ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟ್ಟದಲ್ಲಿನ ಬಿತ್ತನೆ ಬೀಜಕ್ಕೆ ಮೊಳಕೆಯ ಕನಸು

By Oneindia Staff
|
Google Oneindia Kannada News

ಎಲ್ಲ ಚಿಣ್ಣರು ಸಂಭ್ರಮಿಸುವ ಸ್ಕೂಲ್‌ ಡೇ, ಕಾಲೇಜ್‌ ಡೇಯ ಭರಾಟೆ ಮುಗಿಯುತ್ತಿದೆ. ಅಲ್ಲೊಂದು ಇಲ್ಲೊಂದು ಕಾಲೇಜುಗಳು ಲೇಟಾಗಿ ನಡೆಸುವ ಕಾಲೇಜು ಡೇಗಳಿಗೆ ಜನರೇಟರ್‌, ಡೈನಮ್‌ಗಳನ್ನಿಟ್ಟುಕೊಂಡು ಇರುವ ಪುಟ್ಟ ಗ್ರೌಂಡಿನ ತುಂಬಾ ಸಿಂಗಾರ.

ಪಿಯುಸಿ ಸಾಯನ್ಸ್‌ ಓದುವ ಪುಟ್ಟ ಮಗಳು ಯಾವ ಡೇಗಳಿಗೂ ಹೋಗದೇ ಟ್ಯೂಷನ್‌ ಕ್ಲಾಸಿನ ಟೈಮಿಂಗ್ಸ್‌ ಗಾಗಿ ಫೋನ್‌ ಡಯಲ್‌ ಮಾಡುತ್ತಿದ್ದಾಳೆ. ಪುಟಾಣಿ ಚಿಣ್ಣರೂ ಹೊಸ ಫ್ರಾಕ್‌ನೊಂದಿಗೆ ಸ್ಕೂಲ್‌ ಡೇಯ ಬಣ್ಣ ಬಣ್ಣದ ಮಿನಿಯೇಚರ್‌ ಲೈಟಿನಲ್ಲಿ ಮಿಂಚುತ್ತಿದ್ದಾರೆ.

ಈ ನಡುವೆ ಚಿಕು ಬುಕು ಮಂತ್ರ ಹೇಳುವ ಕರೆಂಟು, ಫ್ಯಾನಿಲ್ಲದ ಸೆಕೆಯ ರಾತ್ರಿ ರಾಜ್ಯದಲ್ಲಿ ಬೇಸಿಗೆಯ ಬೆವರ ಸಾಲನ್ನು ಕಟ್ಟುತ್ತಿದೆ. ಕುಡಿಯುವ ನೀರಿಗೆ ತಪಿಸುವ ನಾಲಿಗೆಗಳು, ಬೋರ್‌ವೆಲ್‌ಗೆ ಬಾಯಾಡ್ಡುವ ದನಕರುಗಳೆಲ್ಲಾ ನೆನಪಾಗುತ್ತವೆ. ಅಟ್ಟದಲ್ಲಿ ಕಟ್ಟಿ ಇಟ್ಟಿರುವ ಬಿತ್ತನೆ ಬೀಜದ ಮೂಟೆ ಈ ಬಾರಿ ಹಸಿ ಮಣ್ಣಿಗೆ ಬಿದ್ದ ಮೇಲೆ ಹಸಿರು ಚಿಗುರುತ್ತವಾ ? ಬಾವಿ, ಕೆರೆಯ ದಂಡೆಯಲ್ಲಿಯೇ ಇಟ್ಟಿರುವ ಪಂಪ್‌ಗಳು ಈ ಬಾರಿಯ ಏಪ್ರಿಲ್‌ನಲ್ಲಿಯೂ ಗುಡು ಗುಡು ಸದ್ದು ಮಾಡಿಯಾವೇ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X