ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಕರುಳುಬೇನೆ : ಕ್ಲೋರಿನ್‌ ಮಾತ್ರೆ ವಿತರಣೆ

By Staff
|
Google Oneindia Kannada News

ಬೆಂಗಳೂರು : ನಗರದ ಅಲಸೂರಿನಲ್ಲಿ ಶುಕ್ರವಾರ ಕರುಳುಬೇನೆಗೆ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ಇಂದಿರಾನಗರ ಪ್ರದೇಶದಲ್ಲಿ ಕಲುಷಿತ ನೀರು ಕುಡಿದ ನೂರಾರು ಮಂದಿ ಆಸ್ಪತ್ರೆ ಸೇರಿದ ಪ್ರಕರಣ ಬೆಂಗಳೂರು ಮಹಾನಗರ ಪಾಲಿಕೆ ಕಣ್ಣು ತೆರೆಸಿದೆ. ನಗರದ ಹಲವು ಪ್ರದೇಶಗಳಲ್ಲಿ ಕರುಳು ಬೇನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ಲೋರಿನ್‌ ಮಾತ್ರೆಗಳನ್ನು ವಿತರಿಸಲು ಪಾಲಿಕೆ ಕ್ರಮ ಕೈಗೊಂಡಿದೆ.

ನೀರಿಗೆ ಮಿಶ್ರ ಮಾಡುವ ಕ್ಲೋರಿನ್‌ ಮಾತ್ರೆಗಳನ್ನು ಮನೆಮನೆಗೇ ತೆರಳಿ ವಿತರಿಸುವ ವ್ಯವಸ್ಥೆಯನ್ನು ಬೆಂಗಳೂರು ಮಹಾ ನಗರ ಪಾಲಿಕೆ ಆರಂಭಿಸಿದೆ. ನೀರಿಗೆ ಕ್ಲೋರಿನ್‌ ಹಾಕುವಂತೆ ಬೆಂಗಳೂರು ಜಲ ಮಂಡಳಿಗೂ ಸೂಚಿಸಲಾಗಿದೆ. ನೀರಿನ ಕೊಳವೆಗಳು ಒಡೆದು, ಕಲುಷಿತ ನೀರು ಸೇರುತ್ತಿರುವ ಎಲ್ಲ ನೀರಿನ ಕೊಳವೆಗಳನ್ನೂ ತತ್‌ಕ್ಷಣವೇ ದುರಸ್ತಿ ಮಾಡುವಂತೆ ಆದೇಶಿಸಲಾಗಿದೆ.

ಆದಾಗ್ಯೂ, ಜನರು ಶೇಖರಿಸಿಟ್ಟುಕೊಳ್ಳುವ ನೀರು ಕಲುಷಿತಗೊಂಡು ರೋಗ ಹರಡುವ ಭೀತಿ ಇರುವುದರಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಮನೆಮನೆಗೇ ತೆರಳಿ ಕ್ಲೋರಿನ್‌ ಮಾತ್ರೆ ಹಂಚುವ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಮುನಿವೆಂಕಟಪ್ಪ ಗಾರ್ಡನ್‌, ಜಯರಾಜ್‌ ನಗರ, ಮರ್ಫಿಟೌನ್‌, ಕದಿರಯ್ಯನ ಪಾಳ್ಯ, ಜೋಗುಪಾಳ್ಯ, ಸರಸ್ವತಿ ಪುರ, ಲಿಂಗಯ್ಯನ ಪಾಳ್ಯ, ಬಯ್ಯಪ್ಪನ ಹಳ್ಳಿ, ಆಂಧ್ರಕಾಲೋನಿ ಸೇರಿದಂತೆ ಇನ್ನಿತರ ಪ್ರದೇಶಗಳ ನಿವಾಸಿಗಳಿಗೆ ಕ್ಲೋರಿನ್‌ ಮಾತ್ರೆ ಹಂಚಲಾಗುತ್ತಿದೆ. ತಾವು ಶೇಖರಿಸಿಟ್ಟುಕೊಂಡ ನೀರಿಗೆ ಕ್ಲೋರಿನ್‌ ಬೆರೆಸುವಂತೆ ನಾಕರಿಕರಲ್ಲಿ ಕೋರಲಾಗಿದೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X