Get Updates
Get notified of breaking news, exclusive insights, and must-see stories!

ಸಂಬಂಧ ಬೇಡವೆಂದರು, ಆತ್ಮಹತ್ಯೆ ಮಾಡಿಕೊಂಡವರು ನಾಲ್ವರು

ಬೇಲೂರು : ಮಗಳು ಇಷ್ಟಪಟ್ಟ ಹುಡುಗನನ್ನು ಒಪ್ಪದ ಅಪ್ಪ - ಅಮ್ಮ ಇಬ್ಬರು ಗಂಡು ಮಕ್ಕಳೊಂದಿಗೆ ಬದುಕನ್ನು ಕೊನೆಗೊಳಿಸಿಕೊಂಡಿರುವ ಕರುಣಾಜನಕ ಘಟನೆ ತಾಲ್ಲೂಕಿನ ದೊಡ್ಡ ಸಾಲಾವರ ಗ್ರಾಮದಲ್ಲಿ ವರದಿಯಾಗಿದೆ.

ಪ್ರಕಾಶ್‌(50) ಹಾಗೂ ರೇಣುಕಾ(48) ದಂಪತಿಗಳ ಮುದ್ದಿನ ಮಗಳು ಇಂಪೂ. ವಿಶ್ವನಾಥ (25) ಮತ್ತು ನಟರಾಜ (23) ಇಂಪೂವಿನ ಅಣ್ಣಂದಿರು. ಇಂಪೂವಿಗೆ ಮಾಧವೇಗೌಡರ ಮಗ ಸಂತೋಷನ ಮೇಲೆ ಮನಸ್ಸು . ಆದರೆ, ಇಂಪೂವಿನ ಮನೆಯವರ ಮನಸ್ಸನ್ನು ಸಂತೋಷ್‌ ಗೆಲ್ಲಲಿಲ್ಲ . ಮನೆಯವರೆಲ್ಲರೂ ಮದುವೆಯನ್ನು ಒಕ್ಕೊರಲಿನಿಂದ ವಿರೋಧಿಸಿದರು.

ಪ್ರೇಮದ ಸುಳಿಯಲ್ಲಿ ದ್ದ ಇಂಪೂ ತನ್ನ ನಿರ್ಧಾರವನ್ನು ಬದಲಿಸಿಕೊಳ್ಳಲು ಸಿದ್ಧಳಿರಲಿಲ್ಲ . ಊರಿನಲ್ಲಿ ಮರ್ಯಾದಸ್ಥನೆಂದೇ ಹೆಸರಾದ ಅಪ್ಪ ಮಗಳನ್ನು ಮನೆಯಿಂದ ಹೊರಹಾಕಿದ. ಮಗಳೇನೋ ಮನ ಮೆಚ್ಚಿದವನ ಮನೆ ಸೇರಿಕೊಂಡಳು. ಆ ಮನೆಯಲ್ಲಿ ಯಾವ ತಕರಾರುಗಳೂ ಇರಲಿಲ್ಲ . ಇತ್ತ ಅವಮಾನದಿಂದ ಕುದ್ದ ಇಂಪೂ ಮನೆಯವರು ಮಂಗಳವಾರ ರಾತ್ರಿ ವಿಷ ಸೇವಿಸಿದರು. ಸಾಲದೆಂಬಂತೆ ಮನೆಯ ತೊಲೆಗೆ ನೇಣು ಹಾಕಿಕೊಂಡರು.

ಬುಧವಾರ ಬೆಳಿಗ್ಗೆ ಬಹಳ ಹೊತ್ತಾದರೂ ಮನೆ ಬಾಗಿಲು ತೆರೆಯದ ಕಾರಣ, ಅನುಮಾನಗೊಂಡ ಅಕ್ಕಪಕ್ಕದ ಮನೆಯವರ ಕುತೂಹಲದ ಕಣ್ಣಿಗೆ ಕಂಡದ್ದು ತೊಲೆಯಲ್ಲಿ ತೂಗುತ್ತಿದ್ದ ಪ್ರಕಾಶ್‌, ಅವರ ಪತ್ನಿ ರೇಣುಕಾ ಹಾಗೂ ದಂಪತಿಗಳ ಇಬ್ಬರು ಮಕ್ಕಳು ವಿಶ್ವನಾಥ, ನಟರಾಜ. ಅರೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+