ಕರಳುಬೇನೆ ತಡೆಗೆ ಯುದ್ಧೋಪಾದಿಯಲ್ಲಿ ಕ್ರಮ - ಕೃಷ್ಣ ಅಭಯ
ಬೆಂಗಳೂರು : ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರಳುಬೇನೆ ನಿಯಂತ್ರಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿಧಾನಸಭೆಯಲ್ಲಿ ಬುಧವಾರ ಭರವಸೆ ಕೊಟ್ಟಿದ್ದಾರೆ.
ಶೂನ್ಯ ವೇಳೆಯಲ್ಲಿ ಸಂಯುಕ್ತ ಜನತಾದಳ ನಾಯಕ ಪಿ.ಜಿ.ಆರ್.ಸಿಂಧ್ಯ ಹಾಗೂ ಸುರೇಶ್ ಕುಮಾರ್ ಕೇಳಿದ ಪ್ರಶ್ನೆಗೆ ಕೃಷ್ಣ , ಜವಾಬಿನ ರೂಪದಲ್ಲಿ ಈ ಭರವಸೆ ಕೊಟ್ಟರು. ಈಗಾಗಲೇ ಸುಮಾರು 260 ಮಂದಿ ಕರಳುಬೇನೆ ಬಳಲಿಕೆಯಿಂದ ಆಸ್ಪತ್ರೆಗೆ ಸೇರಿದ್ದಾರೆ. ಇವರಲ್ಲಿ ಬಹುತೇಕರು ಕೊಳಗೇರಿ ನಿವಾಸಿಗಳು. ಕರಳುಬೇನೆ ಪೀಡಿತರ ಸಿಂಹಪಾಲು ಐಸೋಲೇಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ರೋಗ ಹರಡದಂತೆ ಯಾವ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದರು.
ಪೈಪಿನಲ್ಲಿನ ಒಡಕಿನ ಕಾರಣ ಕುಡಿಯುವ ನೀರಿಗೆ ಕೊಳಚೆ ನೀರು ಸೇರಿರುವ ಸಾಧ್ಯತೆಯಿದೆ. ಕುಡಿಯುವ ನೀರನ್ನು ಪರೀಕ್ಷೆಗಾಗಿ ಈಗಲೇ ಒಯ್ಯಲಾಗಿದೆ. ಕುಡಿಯುವ ನೀರಿಗೆ ಹೆಚ್ಚು ಕ್ಲೋರಿನ್ ಸೇರಿಸಲಾಗುತ್ತಿದೆ. ಜೊತೆಗೆ ಕರಳುಬೇನೆ ಪೀಡಿತ ಪ್ರದೇಶಗಳಲ್ಲಿ ತೆರೆದ ಜಾಗೆಗಳಲ್ಲಿ ಕೊಯ್ದ ಹಣ್ಣುಗಳ ಮಾರಾಟವನ್ನೂ ನಿಷೇಧಿಸಿದ್ದೇವೆ. ಇನ್ನೂ ಯಾವ ಯಾವ ಅಗತ್ಯ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಖಂಡಿತ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಕೃಷ್ಣ ಭರವಸೆ ಇತ್ತರು.
ವಿರೋಧ ಪಕ್ಷದ ಬಿಜೆಪಿಯ ಸದಸ್ಯರು ಬುಧವಾರವೂ ರೈತ ವಿರೋಧಿ ಸರ್ಕಾರವನ್ನು ಧಿಕ್ಕರಿಸಿ, ಕಲಾಪ ಬಹಿಷ್ಕರಿಸಿ ವಿಧಾನಸಭೆಯಿಂದ ಹೊರನಡೆದರು. ಕುಸಿದ ಧಾನ್ಯಗಳ ಬೆಲೆಯನ್ನು ಸುಧಾರಿಸಲು ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ ಎನ್ನುವುದು ಬಿಜೆಪಿ ಸದಸ್ಯರ ವಾದ.
ಧಾನ್ಯ ಖರೀದಿಗೆ ಆರ್‌ಬಿಐ ಸಾಕಷ್ಟು ದುಡ್ಡು ಕೊಡುತ್ತಿಲ್ಲ : ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಬೆಂಬಲ ಬೆಲೆ ಹಾಗೂ ಧಾನ್ಯ ಖರೀದಿ ಕುರಿತು ಶೂನ್ಯ ವೇಳೆಯಲ್ಲಿ ಎತ್ತಿದ ಪ್ರಶ್ನೆಗೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಬಿ.ಇನಾಂದಾರ್ ಉತ್ತರ ಕೊಟ್ಟರು- ಗೋದಾಮುಗಳ ಕೊರತೆ ಹಾಗೂ ಭಾರತೀಯ ಆಹಾರ ನಿಗಮಕ್ಕೆ ಧಾನ್ಯ ಖರೀದಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸಾಕಷ್ಟು ಹಣ ಕೊಟ್ಟಿಲ್ಲದಿರುವುದೇ ಧಾನ್ಯ ಖರೀದಿ ಸ್ಥಗಿತಗೊಳಿಸಲು ಕಾರಣ. ಸರ್ಕಾರ ಈಗಲೂ ಈ ಸಮಸ್ಯೆ ಹೋಗಲಾಡಿಸಲು ಶತಾಯ ಗತಾಯ ಯತ್ನಿಸುತ್ತಿದೆ.
ಇನಾಂದಾರ್ ಅವರ ಉತ್ತರಕ್ಕೆ ತೃಪ್ತರಾಗದ ಶೆಟ್ಟರ್, ಇದೇ ಮಂದಗತಿಯಲ್ಲಿ ಧಾನ್ಯ ಖರೀದಿ ಮುಂದುವರೆಯುತ್ತಿರಲಿ. ನಾಳೆ ಮಾರುಕಟ್ಟೆಗೆ ಇನ್ನಷ್ಟು ಬೆಳೆ ಬಂದು ಸೇರುತ್ತದೆ. ಈಗಿರುವ ಸಮಸ್ಯೆಗೆ ಇನ್ನಷ್ಟು ಸೇರ್ಪಡೆಯಾಗಿ ಸರ್ಕಾರ ಆಗೇನೂ ಮಾಡಲಾಗುವುದಿಲ್ಲ. ರೈತ ಕಣ್ಣೀರಲ್ಲಿ ಕೈತೊಳೆಯಬೇಕಾಗುತ್ತದೆ ಎಂದು ಹೇಳಿ, ತಮ್ಮ ಪಕ್ಷದ ಸದಸ್ಯರೊಂದಿಗೆ ಸಭೆಯಿಂದ ಹೊರನಡೆದರು.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications