಭಾರತೀಯ ಸಂಸ್ಕೃತಿಯಾಂದಿಗೆ ಮಾಹಿತಿ ತಂತ್ರಜ್ಞಾನ ಪರಿಣತಿ ನೀಡಲು ತಂತ್ರಜ್ಞಾನ ನಗರಿ ಸ್ಥಾಪಿಸುವುದಲ್ಲದೆ, ಪ್ರತಿಭಾ ಪಲಾಯನ ತಡೆಯಲು ವಿನೂತನ ಕಾರ್ಯಕ್ರಮ ಪ್ರಕಟಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

(ಇನ್‌ಫೋ ವರದಿ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+