ಅಲಹಾಬಾದ್ಗೆ ಮರುನಾಮಕರಣ:ಅದಿನ್ನು ತೀರ್ಥರಾಜ್ ಪ್ರಯಾಗ್
ಲಖನೌ : ಬಾಂಬೆ ಮುಂಬಯಿಯಾಯಿತು. ಮದ್ರಾಸ್ ಚೆನ್ನೈ ಆಯಿತು. ಮೊನ್ನೆಯಷ್ಟೇ ಕಲ್ಕತ್ತಾ ಕೋಲ್ಕತಾ ಎಂದು ಹೆಸರು ಬದಲಾಯಿಸಿಕೊಂಡಿತು. ಈಗ ಈ ಯಾದಿಗೆ ಪ್ರಯಾಗ ನಗರಿ ಎಂದೇ ಹೆಸರಾದ ಅಲಹಾಬಾದ್ ಹೊಸ ಸೇರ್ಪಡೆ. ಇನ್ನು ನೀವು ಅಲಹಾಬಾದ್ ಅನ್ನೋ ಬದಲು ತೀರ್ಥರಾಜ್ ಪ್ರಯಾಗ್ ಅನ್ನಬೇಕು.
ಮಹಾಕುಂಭಮೇಳದ ನೆನಪಿನ್ನೂ ಹಸುರಾಗಿದೆ. ಈ ಮಹಾ ಮಾನವ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಉತ್ತರ ಪ್ರದೇಶದ ಮುಖ್ಯಮಂತ್ರಿ ರಾಜನಾಥ ಸಿಂಗ್ ಅವರನ್ನು ಬುಧವಾರ ಸ್ಥಳೀಯ ಸಾಧು- ಸಂತರು ಸನ್ಮಾನಿಸಿದರು. ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಅಲಹಾಬಾದನ್ನು ತೀರ್ಥರಾಜ್ ಪ್ರಯಾಗ್ ಅಂತ ಮರುನಾಮಕರಣ ಮಾಡುವುದಾಗಿ ಘೋಷಿಸಿದರು. ಮಾಜಿ ಶಂಕರಾಚಾರ್ಯ ಸತ್ಯವಿತ್ರಾನಂದ ಗಿರಿ ಸ್ವಾಮಿ ಹೊಸ ಹೆಸರನ್ನು ಸೂಚಿಸಿದ್ದು, ತಾವು ಅವರ ಸಲಹೆಗೆ ತಕ್ಷಣ ಸ್ಪಂದಿಸಿರುವುದಾಗಿ ಮುಖ್ಯಮಂತ್ರಿ ಹೇಳಿದರು.
ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಸ್ಥಾನ ಅಲಹಾಬಾದ್ ಆದ್ದರಿಂದ ಅದಕ್ಕೆ ಈ ಪವಿತ್ರ ಹೆಸರನ್ನು ಸೂಚಿಸಲಾಗಿದೆ. ಪ್ರಯಾಗ ಅಂದರೆ ಪವಿತ್ರ. ಹೆಸರಿನ ಮೊದಲ ಪದ ತನ್ನಲ್ಲೇ ಅರ್ಥ ಹುದುಗಿಸಿಟ್ಟುಕೊಂಡಿದೆ. ಅಮೃತ ಬಿಂದು ಸೇರಿದೆ ಎನ್ನಲಾದ ಈ ತ್ರಿವೇಣಿ ಸಂಗಮಕ್ಕೆ ಹೊಸ ಹೆಸರು ಇಡುವುದು ಸರಿಯೋ, ತಪ್ಪೋ ನೀವೇ ಹೇಳಿ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications