ಮೂಲ್ಕಿಯ ಕಾರ್ನಾಡ್ ಜಂಕ್ಷನ್‌ನಲ್ಲಿ ದಕ್ಷಿಣ ಕನ್ನಡದ ಗಾಂಧಿ !
ಮಂಗಳೂರು : ದಕ್ಷಿಣ ಕನ್ನಡದ ಗಾಂಧಿ ಎಂದು ಹೆಸರಾಗಿರುವ ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವ ರಾಯರ ಪ್ರತಿಮೆಯನ್ನು ಮಾರ್ಚ್ ಆರರಂದು(ಬುಧವಾರ) ಮೂಲ್ಕಿಯಲ್ಲಿ ಅನಾವರಣಗೊಳಿಸಲಾಗುವುದು.
ಮೂಲ್ಕಿಗೆ ಸಮೀಪದ ಕಾರ್ನಾಡ್ ಜಂಕ್ಷನ್‌ನಲ್ಲಿ ಸದಾಶಿವ ರಾಯರ ಅಮೃತ ಶಿಲೆಯ ಪ್ರತಿಮೆಯನ್ನು ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆ ಅನಾವರಣಗೊಳಿಸುವರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕಯ್ಯಾರ ಕಿಞ್ಞಣ್ಣ ರೈ ಸಮಾರಂಭದ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಜಿ. ವರದರಾಯ ಪೈ ಬರೆದಿರುವ ಕಾರ್ನಾಡ್ ಸದಾಶಿವ ರಾಯರ ಜೀವನ ಚರಿತ್ರೆಯನ್ನು ಇತಿಹಾಸ ಸಂಶೋಧಕ ಡಾ. ಸೂರ್ಯನಾಥ ಕಾಮತ್ ಬಿಡುಗಡೆ ಮಾಡುವರು. ಈ ಪುಸ್ತಕವನ್ನು ಕಾರ್ನಾಡ್ ಸದಾಶಿವ ರಾವ್ ಸ್ಮಾರಕ ಸಮಿತಿ ಹೊರತಂದಿದ್ದು, ಪುಸ್ತಕ ಪ್ರತಿಯನ್ನು ದಕ್ಷಿಣ ಕನ್ನ ಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಪ್ರೌಢ ಶಾಲೆಗಳಿಗೆ ಉಚಿತವಾಗಿ ನೀಡಲಾಗುವುದು.
ಕಾರ್ನಾಡ್ ಸ್ಮಾರಕ ಸಮಿತಿಯ ನೇತೃತ್ವದಲ್ಲಿಯೇ ಕಾರ್ನಾಡ್ ಜಂಕ್ಷನ್‌ನಿಂದ ಕಾರ್ನಾಡ್ ಹೆದ್ದಾರಿ ಬೈಪಾಸ್ ತನಕ ಸಾರ್ವಜನಿಕರ ನೆರವಿನಿಂದ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಡಿಯಂ ಬೀದಿ ದೀಪಗಳನ್ನು ಅಳವಡಿಸಲಾಗಿದೆ.
ಮೂಲ್ಕಿಯಿಂದ ಬಂದು ಮಂಗಳೂರಿನಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ಕಾರ್ನಾಡು ಭಾರದ್ವಾಜ ರಾಮಚಂದ್ರ ರಾಯರ ಏಕೈಕ ಪುತ್ರ, ಕಾರ್ನಾಡು ಸದಾಶಿವ ರಾಯರು ಕೂಡ ವಕೀಲರಾಗಿದ್ದರು. ಆದರೆ ಕೈ ತುಂಬ ಸಂಬಳ ತರುತ್ತಿದ್ದ ವಕೀಲಿ ವೃತ್ತಿಯನ್ನು ಬಿಟ್ಟು ಅವರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.
ಸದಾಶಿವ ರಾಯರ ತಂದೆ ತೀರಿಕೊಂಡಾಗ ಅಪಾರ ಆಸ್ತಿ ಪಾಸ್ತಿಯನ್ನು ಅವರು ತಮ್ಮ ಏಕೈಕ ಮಗನಿಗೆ ಬಿಟ್ಟು ಹೋಗಿದ್ದರು. ಆದರೆ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮ ನ್ನು ತೊಡಗಿಸಿಕೊಂಡಿದ್ದ ಸದಾಶಿವ ರಾಯರ ಕೊನೆಗಾಲದಲ್ಲಿ , ಅವರ ಬಳಿ ಬಿಡಿಗಾಸೂ ಇರಲಿಲ್ಲ. ತಮ್ಮ ಸರ್ವಸ್ವವನ್ನೂ ಸ್ವಾತಂತ್ರ್ಯಕ್ಕಾಗಿ ಕಳೆದುಕೊಂಡ ತ್ಯಾಗಿಯ ಸ್ಮರಣಾರ್ಥ ಮೂಲ್ಕಿಯಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications