ಜನ ಏನಂತಾರೆ?
- ಈ ಬಜೆಟ್ ಅಂದ್ರೆ ಅದೇನೋ ನಮಗೆ ಗೊತ್ತಿಲ್ಲ. ಪ್ರತಿ ಬಾರಿ ಫೆಬ್ರವರಿಯಲ್ಲಿ ಎಲ್ಲದರ ಬೆಲೆ ಏರಿಸ್ತಾರೆ. ಬೇರೆ ಪಕ್ಷದೋರು ಗಲಾಟೆ ಮಾಡಿದ ಮೇಲೆ 50 ರುಪಾಯಿ ಜಾಸ್ತಿ ಮಾಡಿದ್ರೆ ಅದರಲ್ಲಿ 20 ರುಪಾಯಿ ಇಳಿಸ್ತಾರೆ. ಹೆಚ್ಚಿಗೆ ದುಡ್ಡು ಕಕ್ಕುವುದು ತಪ್ಪಲ್ಲ.
ಕೆ.ಆರ್. ಮಾರ್ಕೆಟ್‌ನ ಸಗಟು ವ್ಯಾಪಾರಿ.
- ಇದೊಂದು ಉತ್ತಮ ಬಜೆಟ್, ಭೂಕಂಪದಿಂದ ದೇಶ ಸಾವಿರಾರು ಕೋಟಿ ರುಪಾಯಿ ನಷ್ಟ ಅನುಭವಿಸಿದ್ರೂ ಹೆಚ್ಚಿನ ಹೊರೆ ಬಿದ್ದಿಲ್ಲ. ಇನ್‌ಕಂಟ್ಯಾಕ್ಸ್‌ನಲ್ಲೂ ಹೆಚ್ಚಿಗೆ ಏರಿಕೆ ಆಗಿಲ್ಲ. ಇದೊಂದು ಗುಡ್ ಬಜೆಟ್ ಅಂತ ನನಗನ್ನಿಸುತ್ತೆ.
ಸಾಫ್ಟ್‌ವೇರ್ ಎಂಜಿನಿಯರ್, ಬೆಂಗಳೂರು.
- ಇದೆಲ್ಲಾ ಚುನಾವಣೆ ಗಿಮಿಕ್ಸು ಬಿಡಿ ಸಾರ್, ತಮಿಳುನಾಡು, ಪಶ್ಚಿಮ ಬಂಗಾಳ ಚುನಾವಣೆ ಮುಗಿದ ಮೇಲೆ ಮತ್ತೆ ಬೆಲೆ ಏರಿಸ್ತಾರೆ. ನಮಗೆ ಗೊತ್ತಿಲ್ವಾ. ಎಲ್ಲ ನಾಟಕ. ಅದೇನೋ ಈ ಬಾರಿ ಪೆಟ್ರೋಲಿಯಂ ಕ್ಷೇತ್ರದಲ್ಲಿ ವ್ಯವಸ್ಥಿತ ದರ ಪದ್ಧತಿ ಜಾರಿ ಮಾಡ್ತೀನಿ ಅಂತ ಹೇಳಿದ್ದಾರಂತೆ, ಅಂದ್ರೆ ಪೆಟ್ರೋಲು, ಡೀಸಲ್ ಬೆಲೆ ಯಾವ ಕ್ಷಣದಲ್ಲಾದರೂ ಏರಬಹುದು.
ನಗರ ಪಾಲಿಕೆ ಶಾಲೆಯ ಉಪಾಧ್ಯಾಯ
- ಗ್ರಾಮೀಣ ಅಭಿವೃದ್ಧಿಗಾಗಿ ಡೀಸೆಲ್ ಸೆಸ್ ವಿನಿಯೋಗಿಸ್ತಾರಂತೆ. ಅಂದ್ರೆ, ಡೀಸೆಲ್ ಬೆಲೆ ಏರಿಸಿದಾರಾ ? ಸರಿ ಬಿಡಿ, ಡೀಸೆಲ್ ಬೆಲೆ ಜಾಸ್ತಿ ಆದ್ರೆ, ತಂತಾನೆ ಎಲ್ಲದರ ಬೆಲೆಯೂ ಏರತ್ತೆ ? ಅಲ್ವಾ ಸಾರ್.
ವೈದ್ಯಕೀಯ ವಿದ್ಯಾರ್ಥಿ, ಮಂಗಳೂರು.
- ಸೊಸೈಟಿ ಸಕ್ಕರೆ ಬೆಲೆ ಏರಿಸಿಬಿಟ್ಟಿದ್ದಾರೆ. ಮಾರ್ಕೆಟಲ್ಲೂ ಸಕ್ಕರೆ ಬೆಲೆ ಏರತ್ತೆ. ಈ ಬಾರಿ ಯುಗಾದಿಗೆ ಸಕ್ಕರೆ ಹೋಳಿಗೆ ಮಾಡಿದ ಹಾಗೇ ಬಿಡಿ.
ಬೆಂಗಳೂರು ವಿ.ವಿ. ಉದ್ಯೋಗಿ.
- ಅಲ್ಲ ಈಗ್ಲೇ ಸ್ವಯಂ ನಿವೃತ್ತಿ ಅಂತ ಹೊಡ್ಕೋತಿದ್ದಾರೆ. ಈಗ ಪ್ರಾವಿಡೆಂಟ್ ಫಂಡ್‌ಗೂ ಟ್ಯಾಕ್ಸ್ ಹಾಕ್ತಾರಂತೆ. ಮಿಗಿಲಾಗಿ ಬಡ್ಡಿ ದರನೂ ಇಳಿಸಿಬಿಟ್ಟಿದ್ದಾರೆ. ಇದು ಕೆಟ್ಟ ಬಜೆಟ್ ಬಿಡಿ.
ಬ್ಯಾಂಕ್ ಉದ್ಯೋಗಿ, ಮಣಿಪಾಲ
- ನೀರಾವರಿಗೆ ಸ್ವಲ್ಪವೂ ಬೆಲೆ ಕೊಟ್ಟಿಲ್ಲ. ಹೆಸರಿಗೆ ಕೃಷಿ ನೀತಿ ಅಂದಿದ್ದಾರೆ. ಇದೆಲ್ಲಾ ಜನರ ಕಣ್ಣಿಗೆ ಮಣ್ಣೆರೆಚೋ ಪ್ರಯತ್ನ ಅಷ್ಟೇ. ಇದು ಖಂಡಿತಾ ಜನರ ಬಜೆಟ್ ಅಲ್ವೇ ಅಲ್ಲ.
ಬಿ.ಕಾಂ. ಪದವೀಧರ, ಭಿನ್ನಮಂಗಲ
- ಖಾಸಗೀಕರಣದಿಂದ ಬ್ಯಾಂಕ್‌ಗಳಿಗೆ ಹೆಚ್ಚಿನ ಜವಾಬ್ದಾರಿ ದೊರಕತ್ತೆ. ಪ್ರತಿಭಾವಂತರಿಗೆ ಕೆಲಸ ಸಿಗತ್ತೆ. ಇದೊಂದು ಜನಪರ ಬಜೆಟ್
ಬ್ಯಾಂಕ್ ಅಧಿಕಾರಿ, ತೊಣಚಿಕೊಪ್ಪಲು
ಮುಖಪುಟ / ಬಜೆಟ್ 2001 -ಚಞಟ 2002
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications