ಐಟಿ ದಿಗ್ಗಜರಿಗೊಂದು ವೇದಿಕೆ, ಮಾ.11 ರಿಂದಕಾರ್ಪೊರೇಟ್ ಸಮಾವೇಶ
ಬೆಂಗಳೂರು : ಐಟಿ ದೊರೆ ಇನ್ಫೋಸಿಸ್ ನಾರಾಯಣ ಮೂರ್ತಿ, ಬೀರು ದೊರೆ ಯುಬಿಯ ವಿಜಯ ಮಲ್ಯ ಮತ್ತು ಮೈಂಡ್ ಟ್ರೀಯ ಅಶೋಕ್ ಸೂಟ ಮಾರ್ಚ್ 11 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯುವ ಏಷ್ಯಾದ 12ನೇ ಕಾರ್ಪೊರೇಟ್ ಸಮಾವೇಶದಲ್ಲಿ ಭಾಗವಹಿಸುವರು.
ಭವಿಷ್ಯದ ದಿನಗಳಲ್ಲಿ ಏಷ್ಯಾದಲ್ಲಿ ತಂತ್ರಜ್ಞಾನ ಮತ್ತು ವ್ಯವಹಾರಗಳ ಬಗ್ಗೆ ನಡೆಯುವ ಈ ಸಮಾವೇಶವನ್ನು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಉದ್ಘಾಟಿಸುವರು. ಸಮಾವೇಶದಲ್ಲಿ ಐಟಿ ಮತ್ತು ಉದ್ಯಮ ಕ್ಷೇತ್ರದ ದಿಗ್ಗಜರು ಮಾತ್ರವಲ್ಲದೆ ಏಷ್ಯಾದ ವಿವಿಧ ರಾಷ್ಟ್ರಗಳ ಮಂತ್ರಿಗಳೂ ಭಾಗವಹಿಸುವ ನಿರೀಕ್ಷೆ ಇದೆ. ಸಿಂಗಪೂರದ ಐಟಿ ಮಂತ್ರಿ ಚೊಯ್ವಿ ಟೋಂಗ್ ಇಯೋ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡುವರು.
ಟೆಕ್ನಾಲಜಿ ಹಬ್ಸ್ ಬಗ್ಗೆ ನಡೆಯುವ ಚರ್ಚೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಸ್. ಎಂ. ಕೃ ಷ್ಣ , ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು, ಸಿಲಿಕಾನ್ ವ್ಯಾಲಿಯ ಲಿಝ್ ನಿಝ್ ಮತ್ತು ಉತ್ತರ ಕರೋಲಿನಾದ ಮಾಜಿ ಗವರ್ನರ್ ಜೇಮ್ಸ್ ಬಿ ಹಂಟ್ ಜೂನಿಯರ್ ಭಾಗವಹಿಸುತ್ತಾರೆ.
ಸಮಾವೇಶದಲ್ಲಿ ಏಷ್ಯಾದ ದೇಶಗಳ ಪ್ರತಿನಿಧಿಗಳು ಮತ್ತು ಐಟಿ ನಿಪುಣರು ಭಾಗವಹಿಸುವರು. ಸಿಂಗಪೂರದ ಪ್ರಾತಿನಿಧಿಕ ಕಚೇರಿಯಾಂದನ್ನು ಬೆಂಗಳೂರಿನಲ್ಲಿ ತೆರೆಯುವ ಉದ್ದೇಶ ಇರುವುದರಿಂದ ಸಿಂಗಪೂರದಿಂದ ಹೆಚ್ಚು ಪ್ರತಿನಿಧಿಗಳು ಬರಲಿದ್ದಾರೆ. ನಾಸ್‌ಕಾಮ್‌ನ ಅಧ್ಯಕ್ಷ ದೇವಾಂಗ್ ಮೆಹ್ತಾ , ರಿಡಿಫ್‌ನ ಅಜಿತ್ ಬಾಲ ಕೃಷ್ಣನ್ ಸತ್ಯಂ ಇನ್ಫೋ ವೇಯ ಆರ್. ರಾಮರಾಜ್ ಮತ್ತಿತರ ಉದ್ಯಮಿಗಳು ಮೂರು ದಿನಗಳ ಈ ಸಭೆಯಲ್ಲಿ ಮಾತನಾಡುವರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications