Get Updates
Get notified of breaking news, exclusive insights, and must-see stories!

ಮುದ್ರಿತ ಅಂಚೆ ಕಾರ್ಡ್‌ಗೆ 3 ರು, ಸ್ಪರ್ಧಾ ಕಾರ್ಡ್‌ಗಳಿಗೆ 5 ರು.

ನವದೆಹಲಿ : ಜನಪ್ರಿಯ ಕೌನ್‌ ಬನೇಗಾ ಕರೋಡ್‌ ಪತಿ ಸ್ಪರ್ಧೆಗೂ ಈಗ ಸ್ಪರ್ಧಾ ಪೋಸ್ಟ್‌ಕಾರ್ಡ್‌ ಬೇಕು. ವೈಲ್ಡ್‌ ಕಾರ್ಡ್‌ ಎಂಬ ಹೊಸ ಪ್ರವೇಶ ಈ ಸ್ಪರ್ಧೆ ಸೇರಿದೆ. ಪೋಸ್ಟ್‌ ಕಾರ್ಡ್‌ನಲ್ಲಿ ಉತ್ತರ ಬರೆದು ಅಮಿತಾಬ್‌ ಬಚ್ಚನ್‌ ಕೇಳುವ ಪ್ರಶ್ನೆಗೆ ಉತ್ತರ ಬರೆಯುವವರಿಗೆ ಮುಂದಿನ ಆರ್ಥಿಕ ವರ್ಷಕ್ಕಾಗಿ ಮಂಡಿಸಲಾಗಿರುವ ಬಜೆಟ್‌ ಷಾಕ್‌ಕೊಟ್ಟಿದೆ.

ಬುಧವಾರ ಸಂಸತ್ತಿನಲ್ಲಿ ಮಂಡಿಸಲಾದ ಮುಂಗಡಪತ್ರದಲ್ಲಿ ಅಂಚೆ ಪತ್ರಗಳ ಬೆಲೆ ಹಾಗೂ ಅಂಚೆ ಶುಲ್ಕ ಗಣನೀಯ ಪ್ರಮಾಣದಲ್ಲಿ ಏರಿದೆ. ಮುದ್ರಿತ ಅಂಚೆ ಕಾರ್ಡ್‌ಗಳ ಬೆಲೆ ಒಂದು ರುಪಾಯಿ ಏರಿದ್ದು, 3 ರು. ಆಗಿದೆ. ಸ್ಪರ್ಧಾ ಪೋಸ್ಟ್‌ ಕಾರ್ಡ್‌ ಬೆಲೆ ನಾಲ್ಕು ರುಪಾಯಿಯಿಂದ 5 ರುಪಾಯಿಗೆ ಏರಿದೆ.

20 ಗ್ರಾಂಗಿಂತಲೂ ಹೆಚ್ಚು ತೂಕದ ಪತ್ರಗಳಿಗೆ 1 ರುಪಾಯಿ ಏರಿಕೆ ಆಗಿದೆ. 500 ಗ್ರಾಂ ತೂಕದ ಪಾರ್ಸಲ್‌ಗಳ ಅಂಚೆ ದರ 12 ರುಪಾಯಿಗಳಿಂದ 16ಕ್ಕೆ ಏರಿದೆ. 500 ಗ್ರಾಂಗಳಿಗಿಂತಲೂ ಹೆಚ್ಚಾದ ಪಾರ್ಸಲ್‌ಗಳಿಗೆ ಹಿಂದಿನ ದರವೇ ಅನ್ವಯಿಸಲಿದೆ. ನೋಂದಾಯಿತ ಅಂಚೆ (ರಿಜಿಸ್ಟರ್ಡ್‌ ಪೋಸ್ಟ್‌) ದರ 14 ಇದ್ದದ್ದು 17ರುಪಾಯಿ ಆಗಿದೆ.

ನೋಂದಾಯಿತ ವೃತ್ತ ಪತ್ರಿಕೆಗಳ ರವಾನೆ ದರವೂ ಏರಿದೆ. ನೋಂದಾಯಿತ ಅಂಚೆಯ ಸ್ಥಿರೀಕರಣದ ದರವನ್ನು 2 ರುಪಾಯಿಗಳಿಂದ 3 ರುಪಾಯಿಗಳಿಗೆ ಹೆಚ್ಚಿಸಲಾಗಿದೆ. ಪುಸ್ತಕದ ಕಟ್ಟುಗಳ, ಮುದ್ರಿತ ಪುಸ್ತಕಗಳ ಹಾಗೂ ನಿಯತಕಾಲಿಕಗಳ ದರವೂ 50 ಪೈಸೆಯಿಂದ ಒಂದು ರುಪಾಯಿಗೆ ಏರಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+