Get Updates
Get notified of breaking news, exclusive insights, and must-see stories!

ಮಹಾಜನ್‌ ವರದಿಯ ಶಿಫಾರಸ್ಸಿಗೇ ಕರ್ನಾಟಕ ಬದ್ಧ - ಕೃಷ್ಣ

ಬೆಂಗಳೂರು : ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಬಗೆಹರಿಸಲು ಪ್ರಧಾನಿ ಎ.ಬಿ.ವಾಜಪೇಯಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವ ಅಗತ್ಯತೆಯನ್ನು ಮುಖ್ಯಮಂತ್ರಿ ಕೃಷ್ಣ ತಳ್ಳಿಹಾಕಿದ್ದಾರೆ.

ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದರು. ಇತ್ತೀಚೆಗೆ ಪ್ರಧಾನಿ ಜೊತೆ ಫೋನಿನಲ್ಲಿ ಮಾತನಾಡಿ, ಬಹು ದಿನಗಳ ಈ ಸಮಸ್ಯೆ ನನ್ನ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಮುಖಾಮುಖಿಯಿಂದ ಬಗೆಹರಿಸಲಾಗದು. ಮಹಾಜನ್‌ ವರದಿಯ ಶಿಫಾರಸುಗಳನ್ನೇ ಜಾರಿಗೆ ತರಬೇಕೆಂಬುದು ಕರ್ನಾಟಕದ ಪಟ್ಟು. ಅದರಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಕೇರಳ ಕೂಡ ಈ ವಿವಾದದ ಒಂದಂಗ. ಶೀಘ್ರವೇ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಹೇಳಿದ್ದೇನೆ ಎಂದರು.

ತನ್ನ ಸರ್ಕಾರ (ಎನ್‌ಡಿಎ) ದ ಪಕ್ಷಗಳಲ್ಲೊಂದಾದ ಶಿವಸೇನೆಗೆ ಸೂಕ್ತ ಮಾರ್ಗದರ್ಶನ ನೀಡಿ, ಕರ್ನಾಟಕದ ಬೆಳಗಾವಿ ಕುರಿತ ಗಡಿ ವಿವಾದಕ್ಕೆ ಪ್ರಧಾನಿ ತೆರೆ ಎಳೆಯುತ್ತಾರೆ ಎಂಬ ವಿಶ್ವಾಸವಿದೆ. ಈ ಹಿಂದೆ ಕಾವೇರಿ ಮತ್ತಿತರ ವಿಷಯದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗದ ಹಾಗೆ ಪ್ರಧಾನಿ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಸಮ್ಮಿಶ್ರ ಸರ್ಕಾರದ ನಾಜೂಕು ಚುಕ್ಕಾಣಿ ಹಿಡಿದಿರುವ ಪ್ರಧಾನಿ ಸಮತೋಲನ ಕಾಪಿಟ್ಟುಕೊಂಡು, ಎಲ್ಲಾ ರಾಜ್ಯಗಳನ್ನು ಒಂದೇ ದೃಷ್ಟಿಯಿಂದ ನೋಡುವರೆಂಬ ಸಂಪೂರ್ಣ ಭರವಸೆ ನನ್ನದು ಎಂದು ಕೃಷ್ಣ ಹೇಳಿದರು.

ಮನೋಹರ ಜೋಷಿ ವಿವಾದಾತ್ಮಕ ಹೇಳಿಕೆ

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಿ ಶಿವಸೇನೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಸಚಿವ ಮನೋಹರ ಜೋಷಿ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದನ್ನು ಪ್ರಶ್ನೋತ್ತರ ವೇಳೆಯಲ್ಲಿ ಸಂಯುಕ್ತ ಜನತಾ ದಳ ನಾಯಕ ಪಿಜಿಆರ್‌ ಸಿಂಧ್ಯ ಸಭೆಯ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಕೃಷ್ಣ ಉತ್ತರ ಕೊಡಮಾಡಿದರು.

ಸಚಿವರು ತಮ್ಮ ಖಾತೆಗಳ ಮಿತಿಯಲ್ಲೇ ಸಾರ್ವಜನಿಕ ಸಭೆಯಲ್ಲಿ ಮಾತನಾಡುವಂತೆ ಪ್ರಧಾನಿ ವಾಜಪೇಯಿ ತಾಕೀತು ಮಾಡಬೇಕು. ಕೇಂದ್ರದ ಮಾಜಿ ಸಚಿವ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವು ರಾಜಕೀಯ ಮುಖಂಡರು ಮನೋಹರ ಜೋಷಿಯವರ ಹೇಳಿಕೆಯನ್ನು ಪ್ರತಿಭಟಿಸಿ, ಅದನ್ನು ಪ್ರಧಾನಿ ಗಮನಕ್ಕೆ ತಂದಿದ್ದಾರೆ. ಇದನ್ನು ವಾಜಪೇಯಿ ಗಂಭೀರವಾಗಿ ಪರಿಗಣಿಸಬೇಕು ಎಂದು ಕೃಷ್ಣ ಆಗ್ರಹಿಸಿದರು.

ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರನ್ನು ಈ ಹಿಂದೆ ರಾಜ್ಯ ವಿಧಾನಸಭೆಗೆ ಬೆಳಗಾವಿಯ ಕೆಲ ಮಂದಿ ಚುನಾಯಿಸಿದ್ದುಂಟು. ಆದರೆ ಕಳೆದ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರನ್ನು ಜನ ತಿರಸ್ಕರಿಸಿದ್ದಾರೆ. ಗಡಿ ವಿವಾದವು ಉಭಯ ರಾಜ್ಯಗಳ ನಡುವಿನ ಸೌಹಾರ್ದಕ್ಕೆ ಧಕ್ಕೆ ತಂದಿಲ್ಲ. ರಾಜ್ಯದಲ್ಲಿ ಅಧಿಕವಾದ ಸಕ್ಕರೆ ಉತ್ಪಾದನೆಯನ್ನು ಮಹಾರಾಷ್ಟ್ರ ಸ್ವೀಕರಿಸಿತು. ಭೀಮಾ ನದಿ ನೀರನ್ನು ಬಿಜಾಪುರ ಹಾಗೂ ಗುಲ್ಬರ್ಗಾ ಮಂದಿಗೆ ಬಿಡಬೇಕೆಂಬ ಕೋರಿಕೆಯನ್ನೂ ಈಡೇರಿಸಿತು ಎಂದು ಕೃಷ್ಣ ತಿಳಿಸಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+