ನನ್ನ- ದ್ರಾವಿಡ್ ಮಾತುಕತೆಗೆ ಮಾಧ್ಯಮಗಳು ಬಣ್ಣ ಹಚ್ಚಿವೆ : ಸ್ಲೇಟರ್
ಸಿಡ್ನಿ : ನನ್ನ ಹಾಗೂ ದ್ರಾವಿಡ್ ನಡುವಿನ ಬಿಸಿ ಮಾತುಕತೆಯನ್ನು ಆಸ್ಟ್ರೇಲಿಯಾ ಮಾಧ್ಯಮಗಳು ಉತ್ಪ್ರೇಕ್ಷಿಸಿ, ನಾನು ಮಹಾಪರಾಧ ಮಾಡಿರುವುದಾಗಿ ಟೀಕಿಸಿವೆ. ಆದರೆ ವಾಸ್ತವವೇ ಬೇರೆ ಎಂದಿದ್ದಾರೆ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ಮನ್ ಮೈಕೆಲ್ ಸ್ಲೇಟರ್...
ಸಿಡ್ನಿ ರೇಡಿಯೋಗೆ ಕೊಟ್ಟ ಸಂದರ್ಶನದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಟೀವಿಯಲ್ಲಿ ನನ್ನ ವರ್ತನೆಯನ್ನು ನೋಡಿದವರಿಗೆ ಅದು ಅತಿಯೆನಿಸಿರುವುದು ಸಹಜ. ಆದರೆ ನನ್ನ ನಾಲಗೆಗೆ ಕಡಿವಾಣ ಹಾಕಿದ್ದೆ. ನಾನು ಅಂಥಾ ಆಡಬಾರದ್ದನ್ನು ಆಡಿದ್ದಿದ್ದರೆ ಖಂಡಿತ ಮಾಧ್ಯಮಗಳಿಗೆ ತಿಳಿಸುತ್ತಿದ್ದೆ. ನಾನು ಏನೂ ಹೇಳಲಿಲ್ಲ ನೋಡಿ, ಅದಕ್ಕೆ ಮಾಧ್ಯಮಗಳು ತಮಗೆ ತೋಚಿದಂತೆ ಬರೆದುಕೊಂಡವು.
ನಾನು ಅಂಪೈರ್ ವೆಂಕಟರಾಘವನ್ ಮತ್ತು ದ್ರಾವಿಡ್ ಜತೆ ನಾನು ಹಿಡಿದ ಕ್ಯಾಚು ನೆಲಕ್ಕೆ ಬಿದ್ದಿರಲಿಲ್ಲ ಅಂತ ವಾದಿಸಿದ್ದಕ್ಕೆ ಪಂದ್ಯದ ರೆಫರಿ ವಿಂಡೀಸ್‌ನ ಕ್ಯಾಮಿ ಸ್ಮಿತ್ ನನಗೆ ಎಚ್ಚರಿಕೆ ನೀಡಿದರು. ಗ್ರೀನ್ ರೂಮಿಗೆ ಹೋಗಿ ದ್ರಾವಿಡ್ ಅವರಲ್ಲಿ ಕ್ಷಮೆಯನ್ನೂ ಕೇಳಿಬಂದೆ. ಅವರೂ ಎಲ್ಲಾ ಮರೆತರು. ಹೀಗಿರುವಾಗ ಮಾಧ್ಯಮಗಳು ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತಿವೆ.
ಸ್ಲೇಟರ್ ಈ ರೀತಿ ವರ್ತಿಸಿರುವುದು ಇದೇ ಮೊದಲಲ್ಲ. ಮೊದಲ ಟೆಸ್ಟ್ ಪಂದ್ಯದಲ್ಲೇ, ಅಗರ್ಕರ್ ಬೌಲಿಂಗ್‌ನಲ್ಲಿ ಅವರ ಬ್ಯಾಟ್ ತುದಿ ಸವರಿ ಹೋದ ಚೆಂಡನ್ನು ಹಿಡಿದ ಮೊಂಗಿಯಾ ಅಂಪೈರಲ್ಲಿ ಮನವಿ ಮಾಡಿದ್ದರು. ಆದರೆ ಸ್ಲೇಟರ್ ನಿಂತೆಡೆಯಿಂದ ಅಲ್ಲಾಡಲಿಲ್ಲ. ಅಂಪೈರ್ ಕೂಡ ಸ್ಲೇಟರ್ ಪರವಾಗಿದ್ದರು. ಖುದ್ದು ಸ್ಲೇಟರ್ ಕ್ರೀಸಿನಿಂದ ಹೊರನಡೆಯಬೇಕಿತ್ತಲ್ಲವೇ ಎಂಬ ಮಾತುಗಳೂ ಮಾಧ್ಯಮಗಳಲ್ಲಿ ಕೇಳಿಬಂದವು. ಜೊತೆಗೆ ದ್ರಾವಿಡ್- ಸ್ಲೇಟರ್ ಮಾತಿನ ಚಕಮಕಿಯನ್ನು ಗಿಲ್‌ಕ್ರಿಸ್ಟ್, ಅದು ಆಟದ ಸಮರದ ಚೂರು ಬಿಸಿ ಅಷ್ಟೆ ಎಂದು ಬಣ್ಣಿಸಿದ್ದಾರೆ.
(ರಾಯ್ಟರ್ಸ್)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications