Get Updates
Get notified of breaking news, exclusive insights, and must-see stories!

ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿಬೆಂಕಿ : 4 ಕೋಟಿ ರು. ಸಕ್ಕರೆ ಭಸ್ಮ

ಮೈಸೂರು : ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ರಾತ್ರಿ 8-30ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಾಲ್ಕು ಕೋಟಿ ರೂಪಾಯಿ ಮೌಲ್ಯದ ಸುಮಾರು 35 ಸಾವಿರ ಸಕ್ಕರೆ ಚೀಲಗಳು ಭಸ್ಮವಾಗಿವೆ. ಯಾವುದೇ ಜೀವ ಹಾನಿಯಾಗಿರುವ ವರದಿಯಾಗಿಲ್ಲ. ಆದರೆ, ನಷ್ಟದ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಶಾರ್ಟ್‌ ಸರ್ಕ್ಯುಟ್‌ನಿಂದ ಈ ಬೆಂಕಿ ಆಕಸ್ಮಿಕ ಸಂಭವಿಸಿದೆ ಎಂದು ಶಂಕಿಸಲಾಗಿದ್ದರೂ, ಸರಿಯಾದ ಕಾರಣ ತಿಳಿದುಬಂದಿಲ್ಲ. ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ. ಕೆ. ಶ್ರೀವಾಸ್ತವ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಐದು ಅಗ್ನಿ ಶಾಮಕ ವಾಹನಗಳು ಕೂಡಲೇ ಸ್ಥಳಕ್ಕೆ ಧಾವಿಸಿ, ಸತತ ಐದು ಗಂಟೆಗಳ ಕಾಲ ಶ್ರಮಪಟ್ಟರೂ ಬೆಂಕಿ ಪೂರ್ತಿಯಾಗಿ ಆರಿಲ್ಲ . ಸಕ್ಕರೆ ಮೂಟೆಗಳ ಒಳಗೆ ಇನ್ನೂ ಬೆಂಕಿ ಹೊಗೆಯಾಡುತ್ತಿದೆ ಎಂದು ಶಂಕಿಸಲಾಗಿದೆ. ಯಂತ್ರೋಪಕರಣಳಿಗೆ ಆಗಿರುವ ನಷ್ಟದ ಪ್ರಮಾಣ ಇನ್ನೂ ತಿಳಿದು ಬಂದಿಲ್ಲ. ಇತ್ತೀಚೆಗಷ್ಟೇ ಕಾರ್ಖಾನೆಯು ವಿಸ್ತರಣೆಗೊಂಡಿತ್ತು.

1959ರಲ್ಲಿ ಸ್ಥಾಪನೆಯಾದ ಪಾಂಡವಪುರ ಸಕ್ಕರೆ ಕಾರ್ಖಾನೆ ಪ್ರಸ್ತುತ 54 ಕೋಟಿ ರೂಪಾಯಿ ಸಾಲದ ಹೊರೆಯನ್ನು ಹೊತ್ತು ಕೊಂಡಿದೆ. ಆರಂಭದ ದಿನಗಳಲ್ಲಿ 800 ಟನ್‌ ಕಬ್ಬು ಅರೆಯುತ್ತಿದ್ದ ಕಾರ್ಖಾನೆಯ ಸಾಮರ್ಥ್ಯ ಇತ್ತೀಚೆಗೆ 3.35 ಲಕ್ಷ ಟನ್‌ಗೇರಿದೆ. ನಷ್ಟದಲ್ಲಿ ನಡೆಯುತ್ತಿರುವ ಕಾರ್ಖಾನೆಯಲ್ಲಿ ಪ್ರತಿ ದಿನ ಒಂದಲ್ಲ ಒಂದು ಕಾರಣಕ್ಕಾಗಿ ಮುಷ್ಕರಗಳು ನಡೆಯುತ್ತಲೇ ಇರುತ್ತದೆ. ಕಾರ್ಖಾನೆಯ ಗೋದಾಮಿನಲ್ಲಿ 40 ಕೋಟಿ ರೂಪಾಯಿ ಮೌಲ್ಯದ ಸಕ್ಕರೆ ದಾಸ್ತಾನಿತ್ತು.

(ಮೈಸೂರು ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+