ಕಾಲಮಿತಿ, ಶಿಸ್ತುಬದ್ಧ ಅರ್ಥವ್ಯವಸ್ಥೆಗೆ ನನ್ನ ಒತ್ತು
ಸರ್ (ಜಿಎಂಸಿ ಬಾಲಯೋಗಿ, ಲೋಕಸಭಾ ಸ್ಪೀಕರ್),
ಸಹಸ್ರಮಾನದ ಮೊದಲ ಬಜೆಟ್ ಮಂಡಿಸುತ್ತಿದ್ದೇನೆ.
ಇದೀಗ ಮಂಡಿಸುತ್ತಿರುವ 2000- 2001 ನೇ ಸಾಲಿನ ಬಜೆಟ್‌ಗೆ ಹಲವು ಪ್ರಥಮಗಳ ಅಗ್ಗಳಿಕೆಯೂ ಇದೆ. ನಮ್ಮ ಗಣತಂತ್ರಕ್ಕೆ ಐವತ್ತು ವರ್ಷಗಳು ತುಂಬಿದ ನಂತರದ ಮೊದಲನೆ ಬಜೆಟ್ ಹಾಗೂ ಶತಮಾನದ ಮೊದಲ ಬಜೆಟ್ಟಿದು. ಮಾತ್ರವಲ್ಲದೆ 1999 ರಲ್ಲಿ ಗದ್ದುಗೆಗೆ ಬಂದ ಅಟಲ್ ಬಿಹಾರಿ ನೇತೃತ್ವದ ಹೊಸ ಸರ್ಕಾರದ ಮೊದಲ ಬಜೆಟ್ಟಿದು. ಈ ಐತಿಹಾಸಿಕ ಬಜೆಟ್ಟನ್ನು ಮಂಡಿಸಲು ಅನುವು ಮಾಡಿಕೊಟ್ಟ ಪ್ರಧಾನಿ ವಾಜಪೇಯಿ ಅವರಿಗೆ ನನ್ನ ಧನ್ಯವಾದ.
1999- 2000 ಸಾಲು ಅನೇಕ ಸವಾಲು, ಸಮಸ್ಯೆಗಳನ್ನು ಒಳಗೊಂಡ ವರ್ಷ. ಕಾಶ್ಮೀರದಲ್ಲಿ 50 ದಿನಗಳ ಯುದ್ಧ , ಒರಿಸ್ಸಾದಲ್ಲಿ ಚಂಡಮಾರುತ, ದುರ್ಬಲ ಮಾನ್ಸೂನ್, ಸಾರ್ವಜನಿಕ ಚುನಾವಣೆಗಳಿಗೆ ಮುಂಚಿನ ರಾಜಕೀಯ ಅನಿಶ್ಚಯತೆ, ಜಾಗತಿಕ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರದಲ್ಲಿ ಏರಿಳಿತ- ಇವೆಲ್ಲವನ್ನೂ ನಾವು ದಿಟ್ಟತನದಿಂದ ಎದುರಿಸಿದ್ದೇವೆ. ಫಲಿತಾಂಶವಾಗಿ ದೇಶ ಬಲಗೊಂಡಿದೆ.
ನಾನೀಗ ಆರ್ಥಿಕ ವರ್ಷದ ಕೆಲವು ಮುಖ್ಯಾಂಶಗಳನ್ನು ಪ್ರಸ್ತಾಪಿಸುತ್ತಿದ್ದೇನೆ. ಕೃಷಿ ಕ್ಷೇತ್ರದ ಕುಂಠಿತ ಪ್ರಗತಿಯ ನಡುವೆ ಪ್ರಸಕ್ತ ವರ್ಷದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಪ್ರತಿಶತ 6 ರಷ್ಟು ನಿರೀಕ್ಷಿಸಲಾಗಿದೆ. ಇದ್ದುದರಲ್ಲಿ ಮೂಲಭೂತ ಸೌಕರ್ಯಗಳ ಕ್ಷೇತ್ರವೇ ವಾಸಿ. 17 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಣದುಬ್ಬರದ ದರ ಸತತವಾಗಿ 42 ವಾರಗಳ ಕಾಲ ಶೇ.4 ಕ್ಕಿಂತ ಕಡಿಮೆ ದಾಖಲಿಸಿದೆ. ರಫ್ತು ಕ್ಷೇತ್ರದಲ್ಲೂ ಗಣನೀಯ ಮುನ್ನಡೆ ಸಾಧಿಸಿದ್ದೇವೆ. ಸಾಫ್ಟ್‌ವೇರ್ ರಫ್ತಿನಲ್ಲಂತೂ ಸಾಕಷ್ಟು ಮುಂದಿದ್ದೇವೆ. ಸ್ಟಾಕ್ ಮಾರ್ಕೆಟ್‌ಗಳ ಮೇಲೆ ಬಂಡವಾಳದಾರರ ನಂಬುಗೆ ಮರಳಿದೆ. ಆದರೆ ಅಂತರರಾಷ್ಟ್ರೀಯ ತೈಲ ದರಗಳಲ್ಲಿನ ಹೊಯ್ದಾಟದಿಂದಾಗಿ ನಮ್ಮ ಆಮದು ಬಿಲ್ 6 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಿದೆ.
ನನ್ನ ಕಳೆದ ಎರಡು ಬಜೆಟ್‌ಗಳಲ್ಲಿ - ನಮ್ಮ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅಗತ್ಯವಾದ ನೀತಿಗಳ ಬಗ್ಗೆ ಚರ್ಚಿಸಿದ್ದೇನೆ. ನಾವು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಶಕ್ತರಾಗಿದ್ದೇವೆ. ಹೊಸ ಆರ್ಥಿಕ ನೀತಿಯನ್ನು ಬಲಪಡಿಸುವತ್ತ ನಮ್ಮ ಹಣಕಾಸು ಮಾರುಕಟ್ಟೆಗಳೂ ಬಲಗೊಳ್ಳುತ್ತಿವೆ. ಇದು ನನ್ನ ಮೂರನೇ ಬಜೆಟ್. ಉದ್ಯೋಗಾವಕಾಶಗಳ ಪಥವನ್ನು ಪ್ರತಿವರ್ಷ ಶೇ. 7 ರಿಂದ 8 ರಷ್ಟು ಅಧಿಕಗೊಳಿಸುವ ಮೂಲಕ ದೇಶದಿಂದಲೇ ಬಡತನವನ್ನು ದಶಕವೊಂದರೊಳಗೆ ನಿರ್ಮೂಲನಗೊಳಿಸಲು ಉದ್ದೇಶಿಸಿದ್ದೇವೆ. ಈ ನಿಟ್ಟಿನಲ್ಲಿ ಮುಂದಿನ 10 ವರ್ಷಗಳು ಭಾರತದ ಅಭಿವೃದ್ಧಿಯ ದಶಕ ಅನ್ನಿಸಲಿದೆ.
ಈ ಗುರಿಗಳನ್ನು ಸಾಧಿಸಲು ನಾವು ಕೆಳಗಿನ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.
- ನಮ್ಮ ಗ್ರಾಮೀಣ ಆರ್ಥಿಕ ಅಭಿವೃದ್ಧಿ ಮೂಲಗಳನ್ನು ಬಲಪಡಿಸಬೇಕು. ವಿಶೇಷವಾಗಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು.
- ಜವಳಿ, ಚರ್ಮೋದ್ಯಮ, ಆಗ್ರೋ ಪ್ರೊಸೆಸಿಂಗ್ ಮುಂತಾದ ಸಾಂಪ್ರದಾಯಿಕ ಕೈಗಾರಿಕೆಗಳನ್ನು ಆಧುನೀಕರಿಸಬೇಕು.
- ಹೊಸಜ್ಞಾನದ ಕ್ಷೇತ್ರಗಳಾದ ಇನ್ಫೋಟೆಕ್, ಬಯೋ ಟೆಕ್ನಾಲಜಿ ಹಾಗೂ ಫಾರ್ಮಾಸ್ಯುಟಿಕಲ್ಸ್‌ಗಳಲ್ಲಿ ಕ್ರಾಂತಿ ಸಾಧಿಸಬೇಕು.
- ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಣ, ಆರೋಗ್ಯ ಮುಂತಾದ ಸಾಮಾಜಿಕ ಸೇವೆಗಳನ್ನು ಸಮಾಜದ ಕನಿಷ್ಠನಿಗೆ ಮುಟ್ಟಿಸಲು ಆದ್ಯತೆ ನೀಡಬೇಕು.
- ವಿದ್ಯುತ್, ರಸ್ತೆ, ಬಂದರು, ಟೆಲಿಕಾಂ, ರೈಲ್ವೆ ಮತ್ತು ವಾಯುಮಾರ್ಗಗಳನ್ನು ಉತ್ತಮಗೊಳಿಸಬೇಕು.
- ರಫ್ತು ಹಾಗೂ ವಿದೇಶಿ ಬಂಡವಾಳದಲ್ಲಿ ಕ್ಷಿಪ್ರ ಹಾಗೂ ಹೆಚ್ಚಿನ ಪ್ರಗತಿ ಸಾಧಿಸುವುದು.
ಈ ವರ್ಷ ಅನಿರೀಕ್ಷಿತವಾಗಿ ಎದುರಾದ ರಕ್ಷಣೆ, ಚುನಾವಣೆ ಹಾಗೂ ಪ್ರಾಕೃತಿಕ ವಿಕೋಪ (ಒರಿಸ್ಸಾ) ಗಳಿಂದಾಗಿ ಹೆಚ್ಚಿನ ಹೊರೆ ಹೊರಬೇಕಾಯಿತು. ಐದನೆ ವೇತನ ಆಯೋಗದ ಅಳವಡಿಕೆ ಹಾಗೂ ರಾಜ್ಯಗಳಿಗೆ ಹೆಚ್ಚಿನ ಅನುದಾನ ಒದಗಿಸಿದ್ದೂ ಹೊರೆಯಾಗಿ ಪರಿಣಮಿಸಿತು. ಇದರಿಂದಾಗಿ ನಮ್ಮ ಹಣಕಾಸು ನಿರ್ವಹಣೆ 1 ಲಕ್ಷ ಕೋಟಿ ರುಪಾಯಿಗಳನ್ನು ಪಡೆಯಬೇಕಾಯಿತು. ಇದಕ್ಕೆ 10 ಸಾವಿರ ಕೋಟಿ ರುಪಾಯಿಗಳ ಬಡ್ಡಿ ಮುಂದಿನ ವರ್ಷ ಕೂಡಿಕೊಳ್ಳುತ್ತದೆ. ನಾವು ಪರ್ಯಾಯ ಸಂಪನ್ಮೂಲಗಳನ್ನು ಕಂಡುಕೊಳ್ಳುವುದು ಅಗತ್ಯವಾಗಿದೆ. ಇಲ್ಲದಿದ್ದಲ್ಲಿ ಮುಂದಿನ ವರ್ಷಗಳಲ್ಲಿ ನಮ್ಮೆಲ್ಲಾ ಯೋಜನೆಗಳು ವಿಫಲವಾಗಿ ಮತ್ತಷ್ಟು ಸಂಕಷ್ಟಕ್ಕೆ ಈಡಾಗುತ್ತೇವೆ ಹಾಗೂ ಮುಂದಿನ ಜನಾಂಗದ ಮೇಲೆ ಹೊರಲಾಗದ ಹೊರೆ ಹೊರಿಸುತ್ತೇವೆ.
ನಾವು ನಮ್ಮ ಹಣಕಾಸು ನಿರ್ವಹಣೆಯನ್ನು ಕ್ರಮಬದ್ಧಗೊಳಿಸಬೇಕಾಗಿದೆ. ಇದಕ್ಕಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಕೆಲವು ರಾಜಿಗಳೂ ಅನಿವಾರ್ಯ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications