ಫಸ್ಟ್ ರಿಯಾಕ್ಷನ್ ! ವೇಗವಾಗಿ ಕಾರುಗಳ ಬೆಲೆ ಇಳಿಸಿದ ಮಾರುತಿ
ನವದೆಹಲಿ : ಬಜೆಟ್ ಹೊರಬಿದ್ದದ್ದೇ ತಡ, ಮಾರುತಿ ಉದ್ಯೋಗ್ ಲಿಮಿಟೆಡ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ಪ್ರಕಟಿಸಿದೆ. ಬುಧವಾರದಿಂದಲೇ ಮಾರುತಿ ಕಾರುಗಳ ಬೆಲೆ ಆಯಾ ಮಾದರಿಗೆ ಅನುಗುಣವಾಗಿ 11 ಸಾವಿರ ರುಪಾಯಿಯಿಂದ 42 ಸಾವಿರ ರುಪಾಯಿವರೆಗೆ ಅಗ್ಗವಾಗಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ತೆರಿಗೆಯಲ್ಲಿ ಆಗಲಿರುವ ಕಡಿತವನ್ನು ಕಂಪನಿ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳದೆ ಗ್ರಾಹಕರ ಮಿತ್ರನಾಗುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ. ಮಾರುತಿಯ ವಿವಿಧ ಮಾದರಿಗಳ ಮೇಲೆ ಕಡಿತಗೊಳ್ಳುವ ದರ ಇಂತಿದೆ-
ಮಾರುತಿ 800 ಗೆ 11 ಸಾವಿರ ರು. ಕಡಿತ, ಬೆಲಿನೊ ಗೆ 42 ಸಾವಿರ ಕಡಿತ, ಆಲ್ಟೋಗೆ 16 ಸಾವಿರದ 500 ರುಪಾಯಿ ಕಡಿತ, ವ್ಯಾಗನ್ ಆರ್ ಗೆ 18 ರಿಂದ 19 ಸಾವಿರ, ಝೆನ್‌ಗೆ 18 ಸಾವಿರ ಕಡಿತ ಹಾಗೂ ಎಸ್ಟೀಮ್ ದರದಲ್ಲಿ 25 ಸಾವಿರ ಕಡಿತ ದೊರೆಯಲಿದೆ.
ಬಂಗಾರದ ಮೇಲಿನ ಸುಂಕದಲ್ಲಿ ಇಳಿಕೆ
ಕಂಪ್ಯೂಟರ್ ಹಾಗೂ ಟೆಲಿಕಾಂ ಸಾಧನಗಳ ಬೆಲೆಗಳನ್ನು ಕುಗ್ಗಿಸಿ ಐಟಿ ಪ್ರಿಯರ ಮೆಚ್ಚುಗೆ ಗಳಿಸಿರುವ ಕೇಂದ್ರ ಹಣಕಾಸು ಖಾತೆ ಸಚಿವ ಯಶವಂತ ಸಿನ್ಹಾ ಬಂಗಾರದ ಬೆಲೆಯಲ್ಲೂ ಇಳಿಕೆ ತರುವ ಮೂಲಕ ಹೆಂಗಳೆಯರನ್ನೂ ತೃಪ್ತಿ ಪಡಿಸಲು ಪ್ರಯತ್ನಿಸಿದ್ದಾರೆ. ಬಂಗಾರದ ಮೇಲಿನ ಸುಂಕವನ್ನು ಪ್ರತಿ 10 ಗ್ರಾಂಗೆ 400 ರುಪಾಯಿಯಿಂದ 250 ರುಪಾಯಿಗೆ ತಗ್ಗಿಸುವುದಾಗಿ ಅವರು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ. ಇದರಿಂದಾಗಿ, ಬಂಗಾರದ ಬೆಲೆ ಪ್ರತಿ 10 ಗ್ರಾಂಗೆ 150 ರುಪಾಯಿಯಷ್ಟು ಅಗ್ಗವಾಗಲಿದೆ. ಬಂಗಾರದ ಕಳ್ಳ ಸಾಗಣೆ ತಡೆಗಟ್ಟಲು ಈ ಕ್ರಮ ಕೈಗೊಂಡಿರುವುದಾಗಿ ಸಚಿವರು ಪ್ರಕಟಿಸಿದ್ದಾರೆ.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications