ಬಜೆಟ್ - 2001.. ಬಂಡವಾಳ ಮಾರುಕಟ್ಟೆಯ ಸುತ್ತ ಗಿರಕಿ ...
ನವದೆಹಲಿ : ನೇರ ತೆರಿಗೆ - ಪರೋಕ್ಷ ತೆರಿಗೆಯಿಂದ ಆರ್ಥಿಕ ಸುಧಾರಣೆಯತ್ತ ಮುಖಮಾಡಿರುವ ಯಶವಂತಸಿನ್ಹ ಅವರ ಬಜೆಟ್ ಎಲ್ಲಿ ಗೆದ್ದಿದೆ ? ಎಲ್ಲಿ ಎಡವಿದೆ. ತೆರಿಗೆ ವಿನಾಯಿತಿ, ಸರಕಾರಿ ವೆಚ್ಚ, ಕೈಗಾರಿಕೆ ಮತ್ತು ಬಂಡವಾಳ ಮಾರುಕಟ್ಟೆಗೆ ಮಾತ್ರ ಅನ್ವಯಿಸುವಂತಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಮದು ತೆರಿಗೆ ವಿನಾಯಿತಿ ವಿನಾ ಮತ್ತಾವ ಸುಧಾರಣೆ ಕಂಡುಬಂದಿಲ್ಲ
ಶೈತ್ಯಾಗಾರ ನಿರ್ಮಾಣಕ್ಕೆ ಮಾತ್ರ ಸಬ್ಸಿಡಿ ನೀಡಲಾಗಿದೆ. ಯೋಜನೆ ಮಂಡಳಿ ಮೂಲಕ ನೀರಾವರಿ ಸೌಲಭ್ಯ ಹೆಚ್ಚಳಕ್ಕೆ ಕ್ರಮ ಕೈಗೊಂಡಿಲ್ಲ. ನಮ್ಮ ದೇಶದ ಕೃಷಿ ಇನ್ನೂ ಮಳೆಯನ್ನೇ ಅವಲಂಬಿಸಿದೆ. ನೀರಾವರಿ ಮೇಲೆ ಹೆಚ್ಚಿನ ಗಮನ ಹರಿಸದ ಕಾರಣ ಮುಂದಿನ ದಿನಗಳಲ್ಲಿ ದೇಶ ಸಂಕಷ್ಟ ಎದುರಿಸುವ ಸ್ಥಿತಿ ಬಂದಿದೆ.
ರೈಲ್ವೆ ಬಜೆಟ್‌ನಂತೆಯೇ ಈ ಬಜೆಟ್ ಮೇಲೂ ಚುನಾವಣೆಯ ಗಾಳಿ ಬೀಸಿದೆ. ಡಬ್ಲ್ಯೂಟಿಓ ಆಘಾತದಿಂದ ಆಗುವ ನಷ್ಟ - ಲಾಭದ ಚರ್ಚೆ ನಡೆಯಲೇಬೇಕು. ಕೃಷಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಶೂನ್ಯ. ಗೊಬ್ಬರ ಬಳಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ರಾಷ್ಟ್ರದ ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ನೀಡಿದ ಬಜೆಟ್ ಇದು .
ಪ್ರಸಕ್ತ ಬಜೆಟ್‌ನ ಕೃಷಿ ನೀತಿಗೂ - ಯೋಜನೆ ಆಯೋಗದ ನೀತಿಗೂ ತಾಳಮೇಳ ಇಲ್ಲ. ಇಂತಹ ಕೃಷಿ ನೀತಿಯಿಂದ ಯಾವುದೇ ಪ್ರಯೋಜನ ಇಲ್ಲ. ಬುಧವಾರ ಮಂಡಿಸಲಾದ ಬಜೆಟ್‌ನಲ್ಲಿ ಕೇವಲ ಬಂಡವಾಳ ಮಾರುಕಟ್ಟೆಯ ಸುತ್ತ ಮಾತ್ರ ಗಿರಕಿ ಹೊಡೆಯುತ್ತಿದೆ.
ಬಜೆಟ್‌ನ ಮತ್ತಷ್ಟು ಮುಖ್ಯಾಂಶಗಳು : ಹೊಸ ಅಬಕಾರಿ ಸುಂಕದಲ್ಲಿ ಪಾರದರ್ಶಕತ್ವ. ನೇರ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಶೇಕಡಾ 2ರಷ್ಟು ಭೂಕಂಪದ ಅಧಿಕರ, ನಷ್ಟದಲ್ಲಿರುವ ಕಂಪನಿಗಳಿಗೂ ಸಹ ಅದಾಯ ತೆರಿಗೆ ನಮೂನೆ - ವಿವರ ಸಲ್ಲಿಕೆ ಕಡ್ಡಾಯ, ಒಂದು ಲಕ್ಷಕ್ಕೂ ಕಡಿಮೆ ವೇತನ ವರಮಾನದ ವ್ಯಕ್ತಿಗಳಿಗೆ ಶೇ. 30ರ ವಿನಾಯಿತಿ.
ಡಿವಿಡೆಂಡ್ ತೆರಿಗೆ ಶೇ. 10ರಷ್ಟು ಇಳಿಕೆ. ಮೂಲಭೂತ ಸೌಕರ್ಯದ ಕಂಪನಿಗಳಿಗೆ 10 ವರ್ಷಗಳ ಕಾಲ ತೆರಿಗೆ ರಜೆ, ಮೂಲಭೂತ ಸೌಕರ್ಯ ಯೋಜನೆಗೆ ಆದ್ಯತೆ. ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ವಿಶೇಷ ಆದ್ಯತೆ, ತೆರಿಗೆ ದಾರರಿಗೆ ಸ್ನೇಹಪರ ಯೋಜನೆ, ವೈದ್ಯಕೀಯ ಹಾಗೂ ಶಿಕ್ಷಣ ಸಂಸ್ಥೆಗಳ ಆದಾಯ ನಿರ್ಧರಣೆಯ ಹಕ್ಕು ತೆರಿಗೆ ಆಯುಕ್ತರಿಗೆ.
ವಿದೇಶಿ ಚಾನೆಲ್‌ಗಳ ಮೇಲೆ ತೆರಿಗೆ ಹೇರಿಕೆ, 1.63,031 ಕೋಟಿ ರುಪಾಯಿ ತೆರಿಗೆ ನಿರೀಕ್ಷೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications