Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ನಿಮ್ಮ ಲಕ್‌ ಚೆನ್ನಾಗಿರುವುದರಿಂದ ದಿನ ವಾರ ನಕ್ಷತ್ರಗಳ ಹಂಗಿಲ್ಲದೆ ಇಂದು ಎಲ್ಲ ಕೆಲಸಗಳಲ್ಲಿಯೂ ನೀವು ಮುನ್ನುಗ್ಗಬಹುದು. ಸಂಗಾತಿಯಾಂದಿಗಿನ ವಿರಸಕ್ಕೆ ಇವತ್ತು ಫುಲ್‌ ಸ್ಟಾಪ್‌.

ವೃಷಭ :ಬೆಳಿಗ್ಗೆ ಕಾಡುವ ಸೋಮಾರಿತನವನ್ನು ಕಿತ್ತು ಹಾಕುವಲ್ಲಿ ನೀವು ಯಶಸ್ವಿಯಾದರೆ ಬಚಾವ್‌ ಆದಂತೆ. ದಿನವೆಲ್ಲಾ ಸಂಭ್ರಮದಲ್ಲಿ ಓಡಾಡುತ್ತೀರಿ. ಮನಸ್ಸು ಉಲ್ಲಾಸವಾಗಿರುವಾಗ ಖುಷಿಯಾಗಿರಲು ಕಾರಣ ಬೇಕೆ?

ಮಿಥುನ : ನಿಮ್ಮ ಧೈರ್ಯದ ಮೇಲೆ ನಿಮ್ಮ ಆರೋಗ್ಯ ಅವಲಂಬಿಸಿದೆ ಅಂತ ತಿಳಿದಿರುವುದರಿಂದ ಹೆದರಿಕೆಗೆ ಅವಕಾಶ ಇಲ್ಲ. ನಿಮ್ಮ ಬಂಧುಗಳ ಕಾಳಜಿಯಿಂದ ಖುಷಿಯಾಗಿರುತ್ತೀರಿ.

ಕಟಕ : ಚೆಲುವು ಸೌಂದರ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಚರ್ಚೆ ತಪ್ಪು ದಾರಿಯಲ್ಲಿ ಸಾಗುತ್ತಿದೆ. ನಿಮ್ಮ ವಾದವನ್ನು ಬೆಂಬಲಿಸಲು ಸಾಕಷ್ಟು ಕಚ್ಚಾ ಸಾಮಾಗ್ರಿ ಇಲ್ಲದೆ ತಬ್ಬಿಬ್ಬಾಗುವ ಸಾಧ್ಯತೆ ಇದೆ. ಆದ್ದರಿಂದ ಸದ್ಯಕ್ಕೆ ಮೌನವಾಗಿರಿ.

ಸಿಂಹ : ನೀವು ಆಟೋಟಗಳಲ್ಲಿ ಭಾಗವಹಿಸುವವರಾ ? ಇವತ್ತು ಹಿಂಜರಿಯಲು ನಿಮ್ಮ ಬಳಿ ಕಾರಣಗಳೇ ಇರುವುದಿಲ್ಲ. ಯಾಕೆಂದರೆ ಇವತ್ತು ಗೆಲುವು ನಿಮ್ಮ ಹತ್ತಿರ ಇದೆ.

ಕನ್ಯಾ : ಆಫೀಸಿನಲ್ಲಿ ಕೆಲಸ ರಾಶಿ ಬಿದ್ದಿರುವುದರಿಂದ ಬೇಜಾರು ಮಾಡಿಕೊಳ್ಳುತ್ತೀರಿ. ಆದರೆ ಅದರ ಕ್ರೆಡಿಟ್‌ ಸದ್ಯದಲ್ಲಿಯೇ ನಿಮ್ಮ ಪಾಲಾಗಲಿದೆ.

ತುಲಾ : ಸ್ನೇಹಿತರೊಂದಿಗೆ ಜಗಳ ಕಾದರೆ ಒಂದು ಒಳ್ಳೆಯ ಊಟ ಮಿಸ್‌ ಮಾಡಿಕೊಳ್ಳುತ್ತೀರಿ. ಗೃಹ ಕೃತ್ಯಗಳಲ್ಲಿ ಗೆಲುವಿದೆ. ಮನೆಯಲ್ಲಿ ಮಕ್ಕಳು ಮಂದಿಯಾಂದಿಗೆ ಸಂತಸ ಹಂಚಿಕೊಳ್ಳುವುದೆಂದರೆ ಶುಭ ತಾನೇ ?

ವೃಶ್ಚಿಕ : ಪ್ರಯಾಣ ಹೊರಟ ಬಂಧುಗಳ ಆಗಮನದಿಂದ ಖುಷಿಯಾಗಿರುತ್ತೀರಿ. ಸ್ನೇಹಿತರು ಆರೋಗ್ಯವಂತರಾಗುತ್ತಿರುವುದರಿಂದ ನೆಮ್ಮದಿ ಕೂಡ.

ಧನಸ್ಸು : ಷೇರು ವ್ಯವಹಾರಗಳಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳಬೇಕೆಂದಿಲ್ಲ. ನಿಮಗೆ ಒಳ್ಳೆಯದಾಗಲಿದೆ. ಕೋರ್ಟ್‌ ವ್ಯವಹಾರಗಳತ್ತ ಮಾತ್ರ ಈಗ ಹೆಚ್ಚಿನ ಗಮನ ಕೊಡುವುದು ಬೇಡ.

ಮಕರ : ಹೆಚ್ಚು ಸ್ವಾಭಿಮಾನ ಇದ್ದರೆ ಅದರಿಂದ ನಿಮಗೇ ಹಾನಿಯಾಗುವುದು. ಸೋಲುವುದನ್ನು ಕಲಿಯಬೇಕಲ್ಲವೇ ? ಆರೋಗ್ಯ ಸುಧಾರಿಸಿಕೊಳ್ಳಿ.

ಕುಂಭ : ಮನೆಯಲ್ಲಿ ಶುಭ ಕಾರ್ಯವಿಟ್ಟುಕೊಂಡಿದ್ದೀರಿ. ಲಕ್ಷ್ಮಿ ಆರಾಧನೆಯಿಂದ ಒಳ್ಳೆಯದಾಗುತ್ತದೆ. ನಿಮ್ಮ ಆಫೀಸು ಕೆಲಸಗಳಲ್ಲಿ ಯಾವುದೇ ಏರುಪೇರಾಗುವುದಿಲ್ಲ.

ಮೀನ : ನೀವೊಡ್ಡಿದ ಸ್ಪರ್ಧೆಗೆ ಉತ್ತರ ಸಿಗುತ್ತಿದೆ. ದಂಗಾಗುವ ಸರದಿ ನಿಮ್ಮದು. ಹಣ ಕೈ ಬಿಡುತ್ತಿರುವುದರ ಬಗ್ಗೆ ಬೇಜಾರು ಬೇಡ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+