Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ನಿಮ್ಮ ಮನೆಗೆ ಬರುವ ನೆಂಟರು ಶುಭ ಸಮಾಚಾರ ಹೊತ್ತು ತರುವುದರಿಂದ ಅವರನ್ನು ಕೀಳಾಗಿ ಕಾಣಬೇಡಿ. ಅತಿಥಿ ದೇವೋಭವ ಎಂಬುದನ್ನು ಇವತ್ತು ನೀವು ಪಾಲಿಸುತ್ತೀರಿ.

ವೃಷಭ : ಆಫರ್‌ಗಳು ಬರುತ್ತವೆ, ಖುಷಿ ತರುತ್ತವೆ,ಹಣ ತರುತ್ತವೆ -ಆದರೆ ನಿಮ್ಮ ಮನಸ್ಸು ಎತ್ತಲೋ ಇದೆ. ಅವೆಲ್ಲದರ ಚಿಂತೆ ಬಿಟ್ಟು ವಾಸ್ತವಕ್ಕೆ ಬಂದರೆ ನೀವು ಸಂತಸ ಪಡಬಹುದಾದ ಎಷ್ಟೊಂದು ವಿಷಯಗಳು ಇಲ್ಲಿವೆ !

ಮಿಥುನ : ಈ ನಿರಾಸಕ್ತಿಯಿಂದ ಮುಂದೆ ಪಶ್ಚಾತ್ತಾಪ ಪಡಬೇಕಾದೀತು. ವಿವರಣೆಗಳು, ಪ್ರಶ್ನೆಗಳನ್ನು ಬಿಡಿಸುತ್ತಾ, ಕಟ್ಟುತ್ತಾ ಕೂರುವುದರಿಂದ ಪ್ರಯೋಜನವಿಲ್ಲ. ಬಂಧುಗಳ ಪತ್ರ ನಿಮ್ಮನ್ನು ಖುಷಿಯಾಗಿರಿಸುತ್ತದೆ.

ಕಟಕ : ಸಂಗೀತ ಕೇಳುವುದೆಂದರೆ ಇಷ್ಟನಾ...? ಇವತ್ತು ನಿಮಗೆ ಒಳ್ಳೆಯ ಅವಕಾಶ ಇದೆ. ಸಂಜೆ ಸ್ವಲ್ಪ ಹೊತ್ತು ಬಿಡುವು ಮಾಡಿಕೊಳ್ಳಿ. ಬ್ಯಾಂಕ್‌, ಷೇರು ಅಂತೆಲ್ಲಾ ಇವತ್ತು ತಲೆ ಕೆಡಿಸಿಕೊಳ್ಳಬೇಡಿ. ನಾಳೆ ಅವುಗಳೆಲ್ಲಾ ಇದ್ದೇ ಇರುತ್ತವೆ ಅಲ್ವ !

ಸಿಂಹ : ಬೆನ್ನು ನೋವಿನ ತೊಂದರೆ ಬಿಟ್ಟರೆ, ಇವತ್ತಿನ ಕೆಲಸಗಳು ವಾಯು ವೇಗದಲ್ಲಿ ನಡೆಯುತ್ತವೆ. ನಿಮ್ಮ ಸಹೋದ್ಯೋಗಿಗಳು ಇವತ್ತು ಖುಷಿಯಿಂದ ನಿಮ್ಮೊಡನೆ ಸಹಕರಿಸುತ್ತಾರೆ.

ಕನ್ಯಾ : ಸೋದರರೊಂದಿಗೆ ಕಲಹವೇಕೆ ? ನೀಟಾಗಿ ಕುಳಿತು ಚರ್ಚೆ ಮಾಡಿ ನಿಮ್ಮ ಸಂಶಯಗಳನ್ನು ಪರಿಹರಿಸಿಕೊಂಡರಾಯಿತು. ಸುಮ್ಮನೇ ಮುಖ ಊದಿಸಿಕೊಳ್ಳಬೇಡಿ.

ತುಲಾ : ದುಡುಕಿ ಮಾತಾಡಿದರೆ ಕೆಲಸ ಕೆಟ್ಟು ಹೋಗುತ್ತದೆ. ಕೆಲವು ಸ್ವಭಾವಗಳನ್ನು ಹಾಗೆಲ್ಲಾ ತಿದ್ದುವುದಕ್ಕಾಗುವುದಿಲ್ಲ. ಮೊಂಡು ವಾದಗಳು ಪ್ರಯೋಜನ ನೀಡುವುದಿಲ್ಲ. ಸಂಗಾತಿಯಾಂದಿಗೆ ಶುಭ ಸಂಜೆ ಕಳೆಯುತ್ತೀರಿ.

ವೃಶ್ಚಿಕ : ಕೋಳಿ ಜಗಳಕ್ಕೆ ವೇದಾಂತದ ಲೇಪ ಯಾಕೆ ? ಇವತ್ತು ಆಫೀಸಿನಲ್ಲಿ ಕೆಲಸದ ಮೂಟೆ ನಿಮ್ಮನ್ನು ಕಾಯುತ್ತಿದೆ. ಸ್ನೇಹಿತರ ಹುಸಿ ಕೋಪ ತಾಪಗಳ ನಡುವೆ ಬಿರಿkು ದಿನ ಬೇಜಾರಿಲ್ಲದೆ ಕಳೆಯುತ್ತದೆ.

ಧನಸ್ಸು : ಸೃಜನ ಶೀಲ ಬರವಣಿಗೆಗಳ ಕೆಲಸ ಆರಂಭಿಸಬೇಕು ಅಂತ ಎಷ್ಟೋ ದಿನದಿಂದ ಅಂದುಕೊಂಡಿರುವುದು ಕಾರ್ಯರೂಪಕ್ಕೆ ಬರಲಿದೆ. ಮನೆಯಲ್ಲಿನ ಶುಭ ಕಾರ್ಯಕ್ಕೆ ಈಗಲೇ ತಯಾರಿ ಆರಂಭಿಸುವ ಉತ್ಸಾಹ ನಿಮ್ಮ ದಿನವನ್ನು ಸುಂದರವಾಗಿಸುತ್ತದೆ.

ಮಕರ : ನಿಮಗನಿಸಿದ್ದನ್ನು ನಿಷ್ಟುರವಾಗಿ ಹೇಳಿದಲ್ಲಿ ಯಾವ ಪರ್ವತವೂ ಬೀಳುವುದಿಲ್ಲ. ಇವತ್ತಿನ ಬಿಡುವನ್ನಾದರೂ ಸದುಪಯೋಗ ಪಡಿಸಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಬಂಧುಗಳಿಗೆ ಬೇಸರ ತರುತ್ತೀರಿ.

ಕುಂಭ : ಉದರ ಬೇನೆಯಿಂದ ವೃಥಾ ಖರ್ಚು ಒಂದೆಡೆಯಾದರೆ, ಮತ್ತೊಂದೆಡೆ ಭಯ ಆತಂಕಗಳಿಂದ ಸೊರಗುತ್ತೀರಿ. ಆದರೆ ಸದ್ಯದಲ್ಲಿಯೇ ನಿಮ್ಮ ಬಳಿ ಬರಲಿರುವ ಶುಭ ಸುದ್ದಿ ನಿಮ್ಮನ್ನು ಚೇತರಿಸಿಕೊಳ್ಳುವಂತೆ ಮಾಡುತ್ತದೆ.

ಮೀನ : ಸರತಿಯ ಸಾಲಿನಲ್ಲಿ ಕ್ರಮವಾಗಿ ನಡೆಯಬೇಕು. ಇಲ್ಲದೇ ಇದ್ದಲ್ಲಿ ಮುಂದೆ ಇರುವವರು ಗದರುವುದಿಲ್ಲವೇ ? ದೇವತಾ ಕಾರ್ಯದತ್ತ ನಿಮ್ಮ ಒಲವು ಕಿಸೆ ಖಾಲಿ ಮಾಡುತ್ತದೆ. ಆದರೆ ಸಿಗುವ ಖುಷಿಗೆ ಪಾರವುಂಟೇ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+