Get Updates
Get notified of breaking news, exclusive insights, and must-see stories!

ವೀರಪ್ಪನ್‌ ಶರಣಾಗುವಂತೆ ಮಾಡಲು ಕರುಣಾನಿಧಿ ಉತ್ಸುಕತೆ?

ಚಾಮರಾಜನಗರ : ಕಾಡುಗಳ್ಳ ವೀರಪ್ಪನ್‌ನನ್ನು ಶರಣಾಗತನಾಗುವಂತೆ ಮಾಡಿ, ಕ್ಷಮಾದಾನ ಕೊಡಿಸಿ, ಪಡಿಯಚ್ಚಿ ಗೌಂಡರ್‌ ಜನಾಂಗದ ಬೆಂಬಲ ಪಡೆಯುವ ಉತ್ಸುಕತೆಯನ್ನು ಕರುಣಾನಿಧಿ ತೋರಿದ್ದಾರೆ ಇದೀಗ ಹೇಳಲಾಗುತ್ತಿದೆ.

ವೀರಪ್ಪನ್‌ ಶರಣಾಗುವಂತೆ ಮಾಡಲು ವೇದಿಕೆ ಕೂಡ ಸಜ್ಜಾಗಿದೆ. ವೀರಪ್ಪನ್‌ಗೆ ಕ್ಷಮಾದಾನ ನೀಡುವುದಾದರೆ, ಆತ ಶರಣಾಗಲು ಸಿದ್ಧ, ಇದರ ನೇತೃತ್ವವನ್ನು ತಾವೇ ವಹಿಸುತ್ತೇವೆ ಎಂದು ರಾಜ್‌ಕುಮಾರ್‌ ಬಿಡುಗಡೆಯ ರೂವಾರಿ ಪಳ ನೆಡುಮಾರನ್‌ ಹೇಳಿದ್ದಾರೆ.

ಈ ಮಧ್ಯೆ ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನರಹಂತಕನನ್ನು ಎಸ್‌.ಟಿ.ಎಫ್‌. ಪೊಲೀಸರೆದುರು ಶರಣಾಗುವಂತೆ ಮಾಡಲು ಕರುಣಾನಿಧಿ ನೇತೃತ್ವದ ಸರಕಾರ ಚಿಂತಿಸಿದೆ ಎಂದು ಗೊತ್ತಾಗಿದೆ. ವೀರಪ್ಪನ್‌ಗೆ ಕ್ಷಮಾದಾನ ನೀಡಿದರೆ, ಕೊಯಮತ್ತೂರು ಪ್ರದೇಶದಲ್ಲಿ ಹೆಚ್ಚಾಗಿರುವ ಪಡಿಯಚ್ಚಿ ಗೌಂಡರ್‌ ಅಥವಾ ವನ್ನಿಯಾರ್‌ಗಳ ಬೆಂಬಲ ದೊರಕೇ ದೊರಕುತ್ತದೆ ಎನ್ನುವುದು ಡಿಎಂಕೆ ಪಕ್ಷದ ಲೆಕ್ಕಾಚಾರ. ಆದರೆ, ತಮಿಳುನಾಡಿನ ಈ ಕೋರಿಕೆಗೆ ಕರ್ನಾಟಕ ಸರಕಾರ ಸೊಪ್ಪು ಹಾಕಿಲ್ಲ. ಹೀಗಾಗಿ ಸದ್ಯಕ್ಕೆ ತಮಿಳುನಾಡು ಸರಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಈ ಸಂಬಂಧ ಕರುಣಾನಿಧಿ ಅವರು ಮುಖ್ಯಮಂತ್ರಿ ಕೃಷ್ಣ ಅವರ ಮನ ವೊಲಿಸುವ ಪ್ರಯತ್ನವನ್ನೂ ಮಾಡಿದ್ದಾರೆ ಎಂದು ಗೊತ್ತಾಗಿದೆ. ಆದರೆ, ತಮ್ಮ ಪತಿ ಹಾಗೂ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಹತ್ಯೆಗೈದ ಎಲ್‌.ಟಿ.ಟಿ.ಈ ಜತೆ ನಿಕಟ ಸಂಬಂಧ ಹೊಂದಿರುವ ವೀರಪ್ಪನ್‌ಗೆ ಕ್ಷಮಾದಾನ ನೀಡುವುದು ಬೇಡ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎಸ್‌.ಎಂ. ಕೃಷ್ಣ ಅವರಿಗೆ ಸೂಚಿಸಿದ್ದಾರೆ ಎಂಬುದು ಉನ್ನತ ಮೂಲಗಳಿಂದ ದೊರೆತಿರುವ ಮಾಹಿತಿ.

ತಮಿಳುನಾಡು ಸರಕಾರ ವೀರಪ್ಪನ್‌ ಶರಣಾಗತಿಗೆ ಪ್ರಯತ್ನ ನಡೆಸಿರುವುದರಿಂದ ಕಾರ್ಯಾಚರಣೆ ಮಂದಗತಿಯಲ್ಲಿ ಸಾಗುತ್ತಿದೆ ಎಂದೂ ಹೇಳಲಾಗಿದೆ. ಈ ಮಧ್ಯೆ ಇತ್ತೀಚೆಗೆ ಪೊಲೀಸರು ಬಂಧಿಸಿದ ವ್ಯಕ್ತಿ ನಿಜವಾಗಿಯೂ ತಮಿಳು ಉಗ್ರರ ನಾಯಕ ಮಾರನ್‌ನೇ ಅಥವಾ ಬೇರೆ ವ್ಯಕ್ತಿಯೇ ಎಂಬ ಅನುಮಾನಗಳೂ ಮೂಡಿವೆ. ಆತನೇ ಮಾರನ್‌ ಎಂದು ಖಚಿತವಾಗಿ ಹೇಳಲು ಪೊಲೀಸರ ಬಳಿಯೂ ಯಾವುದೇ ಸಾಕ್ಷ್ಯಾಧಾರಗಳಿಲ್ಲವಂತೆ. ಚಾಮರಾಜನಗರ ಪೊಲೀಸ್‌ ವಲಯದಲ್ಲಂತೂ ವೀರಪ್ಪನ್‌ ಶರಣಾಗತಿ ಪ್ರಸ್ತಾಪ ಸುಳಿದಾಡುತ್ತಿದೆ.

(ಚಾಮರಾಜನಗರ ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+