ಪ್ರತಿಭಾ ಪಲಾಯನ ತಡೆಯಲು ವಿನೂತನ ತಂತ್ರಜ್ಞಾನ ಪಾರ್ಕ್
ಬೆಂಗಳೂರು : ಯುವಜನರಿಗೆ ತಂತ್ರಜ್ಞಾನ ಪರಿಣತಿಯನ್ನು ನೀಡಿ ಅವರ ಸೇವೆ ಭಾರತಕ್ಕೇ ಲಭ್ಯವಾಗುವಂತೆ ಮಾಡುವ ಮಹತ್ತರ ಉದ್ದೇಶದ ವಿನೂತನ ಸಾಫ್ಟ್‌ವೇರ್ ನಗರಿಯಾಂದು ಕಾಂಚೀಪುರದ ಹೊರವಲಯದ ನೂರು ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ.
ಪ್ರಜ್ಞಾ ಎಂಬ ಹೆಸರಿನ 20 ಕೋಟಿ ರುಪಾಯಿ ವೆಚ್ಚದ ಈ ಸಾಫ್ಟ್‌ವೇರ್ ಪಾರ್ಕ್ ಯೋಜನೆಗೆ ಕಂಚಿ ಕಾಮಕೋಟಿ ಮಠ ಮತ್ತು ಇತರ 20 ಕಂಪನಿಗಳು ಒಪ್ಪಂದವೊಂದಕ್ಕೆ ಸಹಿ ಮಾಡಿವೆ. ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯರಾದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿಗಳು ಈ ವಿಷಯವನ್ನು ಬುಧವಾರ ಬೆಂಗಳೂರಿನಲ್ಲಿ ತಿಳಿಸಿದರು.
ಪ್ರತಿಭಾ ಪಲಾಯನ ತಡೆ : ಭಾರತೀಯತೆಯ ಮಹತ್ವ ಹಾಗೂ ಭಾರತಕ್ಕೆ ತಜ್ಞರ ಅಗತ್ಯವನ್ನು ಮನವರಿಕೆ ಮಾಡಿಸಿ, ಮಾಹಿತಿ ತಂತ್ರಜ್ಞಾನ ಪರಿಣತರ ಪ್ರತಿಭಾ ಪಲಾಯನವನ್ನು ತಡೆಯುವುದೇ ಈ ಕೇಂದ್ರದ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಇದಕ್ಕೆ ಅಗತ್ಯವಾದ ಎಲ್ಲ ಮೂಲ ಸೌಕರ್ಯಗಳು ಹಾಗೂ ಕಂಪನಿಗಳ ಕಾರ್ಯ ನಿರ್ವಹಣೆಗೆ ಅಗತ್ಯವಾದ ಹೈ ಸ್ಪೀಡ್ ಡೇಟಾ ಲಿಂಕ್‌ಗಳನ್ನೂ ಒದಗಿಸಲಾಗುವುದು ಎಂದರು.
ಈ ತಂತ್ರಜ್ಞಾನ ಪಾರ್ಕ್‌ನಲ್ಲಿ ಯುವ ಎಂಜಿನಿಯರ್‌ಗಳಿಗೆ ತಂತ್ರಜ್ಞಾನದ ಜತೆಗೆ ಭಾರತೀಯ ಸಂಸ್ಕೃತಿಯ ಪರಿಚಯವನ್ನೂ ಮಾಡಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು. ಪಾರ್ಕ್ ಒಳಗೆ ಇರುವ ಕಂಪನಿಗಳು ನಮ್ಮ ಪ್ರತಿಭೆಗಳು ವಿದೇಶಕ್ಕೆ ಹಾರುವುದಕ್ಕೆ ಇಂಬು ನೀಡುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಭಾರತದಲ್ಲಿ ತಮ್ಮ ಕಾರ್ಯಚಟುವಟಿಕೆ ಆರಂಭಿಸಲು ಇಚ್ಛಿಸುವ ಅನಿವಾಸಿ ಭಾರತೀಯ ಉದ್ಯಮಿಗಳಿಗೆ ಕೂಡ ಈ ತಂತ್ರಜ್ಞಾನ ನಗರಿಯಲ್ಲಿ ಅವಕಾಶ ಕಲ್ಪಿಸಲಾಗುವುದು. ನಮ್ಮ ಉದ್ದೇಶ ನಮ್ಮ ದೇಶದ ಪ್ರತಿಭೆಯ ಪ್ರಯೋಜನ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಮೀಸಲಾಗಿರಬೇಕು ಎಂಬುದೇ ಆಗಿದೆ ಎಂದೂ ಸ್ವಾಮೀಜಿ ತಿಳಿಸಿದರು.
ಸಾಫ್ಟ್‌ವೇರ್ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪದವೀಧರರಿಗೆ ತರಬೇತಿಯನ್ನೂ ನೀಡಲು ಮಠ ಮುಂದಾಗಿದ್ದು, ಇದು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಮಹದಾಶಯವನ್ನು ಹೊಂದಿದೆ ಎಂದರು. ತಮ್ಮ ಮಠದ ವತಿಯಿಂದ ಈಗಾಗಲೇ ವೈಜ್ಞಾನಿಕ ಸಂಶೋಧನಾ ಸಂಸ್ಥೆಯಾಂದನ್ನು ರಚಿಸಲಾಗಿದೆ ಎಂದೂ ಅವರು ಹೇಳಿದರು.
(ಯು.ಎನ್.ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications