• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಟ್ನಾ ವಿಶ್ವ ವಿದ್ಯಾಲಯದಿಂದ ಪಾರ್ಲಿಮೆಂಟಿನಎತ್ತರಕ್ಕೆ ಸಂದ ಸಿನ್ಹಾ

By Staff
|

Yeshwanth Sinhaಮೂರನೆ ಬಾರಿಗೆ ದೇಶದ ಆರ್ಥಿಕ ರೂಪು ರೇಷೆಗಳನ್ನು ಬ್ರೀಫ್‌ಕೇಸ್‌ನಲ್ಲಿ ತುಂಬಿ ಸಂಸತ್‌ಭವನದೊಳಗೆ ಪ್ರವೇಶಿಸಿದ ಅಗ್ಗಳಿಕೆಯ ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ಹುಟ್ಟಿದ್ದು ನವಂಬರ್‌ 6, 1937 ರಲ್ಲಿ . ಹುಟ್ಟೂರು ಪಾಟ್ನಾದಲ್ಲಿಯೇ ಶಾಲೆ ಹಾಗೂ ವಿಶ್ವವಿದ್ಯಾಲಯದ ಓದನ್ನು ಮುಗಿಸಿದರು. 1958 ರಲ್ಲಿ ಪಾಟ್ನಾ ವಿಶ್ವ ವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಮಾಸ್ಟರ್‌ ಡಿಗ್ರಿ ಪಡೆದ ಅವರು, 1958 ರಿಂದ 1960 ರವರೆಗೆ ಅದೇ ಸಂಸ್ಥೆಯಲ್ಲಿ ರಾಜ್ಯಶಾಸ್ತ್ರ ವಿಷಯವನ್ನು ಬೋಧಿಸಿದರು.

ಪಾಟ್ನಾ ವಿವಿಯಿಂದ ಭಾರತೀಯ ನಾಗರಿಕ ಸೇವೆಗಳಿಗೆ ಸಿನ್ಹಾ ಸೇರ್ಪಡೆಗೊಂಡಿದ್ದು 1960 ರಲ್ಲಿ . ಅಲ್ಲಿಂದ ಸುಮಾರು 24 ವರ್ಷಗಳ ಕಾಲ ವಿವಿಧ ಇಲಾಖೆ ಹಾಗೂ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅವರು, ದಕ್ಷತೆಗೆ ಮತ್ತೊಂದು ಹೆಸರಾಗಿದ್ದರು. ಸಬ್‌ ಡಿವಿಜನಲ್‌ ಮ್ಯಾಜಿಸ್ಟ್ರೇಟ್‌ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆಗಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವವೂ ಅವರ ಬೆನ್ನಿಗಿದೆ.

ಬಜೆಟ್‌ ಮಂಡನೆಯ ಹಿಂದೆ ಆರ್ಥಿಕ ಕ್ಷೇತ್ರದ ಅಪಾರ ಅನುಭವ

ಬಿಹಾರ ರಾಜ್ಯ ಸರ್ಕಾರದ ಹಣಕಾಸು ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿ ಹಾಗೂ ಉಪ ಕಾರ್ಯದರ್ಶಿಯಾಗಿ ಸಿನ್ಹಾ ಎರಡು ವರ್ಷಗಳ ಸೇವೆ ಸಲ್ಲಿಸಿದ್ದರು. 1971 ರಿಂದ 1973 ರವರೆಗೆ ಜರ್ಮನಿಯಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಮೊದಲ ಕಾರ್ಯದರ್ಶಿ (ಹಣಕಾಸು) ಯಾಗಿ ಕಾರ್ಯ ನಿರ್ವಹಿಸಿದ್ದ ಅವರು, 1973 ರಿಂದ 1974 ರವರೆಗೆ ಫ್ರಾಂಕ್‌ಫರ್ಟ್‌ನಲ್ಲಿ ಭಾರತೀಯ ರಾಯಭಾರಿ(Consul General)ಆಗಿದ್ದರು.

ಇದಾದ ನಂತರ - ಕೈಗಾರಿಕೆಗಳ ಮೂಲಭೂತ ಸೌಕರ್ಯಗಳ ಇಲಾಖೆ, ಬಿಹಾರ ಸರ್ಕಾರ ಮತ್ತು ಕೈಗಾರಿಕಾ ಸಚಿವಾಲಯ, ಭಾರತ ಸರ್ಕಾರದ ವಿದೇಶಿ ಕೈಗಾರಿಕೆಗಳ ಸಹಯೋಗ ಇಲಾಖೆ, ತಂತ್ರಜ್ಞಾನದ ಆಮದು, ಬೌದ್ಧಿಕ ಹಕ್ಕುಗಳ ಆಸ್ತಿ ಹಾಗೂ ಕೈಗಾರಿಕಾ ಪರವಾನಿಗೆ ಕ್ಷೇತ್ರಗಳಲ್ಲಿ ದುಡಿದಿದ್ದಾರೆ. 1980 ರಿಂದ ನಾಲ್ಕು ವರ್ಷಗಳ ಕಾಲ ಭಾರತ ಸರ್ಕಾರದ ಸಾರಿಗೆ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇದೆಲ್ಲಾ ಅನುಭವ ವೈವಿಧ್ಯತೆ ಇದೀಗ ದೇಶದ ಆರ್ಥಿಕ ನೀತಿಯನ್ನು ರೂಪಿಸುವಲ್ಲಿ ನೆರವಿಗೆ ಬರುತ್ತಿದೆ.

ರಾಜಕಾರಣ ಅಪ್ಪಿದ ದಕ್ಷ ಅಧಿಕಾರಿ

ಎಂಭತ್ತರ ದಶಕದ ಆರಂಭದಲ್ಲಾಗಲೇ ಸಿನ್ಹಾರನ್ನು ಸಕ್ರಿಯ ರಾಜಕಾರಣ ತೋಳು ಬೀಸುತ್ತಿತ್ತು . 1984 ರಲ್ಲಿ ಭಾರತೀಯ ನಾಗರಿಕ ಸೇವೆಗಳಿಗೆ ನಮಸ್ಕಾರ ಹೇಳಿದ ಅವರು ಜನತಾ ಪಾರ್ಟಿಯ ಮೂಲಕ ರಾಜಕಾರಣಕ್ಕೆ ಧುಮುಕಿದರು. 1986 ರಲ್ಲಿ ಪಕ್ಷದ ಅಖಿಲ ಭಾರತ ಕಾರ್ಯದರ್ಶಿಯಾಗಿ ನೇಮಕಗೊಂಡವರು, 1988 ರಲ್ಲಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರು.

ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳಿಂದಾಗಿ 1989 ರಲ್ಲಿ ಜನತಾದಳ ಉದಯವಾದಾಗ, ಸಿನ್ಹಾ ಪಾಲಿಗೆ ದಳದ ಪ್ರಧಾನ ಕಾರ್ಯದರ್ಶಿ ಹುದ್ದೆ ಲಭ್ಯವಾಯಿತು. ಆನಂತರ ಚಂದ್ರಶೇಖರ್‌ ಅಧಿಕಾರಕ್ಕೆ ಬಂದಾಗ ಹಣಕಾಸು ಖಾತೆಗೆ ಸಿನ್ಹಾ ಅವರಲ್ಲದೆ ಬೇರಾರೂ ರೇಸಿನಲ್ಲಿರಲಿಲ್ಲ . ನವಂಬರ್‌, 1990 ರಿಂದ ಜೂನ್‌ 1991 ರವರೆಗೆ ಸಿನ್ಹಾ , ಕೇಂದ್ರ ಹಣಕಾಸು ಖಾತೆಯ ಚುಕ್ಕಾಣಿ ಹಿಡಿದರು. ಅವರ ಮೊದಲ ಬಜೆಟ್‌ ಸರ್ಕಸ್‌ ನಡೆದದ್ದು ಆವಾಗಲೇ.

ದಳ ಪದೇ ಪದೇ ವಿದಳವಾಗುತ್ತಲೇ ಸಾಗಿತು. ಈ ಸ್ಥಿತ್ಯಂತರದಲ್ಲಿ ಭಾರತೀಯ ಜನತಾಪಕ್ಷಕ್ಕೆ ಜಿಗಿದ ಸಿನ್ಹಾ 1996 ರಲ್ಲಿ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ನೇಮಕವಾದರು. ಮಾರ್ಚ್‌, 1998 ರಲ್ಲಿ ಭಾಜಪ ಅಧಿಕಾರಕ್ಕೆ ಬಂದಾಗ ಎರಡನೆಯ ಬಾರಿಗೆ ಸಿನ್ಹಾ ಹಣಕಾಸು ಖಾತೆಯ ಹೊಣೆ ಹೊತ್ತರು. ಬಿಹಾರದ ಹಜಾರಿಬಾದ್‌ ಲೋಕಸಭಾ ಕ್ಷೇತ್ರದಿಂದ ಅವರು ಸಂಸತ್ತಿಗೆ ಆಯ್ಕೆಯಾಗಿದ್ದರು.

ಸಿನ್ಹಾ ಮೂರನೇ ಬಾರಿಗೆ ಕೇಂದ್ರ ಹಣಕಾಸು ಬಜೆಟ್ಟನ್ನು (ಫೆ.28) ಮಂಡಿಸಿದ್ದಾರೆ. ಇದು ಕಠಿಣ ನಿರ್ಧಾರಗಳ ಹಾಗೂ ಹಲವಾರು ರಾಜಿಗಳ ಬಜೆಟ್‌ ಎಂದು ಸಿನ್ಹಾ ಅವರೇ ಹೇಳಿಕೊಂಡಿದ್ದಾರೆ. ಅಲ್ಲಿಗೆ ಈ ಬಜೆಟ್‌ ಅವರು ಸಾಗಿಬಂದ ಹಾದಿಯಂತೆಯೇ ಸಂಕೀರ್ಣ ಎಂದಾಯಿತು.

ಮುಖಪುಟ / ಬಜೆಟ್‌ 2001 -ಚಞಟ 2002

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more