• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿನ್ಹ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ , ಜನ ಏನಂತಾರೆ ?

By Staff
|

ಅಭಿವೃದ್ಧಿಗೆ ವೇಗ ಕೊಡಲಿರುವ ಬಜೆಟ್ಟು- ಪ್ರಧಾನಿ : ಅಭಿವೃದ್ಧಿಯ ನಡಿಗೆಗೆ ಯಶವಂತ ಸಿನ್ಹಾರ ಬಜೆಟ್ಟು ವೇಗ ಕಲ್ಪಿಸಿಕೊಡುತ್ತದೆ. ವಿಶ್ವ ವ್ಯಾಪಾರ ಸಂಸ್ಥೆಯ ಸದಸ್ಯ ರಾಷ್ಟ್ರವಾದ ಭಾರತ ಪ್ರಸ್ತುತ ಸಿಲುಕಿಕೊಂಡಿರುವ ತೊಂದರೆಗಳಿಂದ ಹೊರಬರಲು ಕೃಷಿ ಕ್ಷೇತ್ರದ ಸುಧಾರಣೆಗೆ ಕೊಟ್ಟಿರುವ ಒತ್ತು ಕಾರಣವಾಗಬಲ್ಲುದು. ವಿದೇಶೀ ಕೃಷ್ಯುತ್ಪನ್ನಗಳ ಆಮದು ಸುಂಕ ಹೆಚ್ಚಿಸಿರುವುದು ನಮ್ಮ ರೈತರ ಪರದಾಟ ತಪ್ಪಲಿದೆ. ಉಳುವವರಿನ್ನು ಸಾಕಷ್ಟು ಸುರಕ್ಷಿತ ಎಂದು ಈಗ ನಾನು ಯಾವುದೇ ಅನುಮಾನವಿಲ್ಲದೆ ಹೇಳಬಹುದು.

ಉದ್ಯೋಗಾವಕಾಶಗಳು ಹೆಚ್ಚಲಿದ್ದು, ಗ್ರಾಮೀಣಾಭಿವೃದ್ಧಿ ಕಾರ್ಯಗಳ ಗತಿಯಲ್ಲಿ ಸಾಕಷ್ಟು ಪ್ರಗತಿ ಮೂಡಲಿದೆ. ಕೃಷಿ, ಕೈಗಾರಿಕೆ ಮತ್ತು ರಫ್ತು ಕ್ಷೇತ್ರಗಳಿಗೆ ಬಜೆಟ್ಟಿನಲ್ಲಿ ಸಾಕಷ್ಟು ಪುಷ್ಟಿ ನೀಡಿರುವುದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಲಿದೆ. ಈ ಬಜೆಟ್ಟು ಜನವಿರೋಧಿಯಾಗಲಿದೆ ಎಂಬ ಟೀಕೆಗಳಿಗೆ ದಿಟ್ಟ ಉತ್ತರ ಕೊಟ್ಟಿರುವ ಸಿನ್ಹರಿಗೆ ಹಾಗೂ ಇಂಥ ಸಮತೋಲಿತ ಬಜೆಟ್‌ ಸಿದ್ಧಪಡಿಸುವಲ್ಲಿ ನೆರವಾದ ಅಧಿಕಾರಿಗಳಿಗೆ ಅಭಿನಂದನೆಗಳು.

ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ : ಕಳೆದ 50 ವರ್ಷಗಳಲ್ಲಿ ಯಾವುದೇ ವಿತ್ತಮಂತ್ರಿ ಎದುರಿಸದ ಭೂಕಂಪದಂಥ ಒತ್ತಡ ಪರಿಸ್ಥಿತಿಯಲ್ಲಿ ಯಶವಂತ ಸಿನ್ಹ ಸಮತೋಲಿತ ಬಜೆಟ್‌ ಮಂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಬ್ಲ್ಯುಟಿಓ ಒಪ್ಪಂದಗಳ ಹಿನ್ನೆಲೆಯಲ್ಲಿ ತುಳಿತಕ್ಕೆ ಸಿಕ್ಕಲಿರುವ ರೈತನನ್ನು ಮೇಲೆತ್ತಲು ಇನ್ನಷ್ಟು ಕಾರ್ಯಕ್ರಮಗಳಿಗೆ ಒತ್ತು ಕೊಡಬಹುದಿತ್ತು. ಸಣ್ಣ ಕೈಗಾರಿಕೆಗಗಳತ್ತ ಸಾಕಷ್ಟು ಗಮನ ಹರಿಸಿಲ್ಲ. ವೇತನದಾರ ವರ್ಗದವರ ತೆರಿಗೆಯಲ್ಲಿ ಕಡಿತ ಮಾಡಿರುವುದು ಸ್ವಾಗತಾರ್ಹ. ಆದರೆ ಪಡಿತರ ದರದ ಸಕ್ಕರೆ ಬೆಲೆಯ ಹೆಚ್ಚಳ ಬಡವರಿಗೆ ದೊಡ್ಡ ಪೆಟ್ಟು ನೀಡಲಿದೆ. ಒಟ್ಟಾರೆ ಇದೊಂದು ಸಮಾಧಾನಕರ ಬಜೆಟ್‌.

ಇನ್ಫೋಸಿಸ್‌ : ಭಾರತದ ಕೈಗಾರಿಕಾ ಕ್ಷೇತ್ರವನ್ನು ಸ್ಪರ್ಧಾತ್ಮಕಗೊಳಿಸುವುದಷ್ಟೇ ಅಲ್ಲದೆ ಸಾಫ್ಟ್‌ವೇರ್‌ ಉದ್ಯಮದ ಏಲಿಗೆಗೆ ಬಜೆಟ್‌ ಪೂರಕವಾಗಿದೆ. ಮಾಹಿತಿ ತಂತ್ರಜ್ಞಾನಕ್ಕೆ ಒತ್ತು ಕೊಟ್ಟಿರುವುದು ಶ್ಲಾಘನಾರ್ಹ ಎಂದು ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಟಿ.ವಿ.ಮೋಹನ್‌ದಾಸ್‌ ಪೈ ಪ್ರತಿಕ್ರಿಯಿಸಿದ್ದಾರೆ.

ಎಫ್‌ಕೆಸಿಸಿಐ ಹಾಗೂ ಐಎಂಸಿಐ : ಸಾರ್ವಜನಿಕ ಉದ್ದಿಮೆಗಳಲ್ಲಿ ಬಂಡವಾಳ ವಾಪಸಾತಿಯನ್ನು ಹೆಚ್ಚಿಸುವ ತೀರ್ಮಾನ ಸೇರಿದಂತೆ ಹೊಸ ಬಜೆಟ್ಟಿನ ಎಲ್ಲಾ ಅಂಶಗಳೂ ಅಭಿವೃದ್ಧಿಗೆ ಹಾಗೂ ಆರ್ಥಿಕ ಏಳಿಗೆಗೆ ಪೂರಕವಾಗಿವೆ. ಕೃಷಿ, ಕೈಗಾರಿಕೆ, ಬಂಡವಾಳ ಮಾರುಕಟ್ಟೆ, ಬ್ಯಾಂಕಿಂಗ್‌ ಮತ್ತಿತರ ಆರ್ಥಿಕ ಕ್ಷೇತ್ರಗಳ ಸರ್ವತೋಮುಖ ಪ್ರಗತಿಗೆ ಬಜೆಟ್ಟು ಒತ್ತು ಕೊಟ್ಟಿದ್ದು, ಅದಕ್ಕೆ ನಿರ್ದಿಷ್ಟ ದಿಕ್ಕಿದೆ ಎಂದು ಕರ್ನಾಟಕ ಚೇಂಬರ್‌ ಆಫ್‌ ಕಾಮರ್ಸ್‌(ಎಫ್‌ಕೆಸಿಸಿಐ) ಅಧ್ಯಕ್ಷ ಕೆ.ರಾಮಸ್ವಾಮಿ ಹಾಗೂ ಮತ್ತು ಗ್ರೇಟರ್‌ ಚೇಂಬರ್‌ ಆಫ್‌ ಮೈಸೂರು(ಜಿಎಂಸಿಐ) ಅಧ್ಯಕ್ಷ ದೀಪಕ್‌ ಮುಲ್ಲಿಕ್‌ ಪ್ರತಿಕ್ರಿಯೆ ನೀಡಿದ್ದಾರೆ.

ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಅಧ್ಯಕ್ಷ : ವಿತ್ತ ಸಂಸ್ಥೆಗಳಲ್ಲಿನ ಬಡ್ಡಿದರ ಕಡಿತಗೊಳಿಸಿರುವುದರಿಂದ ಜನ ಷೇರುಗಳ ಮೇಲೆ ಬಂಡವಾಳ ಹೂಡಲು ನಾಮುಂದು ತಾಮುಂದು ಅನ್ನಲಿದ್ದಾರೆ. ನಮ್ಮ ಮಟ್ಟಿಗೆ, ಅದರಲ್ಲೂ ಸ್ಟಾಕ್‌ ಮಾರುಕಟ್ಟೆಯ ವಹಿವಾಟಿಗೆ ಸಿನ್ಹಾರ ಬಜೆಟ್ಟು ವರದಾನವಾಗಿದೆ ಎನ್ನುತ್ತಾರೆ ಬಿಎಸ್‌ಸಿ ಅಧ್ಯಕ್ಷ ಆನಂದ್‌ ರತಿ.

ಅಸೋಕ್ಯಾಮ್‌ ಅಧ್ಯಕ್ಷ ರಘು ಮೋದಿ ಬಜೆಟ್ಟನ್ನು ಸ್ವಾಗತಾರ್ಹ ಎನ್ನುತ್ತಾರೆ. ಸಿನ್ಹಾರು ನಮ್ಮ ಸಂಸ್ಥೆಯ ಕೆಲವು ಶಿಫಾರಸುಗಳಿಗೂ ಸ್ಪಂದಿಸಿರುವುದು ನಮಗೆ ಖುಷಿ ತಂದಿದೆ. ಕೈಗಾರಿಕೆಗಳ ಸರ್ವತೋಮುಖ ಅಭಿವೃದ್ಧಿಯಲ್ಲೇ ಕಾರ್ಮಿಕನ ಹಿತ ಅಡಗಿರುತ್ತದೆ. ಈ ನಿಟ್ಟಿನಲ್ಲಿ ಬಜೆಟ್‌ ಅತ್ಯುತ್ತಮವಾಗಿದೆ. ವಿದ್ಯುತ್‌ ಮತ್ತು ದೂರಸಂಪರ್ಕ ಕ್ಷೇತ್ರಗಳಿಗೆ ಒತ್ತು ಕೊಟ್ಟಿರುವುದಲ್ಲದೆ, ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಖಾಸಗಿಯವರನ್ನೂ ತೊಡಗಿಸಿಕೊಳ್ಳುವ ಸಿನ್ಹಾರ ನಿರ್ಧಾರ ಖಂಡಿತ ಸ್ವಾಗತಾರ್ಹ.

ನಾಸ್‌ಕಾಮ್‌ ಅಧ್ಯಕ್ಷ, ದೇವಾಂಗ್‌ ಮೆಹ್ತಾ : ಎಡಿಆರ್‌ ಹಾಗೂ ಜಿಡಿಆರ್‌ ಪ್ರಮಾಣಕಗಳಲ್ಲಿನ ಬದಲಾವಣೆ ಉತ್ತಮ ಹೆಜ್ಜೆ. ನಾಸ್ದಾಕ್‌ ಮತ್ತು ಎನ್‌ವೈಎಸ್‌ಸಿ ಪಟ್ಟಿಯಲ್ಲಿನ ಐಟಿ ಕಂಪನಿಗಳಿಗಂತೂ ಇನ್ನು ಸುಗ್ಗಿ.

ಎಫ್‌ಐಸಿಸಿಐ ಅಧ್ಯಕ್ಷ, ಚಿರಾಗ್‌ ಆರ್‌. ಅಮೀನ್‌ : ಬಂಡವಾಳ ಹೂಡಿಕೆ ಹೆಚ್ಚಿಸುವುದು ಈ ಬಜೆಟ್‌ನ ಪ್ರಮುಖ ಉದ್ದಿಶ್ಯ. ದೇಶದ ಅರ್ಥ ವ್ಯವಸ್ಥೆ ಹೊಸ ಚಾಲನೆ ಪಡೆದುಕೊಳ್ಳುವಲ್ಲಿ ಇದು ಸಹಕಾರಿಯಾಗಬಲ್ಲದು. ಮೇಲ್ನೋಟಕ್ಕೆ ಮಾಹಿತಿ ತಂತ್ರಜ್ಞಾನಕ್ಕೇ ಹೆಚ್ಚು ಒತ್ತು ಅನ್ನುವಂತೆ ಕಂಡರೂ ವಾಸ್ತವವಾಗಿ ಅದು ಇಡೀ ದೇಶದ ಆರ್ಥಿಕ ಪ್ರಗತಿಗೆ ಪೂರಕವಾದಂಥದು.

ನೀಲಿಮಾ ಸಿನ್ಹ : ನನ್ನ ಪತಿ ಮಂಡಿಸಿರುವ ಬಜೆಟ್ಟು ಪ್ರತಿಯಾಬ್ಬರಿಗೂ ಮೆಚ್ಚಾಗುತ್ತದೆ. ಯಾವುದೇ ವ್ಯಕ್ತಿಯ ಕಿವಿ ಹಿಂಡುವಂತಹದ್ದಲ್ಲದೆ, ಸಮತೋಲಿತವಾದ ಈ ಬಜೆಟ್ಟು ನನಗಂತೂ ಖುಷಿ ತಂದಿದೆ ಎನ್ನುತ್ತಾರೆ ವಿತ್ತ ಸಚಿವರ ಪತ್ನಿ ನೀಲಿಮಾ ಸಿನ್ಹ.

ವಿ.ರಂಗನಾಥನ್‌, ಅರ್ಥಶಾಸ್ತ್ರ ಪ್ರಾಧ್ಯಾಪಕ, ಐಐಎಂಬಿ : ಬಂಡವಾಳ ವಾಪಸಾತಿಯನ್ನು ತ್ವರಿತಗೊಳಿಸಿದಂತೆ ಲಂಚಗುಳಿತನಕ್ಕೂ ತಂತಾನೇ ವೇಗ ದೊರೆಯುತ್ತದೆ.

ಕಾಂಗ್ರೆಸ್‌ ಸಂಸದೀಯ ಪಕ್ಷದ ಧುರೀಣ ಪ್ರಿಯರಂಜನ್‌ ದಾಸ್‌ ಮುಂಶಿ: ದಿಕ್ಕುದಿಸೆಯಿಲ್ಲದ, ಬಡಬಗ್ಗರ ಹಾಗೂ ಕಾರ್ಮಿಕ ವಿರೋಧಿ ಬಜೆಟ್ಟು ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಹೊರಬಿದ್ದಿದೆ. ನಬಾರ್ಡಿನಿಂದ ಸಾಕಷ್ಟು ನೆರವು ಕಸಿಯುವ ಹೆಜ್ಜೆಯಾಂದೇ ಇದರಲ್ಲಿ ಉತ್ತಮ. ಆದರೂ ನೆರವು ಹರಿಯುವ ಹಾದಿಯಲ್ಲಿ ಸಾಕಷ್ಟು ಗುರುಮ ಘಾತುಕರು ಇರುವುದರಿಂದ ಹಣ ಸೋರಿಹೋಗುವ ಹಾಗೂ ನೆರವು ವಿಳಂಬವಾಗಿ ತಲುಪುವ ಸಾಧ್ಯತೆಗಳಿವೆ. ಕಾರ್ಮಿಕ ನಾಯಕರ ಅಭಿಪ್ರಾಯ ಸಂಗ್ರಹಿಸದೆ ಬಜೆಟ್ಟನ್ನು ಸಿದ್ಧಪಡಿಸಿರುವುದೂ ಅದರ ಲೋಪಕ್ಕೆ ಕಾರಣವಾಗಿದೆ.

ಎಡಪಕ್ಷಗಳು : ಈ ಬಜೆಟ್‌ ದೇಶದ ಜನಸಂಖ್ಯೆಯ ಕೇವಲ ಶೇ.5ರಷ್ಟು ಮಂದಿಗೆ ಮಾತ್ರ ಹೇಳಿಮಾಡಿಸಿದಂತಿದೆ- ಸಮತಾ ಪಕ್ಷದ ನಾಯಕ ಮುಲಾಯಂ ಸಿಂಗ್‌ ಯಾದವ್‌.
ಬಡವರ ಹಾಗೂ ಕಾರ್ಮಿಕ ವರ್ಗದವರಿಗೆ ವಿರೋಧಿಯಾಗಿದೆ ಈ ಬಜೆಟ್‌- ಸಿಪಿಐ (ಎಂ) ನಾಯಕ ಸೋಮನಾಥ್‌ ಚಟರ್ಜಿ.
ಸಣ್ಣ ಕೈಗಾರಿಕೆಗಳಿಗೆ ಒತ್ತು ಕೊಟ್ಟಿದ್ದರೂ ಸಹ ಒಟ್ಟಾರೆ ಬಜೆಟ್‌ ಆರ್ಥಿಕ ಅಭಿವೃದ್ಧಿಯ ಹಾದಿಯನ್ನು ಬೇಗ ಸವೆಸುವುದು ಅನುಮಾನ- ಶರದ್‌ ಪವಾರ್‌ (ಎನ್‌ಸಿಪಿ)

(ಸುದ್ದಿ ಸಂಸ್ಥೆಗಳು)

ಮುಖಪುಟ / ಬಜೆಟ್‌ 2001 -ಚಞಟ 2002

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more