ಮಾಜಿ ಡಿಜಿಪಿ ಸಿ.ದಿನಕರ್ ಈಗ ಪೂರ್ಣ ಪ್ರಮಾಣದ ವಕೀಲ
ಬೆಂಗಳೂರು : ಕೋರ್ಟಿನ ಕಟೆಕಟೆ ಹತ್ತಿ
ಅನೇಕ ಕಾನೂನು ಸಮರದಲ್ಲಿ ಜಯದ ವಾಸನೆ ಕಂಡು, ಅಂತಿಮ ಯುದ್ಧದಲ್ಲಿ ಇನ್ನೂ ಫಲಿತಾಂಶ ಕಾಣದ ಕರ್ನಾಟಕದ ಮಾಜಿ ಪೊಲೀಸ್ ಮಹಾ ನಿರ್ದೇಶಕ ಸಿ.ದಿನಕರ್ ಈಗ ಪೂರ್ಣ ಪ್ರಮಾಣದ ವಕೀಲ !
ಕಳೆದ ತಿಂಗಳ 28ರಂದು ಡಿಜಿಪಿ ಹುದ್ದೆಯಿಂದ ನಿವೃತ್ತರಾದ ದಿನಕರ್, ಗುರುವಾರ ಕರ್ನಾಟಕ ಬಾರ್ ಕೌನ್ಸಿಲ್‌ಗೆ ವಕೀಲಿ ವೃತ್ತಿ ನೋಂದಣಿ ಅರ್ಜಿ ಸಲ್ಲಿಸಿದ್ದರು. ವಾರಾಂತ್ಯದ ಸಮಾರಂಭದಲ್ಲಿ ಬಾರ್ ಕೌನ್ಸಿಲ್‌ನ ಅನುಮತಿ ಪತ್ರ ಪಡೆದ 131 ವಕೀಲರ ಪೈಕಿ ದಿನಕರ್ ಕೂಡ ಒಬ್ಬರು. ನೋಂದಣಾ ಸಮಿತಿ ಅಧ್ಯಕ್ಷ ವಿ.ಟಿ.ರಾಯರೆಡ್ಡಿ ಈ ವಿಷಯ ತಿಳಿಸಿದ್ದಾರೆ. ಈ ಪ್ರಕಾರವಾಗಿ ಇನ್ನು ದಿನಕರ್ ಕರ್ನಾಟಕದ ಯಾವ ಕೋರ್ಟಿನಲ್ಲಿ ಬೇಕಾದರೂ ವಕೀಲಿ ಅಭ್ಯಾಸ ಮಾಡಬಹುದು.
ತಮ್ಮ ಕೇಸುಗಳಲ್ಲಿ ಖುದ್ದು ವಾದ ಮಾಡಿರುವ ದಿನಕರ್ ಈವರೆಗೆ ಒಟ್ಟು 16 ಪ್ರಕರಣಗಳಲ್ಲಿ ಜಯಶೀಲರಾಗಿದ್ದಾರೆ. ಆದರೆ 4 ತಿಂಗಳ ಕಾಲ ತಮ್ಮ ಅಧಿಕಾರಾವಧಿ ವಿಸ್ತರಿಸಬೇಕೆಂಬ ಅವರ ಮನವಿಯನ್ನು ಸರ್ಕಾರ ತಿರಸ್ಕರಿಸಿತ್ತು. ಸುಮ್ಮನೆ ಕೂರಲಾರದ, ಚಲನಶೀಲ ವ್ಯಕ್ತಿ ದಿನಕರ್, ಇನ್ನು ಮುಂದೆ ವಕೀಲರಾಗಿ ಹೊಸ ಜೀವನ ಪ್ರಾರಂಭಿಸಲಿದ್ದಾರೆ.
ಸಿಬಿಐ ನಿರ್ದೇಶಕರಾಗಿ ಆರ್.ಕೆ.ರಾಘವನ್ ನೇಮಕಾತಿ ಪ್ರಶ್ನಿಸಿ ಕೇಂದ್ರ ಆಡಳಿತ ನ್ಯಾಯಾಲಯದಲ್ಲಿ ಖುದ್ದು ವಾದ ಮಾಡಿ ದಿನಕರ್ ಗೆದ್ದಿದ್ದರು. ಕೇಂದ್ರ ಆಡಳಿತ ನ್ಯಾಯಾಲಯದ ತೀರ್ಪನ್ನು ಕೇಂದ್ರ ಸರ್ಕಾರ ಹೈಕೋರ್ಟಿಗೆ ಒಯ್ದಿದ್ದು, ಜೂನ್ 4ಕ್ಕೆ ಕೋರ್ಟು ಅಂತಿಮ ತೀರ್ಪು ನೀಡಲಿದೆ.
ಕೋರ್ಟಿನಲ್ಲಿ ಹೋರಾಡಿಯೇ ಟಿ.ಶ್ರೀನಿವಾಸುಲು ಉತ್ತರಾಧಿಕಾರಿಯಾಗಿ ಡಿಜಿಪಿ ಪಟ್ಟಕ್ಕೆ ದಿನಕರ್ ಬಂದಿದ್ದರು. ಎಸ್.ಎಂ. ಕೃಷ್ಣ ಸರ್ಕಾರವೇ ದಿನಕರ್‌ಗೆ ಅಧಿಕಾರ ವಹಿಸಿತ್ತು.
(ಯುಎನ್‌ಐ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications