ಹೊನ್ನಾವರದಲ್ಲಿ ಮಂಗನ ಕಾಯಿಲೆ, ಐದು ಮಂದಿ ಆಸ್ಪತ್ರೆಗೆ
ಹೊನ್ನಾವರ : ಇಲ್ಲಿನ ಮಂಕಿ, ಸಂಶಿ, ಮಾಗೋಡು ಮತ್ತು ಶರಾವತಿ ಎಡದಂಡೆ ಗ್ರಾಮಗಳಲ್ಲಿ ಮಂಗಗಳು ಸಾಯುತ್ತಿರುವುದು ಕಂಡು ಬಂದಿದ್ದು, ಈ ಪ್ರದೇಶಗಳ ಆಸು ಪಾಸಿನಲ್ಲಿ ವಾಸಿಸುವ ಐದು ಮಂದಿ ವಿಪರೀತ ಜ್ವರದಿಂದ ಬಳಲುತ್ತಿದ್ದಾರೆ.
ಈಗಾಗಲೇ ಐದು ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಂಜು ಶಿವ ಗೌಡ(23) ಅವರ ಸ್ಥಿತಿ ಕರುಣಾಜನಕವಾಗಿದ್ದು ಅವರನ್ನು ಹುಬ್ಬಳ್ಳಿಯ ಕೆ.ಎಂ. ಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಗೌರಿ ಮಂಜುಗೌಡ(18), ಪಾರ್ವತಿ ಸಣಕೂಸ ಗೌಡ(15), ಮಂಜು ಕೃಷ್ಣ ಗೌಡ (45), ನಾಗವೇಣಿ ಶಿವಯ್ಯ ಗೌಡ(19) ಅವರು ಹೊನ್ನಾವರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ಧಾಪುರದ ಕ್ಯಾದಗಿ, ಜೋಯಿಡಾಗಳಲ್ಲಿ ಮಂಗಗಳು ಸತ್ತಿವೆ. ಮಂಗ ಸತ್ತ ಸ್ಥಳದಿಂದ ಸುಮಾರು ನಾಲ್ಕು- ಐದು ಕಿ.ಮೀ. ದೂರದವರೆಗೆ ಹರಡುವ ಉಣ್ಣಿಗಳು ಮಂಗನ ಕಾಯಿಲೆಯನ್ನು ಹಬ್ಬಿಸುತ್ತವೆ.
ಶಿವಮೊಗ್ಗದ ಲಸಿಕೆ ತಯಾರಿಕಾಕೇಂದ್ರದಲ್ಲಿ , ಉಪಕರಣಗಳು ಮತ್ತು ಕಟ್ಟಡಗಳು ಸರಿಯಾಗಿಲ್ಲ ಎಂಬ ಕಾರಣಕ್ಕೆ ರಾಜ್ಯ ಔಷಧಿ ನಿಯಂತ್ರಕರು ಪರವಾನಿಗಿ ರದ್ದು ಪಡಿಸಿದ್ದಾರೆ. ಈ ಘಟಕಗಳು ಹಿಂದೆ ವರ್ಷಕ್ಕೆ ಲಕ್ಷ ಡೋಸ್ ಲಸಿಕೆಗಳನ್ನು ತಯಾರಿಸುತ್ತಿದ್ದವು. ಆದರೆ ಈ ಬಾರಿ ಹತ್ತು ಸಾವಿರ ಡೋಸ್ ಲಸಿಕೆ ತಯಾರಾಗಿದ್ದು, ಮಂಗನಕಾಯಿಲೆ ಸಂಭವನೀಯ ಪ್ರದೇಶಗಳಲ್ಲಿ ಅವುಗಳನ್ನು ವಿತರಿಸಲಾಗಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications