ಬಿಸಿಲಬೇಗೆ ತಣಿಸಲು ಬಿಯರ್ ಮಾರುಕಟ್ಟೆಗೆ ಬೆಂಗಾಲ್ ಟೈಗರ್ !
ಬೆಂಗಳೂರು : ಬಿಯರ್ ಪ್ರಿಯರಿಗೆ ಚಪ್ಪರಿಸುವ ಸುದ್ದಿ. ನಾಕೌಟ್ ಮೂಲಕ ಬಿಯರ್ ಮಾರುಕಟ್ಟೆಯಲ್ಲಿ ಮಂಚೂಣಿಯ ಸ್ಥಾನ ಗಿಟ್ಟಿಸಲು ಹವಣಿಸುತ್ತಿರುವ ಮೈಸೂರು ಬ್ರೂವರೀಸ್ ಲಿಮಿಟೆಡ್ ಸದ್ಯದಲ್ಲಿಯೇ ತನ್ನ ಮಹತ್ವಾಕಾಂಕ್ಷೆಯ ಉತ್ಪನ್ನ ಬೆಂಗಾಲ್ ಟೈಗರ್ ಬಿಯರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.
ಮೈಸೂರು ಬ್ರೂವರೀಸ್‌ನ ಉಪಾಧ್ಯಕ್ಷ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಪಿ. ಬಾಲಸುಬ್ರಹ್ಮಣ್ಯಂ , ಬಿಯರ್ ಪ್ರಿಯರಿಗೆ ಈ ತಂಪಾದ ಸುದ್ದಿಯನ್ನು ಮುಟ್ಟಿಸಿದ್ದಾರೆ. ಕಳೆದ 30 ವರ್ಷಗಳಿಂದ ಕರ್ನಾಟಕದಲ್ಲಿ ಉತ್ಕೃಷ್ಟ ಗುಣಮಟ್ಟದ ಬಿಯರ್ ಉತ್ಪಾದಿಸುತ್ತಿರುವ ಸಂಸ್ಥೆ , ಕಳೆದ 5 ವರ್ಷಗಳಿಂದ ಮಹಾರಾಷ್ಟ್ರದಲ್ಲೂ ಉತ್ತಮ ಗುಣಮಟ್ಟದ ಬಿಯರ್ ಉತ್ಪಾದಿಸುತ್ತಿದೆ ಎಂದವರು ಹೇಳಿದ್ದಾರೆ.
ಬಿಯರ್ ಮಾರುಕಟ್ಟೆಯ ತುಂಬಾ ನಾಕೌಟ್‌ನದೇ ಗುಂಗು
ಕರ್ನಾಟಕದಲ್ಲಿ ನಾಕೌಟ್ ನಂಬರ್ ಒನ್ ಬಿಯರ್. ಆಂಧ್ರಪ್ರದೇಶದಲ್ಲಿ ಅದಕ್ಕೆ ಎರಡನೇ ಸ್ಥಾನ. ಮಹಾರಾಷ್ಟ್ರದಲ್ಲೂ ನಾಕೌಟ್ ಬಿಯರ್ ಮಾರುಕಟ್ಟೆಯಲ್ಲಿ ಗಣನೀಯ ಪಾಲನ್ನು ಪಡೆದಿದೆ ಎನ್ನುತ್ತಾರೆ ಬಾಲಸುಬ್ರಹ್ಮಣ್ಯಂ.
ಇದೀಗ ನಾಕೌಟ್ ಮಾದರಿಯಲ್ಲೇ ಮತ್ತೊಂದು ಶ್ರೇಷ್ಠ ಮಾದರಿಯ ಬಿಯರ್, ಬೆಂಗಾಲ್ ಪ್ರೀಮಿಯಂ ಪರಿಚಯಿಸಲು ಸಂಸ್ಥೆ ಮುಂದಾಗುತ್ತಿದೆ. ವಿಶೇಷ ಸ್ವಾದ ಹಾಗೂ ಗಮಲನ್ನು ಹೊಂದಿರುವ ಹೊಸ ಬಿಯರ್ 650 ಹಾಗೂ 330 ಮಿಲಿ ಲೀಟರ್ ಶೀಷೆಗಳಲ್ಲಿ ಲಭ್ಯ. 2000- 01 ನೇ ಸಾಲಿನಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ 5 ಮಿಲಿಯನ್ ಕೇಸ್ ಬಿಯರ್ ಮಾರಾಟದ ಉದ್ದೇಶವನ್ನು ಹೊಂದಿರುವ ಸಂಸ್ಥೆ , 85 ಕೋಟಿ ರುಪಾಯಿಗಳ ವ್ಯವಹಾರ ನಡೆಸುವ ಆಶಯದಲ್ಲಿದೆ. ಆಂಧ್ರಪ್ರದೇಶದಲ್ಲೂ ಬ್ರೂವರಿ ಸ್ಥಾಪಿಸಲು ಮುಂದಾಗಿದ್ದು ಸಂಸ್ಥೆ ಗೆ ಪರವಾನಗಿ ಸಿಗಬೇಕಷ್ಟೆ.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications