ಇವತ್ತೋ, ನಾಳೆಯೋ ರಣತುಂಗ ಪೊಲೀಸರ ಅತಿಥಿಯಾಗಲಿದ್ದಾರೆ
ಕೊಲಂಬೋ : ಕ್ರಿಕೆಟ್ಟಾಡುತ್ತಿದ್ದ ಹುಡುಗರು ಹೊಡೆದ ಚೆಂಡು ತನ್ನ ಮನೆಯ ಪ್ರಾಂಗಣಕ್ಕೆ ಬಿತ್ತೆಂದು, ಆ ಹುಡುಗರನ್ನು ರಕ್ತ ಬರುವಂತೆ ಹೊಡೆದ ಆರೋಪ ಹೊತ್ತಿರುವ ಶ್ರೀಲಂಕಾದ ಮಾಜಿ ಕ್ರಿಕೆಟ್ ನಾಯಕ ರಣತುಂಗ ಸದ್ಯದಲ್ಲೇ ಪೊಲೀಸರ ಬಂಧಿಯಾಗಲಿದ್ದಾರೆ.
ಗುಜರಾತ್ ಸಂತ್ರಸ್ತರ ನೆರವಿಗೆ ದೇಣಿಗೆ ಸಂಗ್ರಹಿಸಲು ಸಹಾಯಾರ್ಥ ಪಂದ್ಯವೊಂದರಲ್ಲಿ ಆಡಲು ಪ್ರಸ್ತುತ ಕೀನ್ಯಾಗೆ ಹೋಗಿರುವ ಅರ್ಜುನ ರಣತುಂಗ ವಾಪಸ್ಸು ಬರುವುದನ್ನೇ ಪೊಲೀಸರು ಕಾಯುತ್ತಿದ್ದಾರೆ. ವಾಪಸ್ಸು ಬಂದ ತಕ್ಷಣ ಆತನ ತಮ್ಮ ಪ್ರಸನ್ನ ರಣತುಂಗ ಹಾಗೂ ಇಬ್ಬರು ರಕ್ಷಣಾ ಸಿಬ್ಬಂದಿಯಾಂದಿಗೆ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ನ್ಯಾಯಾಲಯದಲ್ಲಿ ಹಾಜರು ಪಡಿಸಲಿದ್ದಾರೆ ಎಂದು ಕೊಲಂಬೋದ ಹಂಗಾಮಿ ಡಿಐಜಿ ದಯಾ ಜಯಸುಂದರ ತಿಳಿಸಿದ್ದಾರೆ.
ನಡೆದದ್ದೇನು ? : ಅಶೋಕ ವಿದ್ಯಾಲಯದ ಬಳಿಯೇ ರಣತುಂಗ ಮನೆಯಿದೆ. ಕಳೆದ ಶುಕ್ರವಾರ, ಮಾರ್ಚ್ 2 ರಂದು ವಿದ್ಯಾಲಯದ ವಿದ್ಯಾರ್ಥಿಗಳು ಕ್ರಿಕೆಟ್ಟಾಡುತ್ತಿದ್ದಾಗ ಚೆಂಡು ರಣತುಂಗ ಮನೆಯ ಆವರಣಕ್ಕೆ ಬಂದು ಬಿದ್ದಿದೆ. ಚೆಂಡು ತರಲು ಹೋದ ಮಕ್ಕಳ ಪೈಕಿ 7 ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ರಕ್ಷಣಾ ಸಿಬ್ಬಂದಿ ಜೊತೆಗೆ ಖುದ್ದು ರಣತುಂಗಾ ಹಲ್ಲೆ ಮಾಡಿದ್ದಾರೆ ಎನ್ನುವುದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಪ. ಈ ಘಟನೆ ನಡೆದ ನಂತರ ರಣತುಂಗ ಕೀನ್ಯಾಗೆ ಹಾರಿದ್ದಾರೆ. ಶ್ರೀಲಂಕಾ ತುಂಬಾ ಈ ಸುದ್ದಿಯೇ ಹಬ್ಬಿದೆ.
ಮುಚ್ಚಿದ ಶಾಲೆ, ವ್ಯಾಪಕ ಪ್ರತಿಭಟನೆ : ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಅಶೋಕ ವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಮುಚ್ಚಿರುವ ಶಾಲೆ ಈ ಹೊತ್ತೂ ತೆರೆದಿಲ್ಲ. ವಿದ್ಯಾರ್ಥಿಗಳ ಜೊತೆಗೆ ಶಾಲೆಯ ಗುರುಗಳು ಹಾಗೂ ಮಕ್ಕಳ ತಂದೆ- ತಾಯಂದಿರೂ ಈ ಘಟನೆಗೆ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಬೇರೆ ಶಾಲೆಯ ಮಕ್ಕಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಶಾಲೆಯ ಪ್ರಾಂಶುಪಾಲ ಎಂ.ಡಿ.ಗುಣದಾಸ ಹೇಳಿದ್ದಾರೆ.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications