ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೂನಿಯನ್‌ ಬಜೆಟ್‌ ಮಿಂಚಿನ ಓಟ, ನೋಟ

By Staff
|
Google Oneindia Kannada News

ನವದೆಹಲಿ : ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ ಪ್ರಕ್ರಿಯೆಗೆ ತೀವ್ರ ಚಾಲನೆ, ವಿದೇಶದಲ್ಲಿ ಭಾರತೀಯ ಕಂಪನಿಗಳು 50 ಮಿಲಿಯನ್‌ ಡಾಲರ್‌ವರೆಗೆ ಬಂಡವಾಳ ಹೂಡಲು ಅವಕಾಶ. ಕೃಷಿ ಸುಧಾರಣೆಗೆ ಒತ್ತು. ವಿದ್ಯುತ್‌ ವಿತರಣೆ ವಾಣಿಜ್ಯೀಕರಣ, ಸಿಗರೇಟಿನ ಮೇಲೆ ಶೇ. 15 ಹೆಚ್ಚುವರಿ ತೆರಿಗೆ, ಬ್ಯಾಂಕಿಂಗ್‌ ಸರ್ವೀಸ್‌ ರೆಕ್ರ್ಯೂಟ್‌ಮೆಂಟ್‌ ಬೋರ್ಡ್‌ ರದ್ದು, ಭವಿಷ್ಯನಿಧಿ ಹಾಗೂ ಸಣ್ಣ ಉಳಿತಾಯ ಯೋಜನೆ ಠೇವಣಿಗಳ ಬಡ್ಡಿ ದರ ಶೇ.1..5ರಷ್ಟು ಇಳಿಕೆ, ವಿದೇಶೀ ಕಂಪನಿಗಳ ಷೇರು ಕೊಳ್ಳಲು ಇದ್ದ ಮಿತಿ ಏರಿಕೆ. ಇದು ಯಶವಂತ ಸಿನ್ಹಾ ಬುಧವಾರ ಸಂಸತ್ತಿನಲ್ಲಿ ಮಂಡಿಸಿದ ಬಜೆಟ್‌ 2001-2002ರ ಕೆಲವು ಅಂಶಗಳು.

ಬಜೆಟ್‌ನಲ್ಲಿನ ಇನ್ನಿತರ ಅಂಶಗಳು:

  1. ಪೆಟ್ರೋಲಿಯಂ ಕ್ಷೇತ್ರದಲ್ಲಿ ವ್ಯವಸ್ಥಿತ ದರ ಪದ್ಧತಿ ಜಾರಿ.
  2. ಹೊಸ 7 ಸಾಲ ವಸೂಲಾತಿ ನ್ಯಾಯಾಧಿಕರಣಗಳ ಸ್ಥಾಪನೆ.
  3. ಉದಾರೀಕರಣದಿಂದ ಹಾನಿಗೊಳಗಾದ ಕಾರ್ಮಿಕರಿಗೆ ಆಶ್ರಯ ವಿಮಾ ಯೋಜನೆ ಜಾರಿ.
  4. ಪಡಿತರ ಸಕ್ಕರೆ ಬೆಲೆ ಏರಿಕೆ.
  5. ರಾಷ್ಟ್ರೀಯ ರಸಗೊಬ್ಬರ ನೀತಿ.
  6. ಇಂಟರ್‌ನೆಟ್‌ ಕ್ಷೇತ್ರಕ್ಕೆ ಆದ್ಯತೆ.
  7. ಕೈಗಾರಿಕಾ ವ್ಯಾಜ್ಯ ಹಾಗೂ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ.
  8. ಹೊಸ ಶಿಕ್ಷಣ ಸಾಲ ಯೋಜನೆ ಜಾರಿ.
  9. ಮಹಿಳೆಯರ ಅಭಿವೃದ್ಧಿಗೆ ವಿಶೇಷ ಯೋಜನೆ.
  10. ಪರಿಶಿಷ್ಟರ ಅಭಿವೃದ್ಧಿಗೆ 500 ಕೋಟಿ ರುಪಾಯಿ ಬಂಡವಾಳ ನಿಗಮ ರಚನೆ.
  11. ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭತ್ಯೆ, ಶಿಕ್ಷಾ ಸಹಯೋಗ ಯೋಜನೆ.
  12. ಭೂ ರಹಿತ ಕೃಷಿ ಕಾರ್ಮಿಕರಿಗೆ ಹೊಸ ಯೋಜನೆ.
  13. ಅಸಂಘಟಿತ ಕಾರ್ಮಿಕ ವಲಯಕ್ಕೆ ಭವಿಷ್ಯನಿಧಿ ಯೋಜನೆ.
  14. ಪತ್ರಕರ್ತರಿಗಾಗಿ ಪತ್ರಕರ್ತ ಕಲ್ಯಾಣ ಯೋಜನೆ, ವಿತ್ತ ಇಲಾಖೆಯಿಂದ 1 ಕೋಟಿ ರುಪಾಯಿ.
  15. ನಬಾರ್ಡ್‌ ಸಾಲದ ಮೇಲಿನ ಬಡ್ಡಿ 11.5 ರಿಂದ 10.5ಕ್ಕೆ ಇಳಿಕೆ.
  16. ಅಂಚೆ ದರ ಪುನರ್‌ ವಿಮರ್ಶೆ.
  17. ಮುಂದಿನ ಎರಡು ವರ್ಷಗಳ ಅವಧಿಗೆ ಸರ್ಕಾರಿ ನೌಕರರಿಗೆ ಎಲ್‌.ಟಿ.ಸಿ. ಸೌಲಭ್ಯ ಇಲ್ಲ.
  18. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ದಾರರಿಗೆ ವೈಯಕ್ತಿಕ ವಿಮೆ.
  19. ರೂರ್ಕಿ ಎಂಜಿನಿಯರಿಂಗ್‌ ಕಾಲೇಜ್‌ ಮೇಲ್ದರ್ಜೆಗೆ.
  20. ಪ್ರಾಥಮಿಕ ಶಿಕ್ಷಣ - ರಾಷ್ಟ್ರೀಯ ಶಿಕ್ಷಣ ಯೋಜನೆಯಡಿಯಲ್ಲಿ ವಿಲೀನ.
ಮುಖಪುಟ / ಬಜೆಟ್‌ 2001 -ಚಞಟ 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X