Get Updates
Get notified of breaking news, exclusive insights, and must-see stories!

ಕಾರು ಓಡಿಸುವಾಗ ಮೊಬೈಲ್‌ ಬಳಸೀರಿ, ಅದು ಕಾನೂನಿಗೆ ವಿರುದ್ಧ

ಬೆಂಗಳೂರು : ಸಂಚಾರದಲ್ಲಿರುವಾಗ ಮೊಬೈಲ್‌ ಫೋನ್‌ ಬಳಸುವ ವಾಹನಗಳ ಮಾಲೀಕ ಹಾಗೂ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ಸಗೀರ್‌ ಅಹ್ಮದ್‌ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕಾರು ಸೇರಿದಂತೆ ಯಾವುದೇ ವಾಹನಗಳಲ್ಲಿ ಸಂಚರಿಸುವವರು ಇನ್ನು ಮುಂದೆ ಸಂಚರಿಸುವಾಗ ಮೊಬೈಲ್‌ ಬಳಸುವಂತಿಲ್ಲ . ಬಳಸಿದಲ್ಲಿ 300 ರುಪಾಯಿ ದಂಡ ವಿಧಿಸುವ ಹಾಗೂ ಮೊಬೈಲ್‌ ಫೋನನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಗ್ಲಾಸ್‌ ಪೂರ್ತಿ ಮುಚ್ಚಿ ಹವಾನಿಯಂತ್ರಿತ ಕಾರುಗಳನ್ನು ಚಲಾಯಿಸುತ್ತಾ ಮಾತನಾಡುವ ಖಯಾಲಿ ಇರುವವರ ಕಾರುಗಳನ್ನು ನಿಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಗೀರ್‌ ತಿಳಿಸಿದ್ದಾರೆ.

ಮೊಬೈಲ್‌ ಫೋನ್‌ ಬಳಕೆಯಿಂದಾಗಿ ಚಾಲಕನ ದೃಷ್ಟಿ ರಸ್ತೆಯ ಮೇಲಿರುವುದಿಲ್ಲ . ಇದರಿಂದಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಂತೂ ವಾಹನ ಚಲಾಯಿಸುತ್ತ ಫೋನ್‌ನಲ್ಲಿ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು , ಈ ಖಯಾಲಿಗೆ ಕಡಿವಾಣ ಹಾಕಲೇ ಬೇಕಾಗಿದೆ ಎಂದು ಸಚಿವರು ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+