Get Updates
Get notified of breaking news, exclusive insights, and must-see stories!

ಮೈಸೂರು ಪೇಪರ್‌ ಮಿಲ್ಸ್‌ ಬಂಡವಾಳವಾಪಸಾತಿಗೆ ವ್ಯಾಪಕ ವಿರೋಧ

ಬೆಂಗಳೂರು : ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿಯಲ್ಲಿನ ಮೈಸೂರು ಪೇಪರ್‌ ಮಿಲ್ಸ್‌ (ಎಂಪಿಎಂ) ನಿಂದ ಬಂಡವಾಳ ವಾಪಸ್ಸು ಪಡೆಯುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಸಾರ್ವಜನಿಕ ಉದ್ದಿಮೆಗಳ ಪುನರ್‌ ನಿರ್ಮಾಣ ಮತ್ತಿತರ ವಿಷಯಗಳ ಕುರಿತು ಅಧ್ಯಯನ ನಡೆಸಿದ ಪದ್ಮನಾಭನ್‌ ಸಮಿತಿ ಸಚಿವ ಸಂಪುಟಕ್ಕೆ ಈಗಾಗಲೇ ತನ್ನ ಮಧ್ಯಂತರ ವರದಿ ಸಲ್ಲಿಸಿದ್ದು, ಎಂಪಿಎಂನಿಂದ ಬಂಡವಾಳ ವಾಪಸಾತಿಯ ಪ್ರಸ್ತಾಪವನ್ನೂ ವರದಿಯಲ್ಲಿ ನಮೂದಿಸಿದೆ.

ಮಿಲ್‌ನ ನೌಕರರ ವಿವಿಧ ಸಂಘಟನೆಗಳು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ವಿವರಣಾತ್ಮಕ ಮನವಿ ಪತ್ರ ನೀಡಿದ್ದು, ಬಂಡವಾಳ ವಾಪಸಾತಿಯನ್ನು ಅರ್ಥಹೀನ ಮತ್ತು ಅನ್ಯಾಯ ಎಂದಿವೆ. ಎಂಪಿಎಂ ರೋಗಗ್ರಸ್ತ ಕಂಪನಿಯಲ್ಲ. ಅದು ಸಮೃದ್ಧವಾಗಿದೆ. ನೌಕರರಿಗೂ ಕಂಪನಿಯಲ್ಲಿ ಕೆಲಸ ಮಾಡಲು ಯಾವುದೇ ಕಿರಿಕಿರಿಯಿಲ್ಲ. ಹೀಗಿರುವಾಗ ಬಂಡವಾಳ ವಾಪಸಾತಿಯ ಪ್ರಶ್ನೆಯೇ ಬರುವುದಿಲ್ಲ ಎಂದು ಸಂಘಟನೆಗಳು ಮನವಿ ಪತ್ರದಲ್ಲಿ ತಿಳಿಸಿವೆ.

ಖಾಸಗೀಕರಣದಿಂದ ಸರ್ಕಾರ ತನ್ನ ಕೈಲಿರುವ ಸಾಕಷ್ಟು ಉತ್ತಮ ಅವಕಾಶಗಳನ್ನು ಬಿಟ್ಟುಕೊಟ್ಟಂತಾಗುತ್ತದೆ. ಆಧುನೀಕರಣ ಮತ್ತು ವಿಸ್ತರಣೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಮೇಲೆ ಸರ್ಕಾರ ನೂರಾರು ಕೋಟಿ ರುಪಾಯಿ ಸುರಿದಿದ್ದು, ಅದರ ಸತ್ಫಲಿತಾಂಶ ಈಗ ತಾನೇ ಹೊರಬೀಳುತ್ತಿದೆ. ಇಂಥಾ ಪರಿಸ್ಥಿತಿಯಲ್ಲಿ ಕಂಪನಿಯನ್ನು ಖಾಸಗಿಯವರ ಕೈಗೆ ಕೊಡುವುದು ತರವಲ್ಲ ಎಂದಿವೆ.

ಮಾಸ್ಟರ್‌ ಬ್ರೇನ್‌ ಸರ್‌.ಎಂ.ವಿಶ್ವೇಶ್ವರಯ್ಯ 1937ರಲ್ಲಿ 400 ಟನ್‌ ಸಾಮ್ಯರ್ಥ್ಯದ ಮಿಲ್ಲನ್ನು ಸಿದ್ಧಪಡಿಸಿ, ನಾಡಿಗೆ ನೀಡಿದ್ದರು. ನ್ಯೂಸ್‌ಪ್ರಿಂಟ್‌, ಬರವಣಿಗೆ ಕಾಗದಗಳು, ಮುದ್ರಣ ಕಾಗದಗಳು ಮೊದಲಾದ ತರಾವರಿ ಕಾಗದಗಳು ಪ್ರಸ್ತುತ ಈ ಮಿಲ್ಲಿನಲ್ಲಿ ತಯಾರಾಗುತ್ತಿವೆ.

ಭದ್ರಾವತಿಯಲ್ಲಿನ ಸಕ್ಕರೆ ಘಟಕ ಪ್ರತಿನಿತ್ಯ 2500 ಟನ್‌ ಸಕ್ಕರೆ ಉತ್ಪಾದಿಸುತ್ತಿದ್ದು, ಶಿವಮೊಗ್ಗ ಜಿಲ್ಲೆಯ 10 ಸಾವಿರ ರೈತರು ಹಾಗೂ 8 ಸಾವಿರ ಕೃಷಿ ಕೂಲಿಕಾರರಿಗೆ ಬೆಂಬಲ ನೀಡುತ್ತಿದೆ. ಭದ್ರಾವತಿಯ ಕುಡಿಯುವ ನೀರಿನ ಬೇಡಿಕೆಯ ಶೇ. 75 ರಷ್ಟನ್ನೂ ಸಂಸ್ಥೆ ಈಡೇರಿಸಿದೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+