Get Updates
Get notified of breaking news, exclusive insights, and must-see stories!

ಗಂಗೂಲಿ ಮನಸ್ಸಿನಲ್ಲಿರುವುದು ನಗ್ಮಾ ಅಲ್ಲ, ಈಡನ್‌ ಗಾರ್ಡನ್ಸ್‌

ಕೋಲ್ಕತಾ : ಗಂಗೂಲಿ ಖಂಡಿತ ಒತ್ತಡದಲ್ಲಿದ್ದಾರೆ. ಮಂಡಲಿ ಅಧ್ಯಕ್ಷರ ಇಲೆವೆನ್‌ ಪರ ಆ್ಯಸೀಸ್‌ ವಿರುದ್ಧದ 3 ದಿನಗಳ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅವರ ಪರದಾಟ ವ್ಯಕ್ತವಾಯಿತು. ಅವರು 40 ರನ್‌ ಗಳಿಸಿದರೂ, ಹೊರ ಹೋಗುವ ಚೆಂಡುಗಳನ್ನು ಕೆಣಕಿ ಆಪತ್ತಿಗೆ ಸಿಲುಕಿಕೊಳ್ಳುವ ಹಳೆ ಚಾಳಿ ಬಿಟ್ಟಿಲ್ಲ. ಅವರ ತೊಳಲಾಟ ಎಷ್ಟರಮಟ್ಟಿಗಿದೆ ಎಂದರೆ, ಕನಸಲ್ಲೂ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕಾಣುತ್ತಿದೆಯಂತೆ. ಏನೇ ಆಗಲಿ ತವರು ನೆಲದಲ್ಲಿ ಆಟ ಬಿಟ್ಟುಕೊಡಬಾರದು ಎಂಬ ಸುಯೋಧನ ಛಲ ಅವರದು.

ದೆಹಲಿಗೆ ಪ್ರಯಾಣ ಬೆಳೆಸುವ ಮುಂಚೆ ಗಂಗೂಲಿ ಈಡನ್‌ ಗಾರ್ಡನ್ಸ್‌ಗೆ ಭೇಟಿ ಇತ್ತಿದ್ದಾರೆ. ಪಿಚ್‌ ತಯಾರಿ ಮಾಡುತ್ತಿದ್ದ ಸಿಬ್ಬಂದಿಯನ್ನು ಮಾತನಾಡಿಸಿದ್ದಾರೆ. ಪಿಚ್‌ ಮೇಲಿರಿಸಿದ್ದ ಹೊದಿಕೆ ತೆಗೆಸಿ, ಅದರ ಮೇಲಿನ ಅಲ್ಲಲ್ಲಿನ ಹುಲ್ಲು ಹಾಸು ಕಂಡು ದಂಗಾಗಿದ್ದಾರೆ. ಇವು ಹೀಗೇ ಉಳಿಯುತ್ತವೋ, ಇಲ್ಲ ಕತ್ತರಿಸುತ್ತೀರೋ ಎಂದು ಸಿಬ್ಬಂದಿಯನ್ನು ಕೇಳಿದ್ದಾರೆ. ಸಿಬ್ಬಂದಿ, ನಮಗೆ ಗೊತ್ತಿಲ್ಲ. ಬಾಸ್‌ ಹೇಗೆ ಹೇಳುವರೋ ಹಾಗೆ ಮಾಡುತ್ತೇವೆ ಅಂದಿದ್ದಾರೆ. ಕತ್ತರಿಸೋದೇ ಒಳ್ಳೇದು ಅಂತ ಸ್ವಗತ ಹೇಳಿಕೊಂಡು ಗಂಗೂಲಿ ಪೆವಿಲಿಯನ್‌ಗೆ ವಾಪಸ್ಸಾಗಿದ್ದಾರೆ.

ಆ ಬಾಸ್‌ ಹೆಸರು ಪ್ರಬೀರ್‌ ಮುಖರ್ಜಿ. ಪಿಚ್‌ ನಿಮಾಣಗೊಳ್ಳುತ್ತಿರುವುದು ಈತನ ಉಸ್ತುವಾರಿಯಲ್ಲಿಯೇ. ಆದರೆ ಗಂಗೂಲಿ ಪಿಚ್‌ ವೀಕ್ಷಿಸಿದಾಗ ಪ್ರಬೀರ್‌ ಅಲ್ಲಿರಲಿಲ್ಲ. ಗಂಗೂಲಿ ಮುಖ ಈಗ ಆತಂಕದಿಂದ ತುಂಬಿದೆ. ಹಸಿರು ತುಂಬಿಕೊಂಡು ನಳನಳಸುತ್ತಿರುವ ಭಾರತದ ಕ್ರಿಕೆಟ್‌ ಮೆಕ್ಕಾ ಈಡನ್‌ ಗಾರ್ಡನ್ಸ್‌ನಲ್ಲಿ ಕೆಲ ದಿನಗಳ ಹಿಂದಷ್ಟೇ ಮಳೆ ಸುರಿದಿದೆ. ಹಿಮ ಬೀಳುವುದು ಇನ್ನೂ ನಿಂತಿಲ್ಲ. ಸಾಲದ್ದಕ್ಕೆ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್‌ ವಾ, ಟೆಸ್ಟ್‌ ಪಂದ್ಯಕ್ಕೆ ತಕ್ಕ ಪಿಚ್‌ ಎಂದು ಈಡನ್‌ನನ್ನು ವರ್ಣಿಸಿದ್ದಾರೆ.

ತಂಡ ಗೆಲ್ಲುವಂಥ ತಂತ್ರ ರೂಪಿಸುವುದು, ಖುದ್ದು ತಮ್ಮ ಆಟವನ್ನು ಉತ್ತಮ ಪಡಿಸಿಕೊಳ್ಳುವುದು ಗಂಗೂಲಿ ಮುಂದಿರುವ ಸವಾಲುಗಳು. ತಮ್ಮ- ನಗ್ಮಾ ಸಂಬಂಧವನ್ನು ಆಟದೊಂದಿಗೆ ತಾಳೆ ಹಾಕುತ್ತಿರುವುದು ಸರಿಯಲ್ಲ ಎಂದು ಸಾಬೀತು ಪಡಿಸುವುದೇ ಅವರ ಗುರಿ. ಈ ಕಾರಣ ಬಹು ದಿನಗಳ ಮುಂಚೆಯೇ ಗಂಗೂಲಿ ಪಿಚ್‌ ವೀಕ್ಷಿಸಿದ್ದಾರೆ. ಅಂಥಾ ಪಿಚ್‌ನಲ್ಲಿ ಹೇಗೆ ಆಟಬೇಕೆಂಬ ಲೆಕ್ಕಾಚಾರ ಈಗ ಅವರ ಮನದಲ್ಲಿ ರೂಪುಗೊಳ್ಳುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+