Get Updates
Get notified of breaking news, exclusive insights, and must-see stories!

ಕಡಲ ತಡಿಯಲ್ಲಿ ಗುರುವಾರ ಸಂಗೀತದಲೆಗಳ ಬೆಳ್ಳಿ ತೋರಣ

ಮಂಗಳೂರು : ಮಾರ್ಚ್‌ 8ರ ಗುರುವಾರ ಮಂಗಳೂರಿನ ಟೌನ್‌ ಹಾಲ್‌ನಲ್ಲಿ ಸಾಲು ಸಂಗೀತ ಕಾರ್ಯಕ್ರಮಗಳಿವೆ. ಮಂಗಳೂರು ಆಕಾಶವಾಣಿಯ ಬೆಳ್ಳಿ ಹಬ್ಬದ ಪ್ರಯುಕ್ತ ಧಾರವಾಡ ಮತ್ತು ಬೆಂಗಳೂರಿನ ಹಾಡುಗಾರರು ಮಂಗಳೂರ ವೇದಿಕೆಯಲ್ಲಿ ಹಾಡುಗಳ ಬೆಳ್ಳಿ ತೋರಣ ನಿರ್ಮಿಸಲಿದ್ದಾರೆ.

ಬೆಳ್ಳಿ ತೋರಣದ ವೇದಿಕೆಯಲ್ಲಿ ಕನ್ನಡ, ಕೊಂಕಣಿ, ತುಳು ಹಾಡುಗಳ ಸಮ್ಮಿಲನವಿದೆ. ಆರ್ಕೆಸ್ಟ್ರಾ, ಶಾಸ್ತ್ರೀಯ ಹಾಡುಗಳು, ವಾದ್ಯ ಸಂಗೀತಗಳ ವೈವಿಧ್ಯವಿದೆ. ಮತ್ತೆ ಬೇಂದ್ರೆಯ ಭಾವಗೀತೆಗಳಿಂದ ಮೊನ್ನೆ ಮೊನ್ನೆ ಹೊಚ್ಚ ಹೊಸದಾಗಿ ಕವನ ಕಟ್ಟಲಾರಂಭಿಸಿದ ಯುವಕವಿಯ ಹಾಡುಗಳೂ ತೇಲಿ ಬರಲಿವೆ.

ಮಧುರಾ ದೀಕ್ಷಿತ್‌, ವಸುಂಧರಾ ಗಿರಿಧರ್‌, ಮೌನೀಶ್‌ ಕುಮಾರ್‌ ಛಾವಣಿ ...ಹೀಗೆ ಸುಮಾರು ಐವತ್ತು ಮಂದಿ ಕಲಾವಿದರು ವೇದಿಕೆಯಲ್ಲಿರುತ್ತಾರೆ. ಟಿ.ಜಿ. ಗೋಪಾಲ ಕೃಷ್ಣನ್‌, ವಸಂತ ಕನಕಾಪುರ, ಎಂ. ಎಸ್‌. ಗಿರಿಧರ್‌ ಹಾಡುಗಳಿಗೆ ಸಂಗೀತ ಸಂಯೋಜಿದ್ದಾರೆ.

ಕಡೆಂಗೋಡ್ಲು ಶಂಕರ ಭಟ್ಟ, ಎನ್‌. ಎಸ್‌ ಲಕ್ಷ್ಮಿ ನಾರಾಯಣ ಭಟ್ಟ , ಸುಬ್ರಾಯ ಚೊಕ್ಕಾಡಿಯವರ ಕವನಗಳು ವೇದಿಕೆಯಲ್ಲಿ ಅಲೆಯಾಗಲಿವೆ. ಪುರುಸೊತ್ತು ಮಾಡಿಕೊಳ್ಳುತ್ತೀರಲ್ಲವಾ ? ನಿಮಗೇನಾದರೂ ಮಾಹಿತಿ ಬೇಕಿದ್ದರೆ ಮಂಗಳೂರು ಆಕಾಶವಾಣಿಗೆ ಫೋನ್‌ ಮಾಡಬಹುದು. 0824-211391

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+