Get Updates
Get notified of breaking news, exclusive insights, and must-see stories!

ಭಾರತ- ಆಸ್ಟ್ರೇಲಿಯಾ ಟೆಸ್ಟ್‌ ಆರಂಭ, ಬ್ರಾಡ್ಮನ್‌ಗೆ ಮೌನ ಶ್ರದ್ಧಾಂಜಲಿ

ಮುಂಬಯಿ : ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪ್ರಥಮ ಟೆಸ್ಟ್‌ ಮಂಗಳವಾರ ಇಲ್ಲಿನ ವಾಂಖೆಡೇ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಕಳೆದ 31 ವರ್ಷಗಳಲ್ಲಿ ಭಾರತ ನೆಲದಲ್ಲಿ ಭಾರತ ವಿರುದ್ಧ ಸರಣಿ ಗೆಲುವು ಸಾಧಿಸದಿರುವ ಆಸ್ಟ್ರೇಲಿಯಾ ಇತ್ತೀಚಿನ 15 ಸತತ ಟೆಸ್ಟ್‌ ಜಯದಿಂದ ಬೀಗುತ್ತಿದ್ದು, ಭಾರತ ವಿರುದ್ಧವೂ ಗೆಲ್ಲುವ ಛಲ ತಳೆದಿದೆ.

ಟಾಸ್‌ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಸ್ಟೀವ್‌ ವಾ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಪಡಿಸಿದರು. ಟಾಸ್‌ ಹಾಕಿದ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಮೈದಾನಕ್ಕೆ ಬಂದು ಭಾನುವಾರ ಅಗಲಿದ ಕ್ರಿಕೆಟ್‌ ರಂಗದ ಮಹಾನ್‌ ತಾರೆ ಸರ್‌ ಡಾನ್‌ ಬ್ರಾಡ್ಮನ್‌ ಅವರಿಗೆ ಎರಡು ನಿಮಿಷಗಳ ಕಾಲ ಮೌನ ಶ್ರದ್ಧಾಂಜಲಿ ಅರ್ಪಿಸಿದರು.

ಭಾರತ ತಂಡದಲ್ಲಿ ಇಬ್ಬರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳು ಸ್ಥಾನ ಪಡೆದಿದ್ದಾರೆ. ಜಾವಗಲ್‌ ಶ್ರೀನಾಥ್‌ ಹಾಗೂ ಅಜಿತ್‌ ಅಗರ್ಕರ್‌ ವೇಗದ ಸಾರಥ್ಯವನ್ನೂ ರಾಹುಲ್‌ ಸಾಂಘ್ವಿ, ಹರ್‌ಭಜನ್‌ ಸಿಂಗ್‌ ಸ್ಪಿನ್‌ ಮೋಡಿಯನ್ನೂ ಮೆರೆಯಲಿದ್ದಾರೆ. ನರೇಂದ್ರ ಹಿರ್ವಾನಿಗೆ ಪ್ರಥಮ ಟೆಸ್ಟ್‌ನಲ್ಲಿ ಸ್ಥಾನ ದೊರೆತಿಲ್ಲ.

ತಂಡ ಇಂತಿದೆ : ದಾಸ್‌, ರಮೇಶ್‌, ದ್ರಾವಿಡ್‌, ತಂಡೂಲ್ಕರ್‌, ಗಂಗೂಲಿ (ನಾಯಕ), ಲಕ್ಷ್ಮಣ್‌, ನಯನ್‌ ಮೋಂಗಿಯಾ (ವಿಕೆಟ್‌ ಕೀಪರ್‌), ಅಜಿತ್‌ ಅಗರ್ಕರ್‌, ಶ್ರೀನಾಥ್‌, ಹರ್‌ಭಜನ್‌ ಸಿಂಗ್‌, ರಾಹುಲ್‌ ಸಾಂಘ್ವಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+