ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಎಲ್ಲ ಕೆಲಸ ವ್ಯವಹಾರಗಳು ಸರಳವಾಗಿ ನಡೆದು ಬಿಡುವುದರಿಂದ ಇವತ್ತು ಭಲೇ ಖುಷಿಯಾಗಿರುತ್ತೀರಿ. ಸಂಗಾತಿಯಾಂದಿಗೆ ಇವತ್ತೇನೂ ಜಗಳಗಳಿರುವುದಿಲ್ಲ. ಅನಾರೋಗ್ಯ ಸಮಸ್ಯೆ ಇದ್ದರೆ ಕೇರ್‌ಫುಲ್ ಆಗಿರಿ.ವೃಷಭ : ಮಕ್ಕಳು ಇವತ್ತು ಸಂಜೆ ಒಳ್ಳೆಯ ಸುದ್ದಿ ತರುತ್ತಾರೆ. ಇದಕ್ಕಿಂದ ಶುಭ ಇನ್ಯಾವುದಿದೆ ಅಲ್ವೇ ? ಜೇಬು ಖಾಲಿಯಾದರೂ ಅದು ಮಕ್ಕಳಿಗೆಂದ ಮೇಲೆ ತಲೆನೋವೇ ಇಲ್ಲ.
ಮಿಥುನ : ಅನಾರೋಗ್ಯ ಸಮಸ್ಯೆಯತ್ತ ಗಮನವಿರಲಿ. ವಿದ್ಯೆಯಲ್ಲಿ ಪ್ರಗತಿ ಇಲ್ಲ ಎಂದು ಬೇಸರಿಸಿಕೊಳ್ಳಬೇಡಿ. ಮನೆ ಮಂದಿಯಾಂದಿಗೆ ಮಾತನಾಡುವ ಕನಸು ನನಸಾಗಲಿದೆ.
ಕಟಕ : ಹೊಸ ನೆಂಟರ ವಿಷಯ ಪಕ್ಕಕ್ಕಿರಲಿ. ನಿಮ್ಮ ಮನೆಯ ಕೆಲಸ ಕಾರ್ಯಗಳು ಪ್ರಗತಿಯಾಗುತ್ತವೆ. ಹೊಸ ಮನೆ ಕೊಂಡು ಕೊಳ್ಳಬೇಕೆಂದು ಯೋಚಿಸಿದ್ದರೆ, ಮುಂದುವರೆಯಲು ಇದು ಶುಭ ಸಮಯ.
ಸಿಂಹ : ಲಾಟರಿಯಿಂದ ನಿಮಗೆ ಸುಖ ಸಿಗದು ಎಂದು ಗೊತ್ತಿದ್ದ ಮೇಲೆ ಆ ಕಡೆಗೆ ಯಾಕೆ ಗಮನ ಹರಿಸಬೇಕು ? ಸ್ನೇಹಿತರು ಈಗ ನಿಮ್ಮ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಕಂಜ್ಯೂಸ್ ಅಂತ ಅನ್ನಿಸಿಕೊಳ್ಳಬೇಡಿ.
ಕನ್ಯಾ : ಸರಕಾರಿ ವ್ಯವಹಾರಗಳಲ್ಲಿ ಜಯವಾಗುತ್ತದೆ. ಹಿರಿಯರ ಆಶೀರ್ವಾದ ನಿಮ್ಮ ಮೇಲಿದೆ ಆದ್ದರಿಂದ ಹಾಕಿಕೊಂಡ ಪ್ಲಾನ್‌ಗಳಲ್ಲಿ ಯಡವಟ್ಟಾಗುವುದಿಲ್ಲ.
ತುಲಾ : ಧನಲಾಭವಿದ್ದರೂ, ಪಕ್ಕದಲ್ಲಿಯೇ ಅನಾರೋಗ್ಯವೂ ನಿಮ್ಮನ್ನು ಕಾಡಲಿರುವುದರಿಂದ ಅಂತಹ ಖುಷಿ ಎನಿಸುವುದಿಲ್ಲ. ಸ್ನೇಹಿತರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಅವರಿಗೆ ಋಣಿಯಾಗಿರಬೇಕಾಗಿರುವುದು ನಿಮ್ಮ ಕರ್ತವ್ಯ ಅಲ್ವೇ ?
ವೃಶ್ಚಿಕ : ಅನಾರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷಿಸಬೇಡಿ. ಸ್ನೇಹಿತರು ನಿಮ್ಮ ಕಾಳಜಿಯ ಬಗ್ಗೆ ಮಾತನಾಡುತ್ತಿರುವುದನ್ನು ಕಿವಿಗೆ ಹಾಕಿಕೊಂಡರೆ ಉದ್ಧಾರವಾಗುತ್ತೀರಿ. ಧನಲಾಭವಿದೆ. ಆಫೀಸಿನಲ್ಲಿ ಕೆಟ್ಟ ಸುದ್ದಿ ಕೇಳುತ್ತೀರಿ.
ಧನಸ್ಸು : ಹೊಸ ನೌಕರಿಗೆ ಎಲ್ಲಾದರೂ ಅಪ್ಲೈ ಮಾಡಿದ್ದೀರಾ ? ಇಂಟರ್ ವ್ಯೂಗೆ ಕರೆ ಬಂದರೆ ಇವತ್ತು ತಪ್ಪಿಸಿಕೊಳ್ಳಬೇಡಿ. ಲಕ್ ನಿಮ್ಮ ಕಡೆಗಿದೆ.
ಮಕರ : ಆಫೀಸಿನಲ್ಲಿ ಶುಭ ಸುದ್ದಿ ನಿರೀಕ್ಷಿಸಬೇಡಿ. ನಿರಾಸೆ ಕಾದಿದೆ. ಯಾರದೋ ಸಿಟ್ಟನ್ನು ನಿಮ್ಮ ಸ್ನೇಹಿತರ ಬಳಿ ತೋರಿಸಿಕೊಳ್ಳುವುದೇ ?
ಕುಂಭ : ಅಧ್ಯಯನವನ್ನು ಮರೆತುಬಿಟ್ಟಿದ್ದೀರಾ ಹೇಗೆ ? ನಿಮ್ಮ ಇತರ ಎಲ್ಲ ಯೋಚನೆಗಳನ್ನೂ ಪಕ್ಕಕ್ಕಿಟ್ಟು ಹಿಡಿದ ಕೆಲಸ ಪೂರೈಸುವತ್ತ ಏಕಾಗ್ರತೆ ಇರಲಿ.
ಮೀನ : ದೂರ ಪ್ರಯಾಣ ಹಮ್ಮಿಕೊಳ್ಳಬೇಕೆಂದಿದ್ದರೆ ತಕ್ಷಣ ಕಾರ್ಯ ಪ್ರವೃತ್ತರಾಗಿ. ಕಾಸು ಹಾಳಾಗುತ್ತದೆ ಎಂಬ ಚಿಂತೆ ಇಟ್ಟುಕೊಂಡು ಕೊರಗಿದರೆ ಸರಿಯೇ ?
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications