Get Updates
Get notified of breaking news, exclusive insights, and must-see stories!

ಗಡಿ ಸಮಸ್ಯೆಗಳ ಅಧ್ಯಯನಕ್ಕೆ ಸದನ ಸಮಿತಿ ನೇಮಿಸಲು ಒತ್ತಾಯ

ಬೆಂಗಳೂರು : ರಾಜ್ಯದ ಗಡಿಭಾಗಗಳಲ್ಲಿನ ಮೂಲಭೂತ ಸಮಸ್ಯೆಗಳ ಬಗ್ಗೆ ಪರಿಶೀಲಿಸಲು ಸದನ ಸಮಿತಿ ರಚಿಸುವಂತೆ ವಿರೋಧ ಪಕ್ಷಗಳು ಸರ್ಕಾರದ ಮೇಲೆ ಪಟ್ಟು ಹಾಕಿ ಒತ್ತಾಯ ಹೇರಿದ್ದು ಶುಕ್ರವಾರ ವಿಧಾನ ಪರಿಷತ್ತಿನ ವೈಶಿಷ್ಟ್ಯ.

ಗಡಿ ಪ್ರದೇಶಗಳ ಅಭಿವೃದ್ಧಿಯ ಪ್ರಶ್ನೆಯ ಚರ್ಚೆಯ ಅಂಕುರವಾದದ್ದು ಸಂಯುಕ್ತ ಜನತಾದಳದ ಸದಸ್ಯ ಬಸವರಾಜ ಹೊರಟ್ಟಿ ಅವರಿಂದ. ಹೊರಟ್ಟಿಯವರ ಮಾತಿಗೆ ದನಿಗೂಡಿಸಿದ ವಿರೋಧ ಪಕ್ಷಗಳ ಇತರ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸಂಯುಕ್ತ ದಳದವರೇ ಆದ ಡಾ.ಎಂ.ಪಿ. ನಾಡಗೌಡ, ಬಸವರಾಜ ಬೊಮ್ಮಾಯಿ, ಎಂ.ಪಿ. ಪ್ರಕಾಶ್‌, ಎಂ.ಸಿ. ನಾಣಯ್ಯ ಗಡಿ ಪ್ರದೇಶಗಳ ಸ್ಥಿತಿಗತಿ ಅಧ್ಯಯನಕ್ಕೆ ಸದನ ಸಮಿತಿ ರಚಿಸುವಂತೆ ಪಟ್ಟು ಹಿಡಿದರು.

ಪ್ರತಿಪಕ್ಷಗಳ ಸದಸ್ಯರ ವಾದವನ್ನು ಲೋಕೋಪಯೋಗಿ ಸಚಿವ ಧರಂಸಿಂಗ್‌ ಒಪ್ಪಲಿಲ್ಲ . ಗಡಿ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಒತ್ತು ನೀಡಿದೆ. ಗಡಿ ವಿವಾದದಲ್ಲಿ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ನಿಲುವನ್ನು ರಾಜ್ಯಪಾಲರ ಭಾಷಣದಲ್ಲೂ ಸರ್ಕಾರ ಸ್ಪಷ್ಟಪಡಿಸಿದೆ. ಮಹಾರಾಷ್ಟ್ರ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶಗಳ ಮುಖ್ಯಮಂತ್ರಿಗಳೊಂದಿಗಿನ ಮಾತುಕತೆ ಮುಂದುವರಿದಿದೆ. ಈ ಹಂತದಲ್ಲಿ ಸದನ ಸಮಿತಿ ಅವಶ್ಯವಿಲ್ಲ ಎಂದು ಧರಂಸಿಂಗ್‌ ಹೇಳಿದರು.

ಸಚಿವರ ಹೇಳಿಕೆ ವಿರೋಧ ಪಕ್ಷಗಳ ಸದಸ್ಯರನ್ನು ಕೆರಳಿಸಿತು. ಕೆರಳಿದ ಸದಸ್ಯರು ಸಭಾಪತಿ ಪೀಠದ ಎದುರಿನ ಬಾವಿಗೆ ತೆರಳಿ ಕೆಲ ಹೊತ್ತು ಧರಣಿಯನ್ನೂ ನಡೆಸಿದರು. ಇದೇ ಸಂದರ್ಭದಲ್ಲಿ ಗಡಿ ವಿವಾದದ ಬಗ್ಗೆ ವಿವಾದಾಸ್ಪದ ಹೇಳಿಕೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಮನೋಹರ ಜೋಷಿ ರಾಜೀನಾಮೆ ನೀಡಬೇಕೆಂದು ಆಡಳಿತ ಪಕ್ಷದ ವಿ.ಆರ್‌. ಸುದರ್ಶನ್‌ ಹಾಗೂ ರಾಜಣ್ಣ ಒತ್ತಾಯಿಸಿದ ಘಟನೆಯೂ ನಡೆಯಿತು.

ಪ್ರತಿ ಪಕ್ಷಗಳು ತಮ್ಮ ಪಟ್ಟು ಸಡಿಲಿಸದಿದ್ದಾಗ ಮಧ್ಯ ಪ್ರವೇಶಿಸಿದ ಭಾರೀ ನೀರಾವರಿ ಸಚಿವ ಎಚ್‌.ಕೆ. ಪಾಟೀಲ್‌, ಸದನದಲ್ಲಿ ನಡೆದ ಚರ್ಚೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಪ್ರಕಟಿಸಿ ಪ್ರಕರಣಕ್ಕೆ ತೆರೆ ಎಳೆದರು.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+