ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಹೊಸ ಸಾಧ್ಯತೆಗಳ ಶೋಧದಲ್ಲಿದ್ದೀರಿ. ನಿಮ್ಮನ್ನು ನೀವು ತೆರೆದುಕೊಳ್ಳುತ್ತಿರುವುದರಿಂದ ಉತ್ತಮವಾದ ದಂಡೆ ದಕ್ಕುವ ಸಾಧ್ಯತೆಯೂ ಇದೆ. ಆದರೆ, ಈ ದಿನ ನೀವು ಆಕರ್ಷಣೆಯ ಕೇಂದ್ರವಲ್ಲ.ವೃಷಭ :ಔಷಧಿ ಮತ್ತು ಆಲ್ಕೋಹಾಲ್ ಸೇವನೆ ಅತಿಯಾಗದಂತೆ ಎಚ್ಚರ ವಹಿಸಿ. ವಿಪರೀತ ಒತ್ತಡದ ದಿನ. ನಿಮ್ಮ ಕಡೆಯಿಂದ ಭಾವನಾತ್ಮಕ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ.
ಮಿಥುನ : ತರ್ಕ ನಿಮ್ಮ ಬದುಕಿಗೆ ಅಷ್ಟೊಂದು ಹೊಂದಿಕೆಯಾಗುತ್ತಿಲ್ಲ . ವಸ್ತು ನಿಷ್ಠ ಯೋಚನೆ ಹಾಗೂ ಕ್ರಿಯಾ ಚಾಲನೆಯಿಂದ ಗುರಿ ತಲುಪುತ್ತೀರಿ.
ಕಟಕ : ಸೌಹಾರ್ದತಾ ನಡವಳಿಕೆ ನಿಮ್ಮ ವಂಶವಾಹಿಗಳಲ್ಲೇ ಅಡಕವಾಗಿದೆ. ದೈಹಿಕ ಆರೋಗ್ಯದಂತೆಯೇ ಮನೋ ಆರೋಗ್ಯವೂ ಸುಂದರವಾಗಿದೆ. ಅವರು ನಿಮ್ಮನ್ನಿಷ್ಟ ಪಡುವುದರಲ್ಲಿ ಅನುಮಾನವೇ ಇಲ್ಲ.
ಸಿಂಹ : ಮನೆಯಲ್ಲಿನ ಸಣ್ಣ ಪುಟ್ಟ ಘಟನೆಗಳು ನಿಮ್ಮ ಬದುಕಿಗೇ ತಿರುವು ನೀಡುವ ಸಾಧ್ಯತೆಗಳಿವೆ. ಯಶಸ್ಸನ್ನು ಸಾಧಿಸಲು ನಿಮ್ಮ ಮುಂದಿರುವ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಳ್ಳಿ.
ಕನ್ಯಾ : ಈ ದಿನ ರಾಜಿಯಾಗಲೇ ಬೇಕಾದ ಅನಿವಾರ್ಯತೆ. ಶಕ್ತಿಯೂ ಕುಂದುತ್ತಿದೆ ಎಂದು ನಿಮಗನ್ನಿಸಬಹುದು. ಈ ಹೊತ್ತಿನಲ್ಲಿ ಮೌನವಾಗಿದಷ್ಟೂ ಕ್ಷೇಮವಾಗಿರುತ್ತೀರಿ.
ತುಲಾ : ನಂಬಿಕೆಗಳನ್ನು ಮತ್ತೆ ಪ್ರಶ್ನಿಸಿಕೊಳ್ಳುವ ಸ್ಥಿತ್ಯಂತರದ ನಡುವಿದ್ದೀರಿ. ಇತ್ತೀಚೆಗೆ ನಿಮ್ಮ ಬದುಕಿನಲ್ಲಿ ಪ್ರವೇಶಿಸಿದ ವ್ಯಕ್ತಿಗಳೂ ಇದಕ್ಕೆ ಕಾರಣರಿದ್ದಾರು. ದೈಹಿಕ ಶ್ರಮದ ಕೆಲಸಗಳನ್ನು ಅವಾಯ್ಡ್ ಮಾಡಿ.
ವೃಶ್ಚಿಕ : ನೀವು ಪ್ರಸ್ತುತ ತೊಡಗಿಕೊಂಡಿರುವುದರಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಭಾವನಾತ್ಮಕವಾಗಿದ್ದೀರಿ. ಇದರಿಂದ ದೈಹಿಕ ಶ್ರಮವೇ ಹೊರತು ಲಾಭವೇನಿಲ್ಲ.
ಧನಸ್ಸು : ಹೊಸ ಗೆಳೆಯರು ಮತ್ತು ಪ್ರಣಯದ ಸಾಧ್ಯತೆಯಿದೆ. ನಿಮ್ಮ ಜನಪ್ರಿಯತೆಯ ಹೊಳಪೂ ಹೆಚ್ಚಲಿದೆ. ಹದಗೆಟ್ಟಿರುವ ಸಂಬಂಧಗಳನ್ನು ಸುಧಾರಿಸಿಕೊಳ್ಳಲಿದು ಸಕಾಲ.
ಮಕರ : ನಡೆ ನುಡಿ ಒಂದಾಗಿರುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುತ್ತದೆ. ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬದಲಿಸಿಕೊಳ್ಳುವ ನಡವಳಿಕೆ ವೃತ್ತಿಪರ ಲಕ್ಷಣವೇನಲ್ಲ.
ಕುಂಭ : ಆರೋಗ್ಯಕರ ಅಹಂ ನಿಮಗೆ ಅತೀವ ಆತ್ಮ ವಿಶ್ವಾಸ ತುಂಬುವುದು ಮಾತ್ರವಲ್ಲದೆ ವೃತ್ತಿಯಲ್ಲಿ ಯಶಸ್ಸು ಕಾಣಲು ಏಣಿಯಾಗುತ್ತದೆ.
ಮೀನ : ನಿಮ್ಮ ಅಂತರ್ವಾಣಿ ಈ ದಿನ ಹೆಚ್ಚು ಜಾಗೃತವಾಗಿದೆ ಹಾಗೂ ಜೀವನ್ಮುಖಿಯಾಗಿದೆ. ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸುತ್ತೀರಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications