Get Updates
Get notified of breaking news, exclusive insights, and must-see stories!

ಅಂಕೋಲಾ : ಒಂದೇ ಕುಟುಂಬದ 9 ಮಂದಿ ಸಾಮೂಹಿಕ ಆತ್ಮಹತ್ಯೆ

ಕಾರವಾರ : ಜಿಲ್ಲೆಯ ಅಂಕೋಲಾದ ಕಣಗಿಲ ಗ್ರಾಮದಲ್ಲಿ ಮನೆ ಯಜಮಾನನ ಬೇಜವಾಬ್ದಾರಿತನ ಹಾಗೂ ಉಡಾಫೆಯಿಂದ ಬೇಸತ್ತ ಆತನ ಹೆಂಡತಿ ಹಾಗೂ 8 ಮಕ್ಕಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಊರ ತುಂಬಾ ದ್ವೇಷ ಕಟ್ಟಿಕೊಂಡಿದ್ದ ಗಣಪತಿ ಕುಸಲಪ್ಪ ನಾಯ್ಕ (50) ಉರುಫ್‌ ಕಚ್ಚು ಗಣಪತಿ ವರ್ತನೆಯಿಂದ ಬೇಸತ್ತ ಆತನ ಕುಟುಂಬದ ಕೆಲವರು ವಿಷ ಸೇವಿಸಿ, ಇನ್ನು ಕೆಲವರು ನೀರಿಗೆ ಹಾರಿ, ಮತ್ತೆ ಕೆಲವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೆಬ್ರವರಿ 22ರಂದೇ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಚ್ಚು ಗಣಪತಿಯ ಹೆಂಡತಿ ಸುಶೀಲಾ (45) ಮತ್ತು ನಾಲ್ಕು ಮಕ್ಕಳು ವಾಸ ಮಾಡುತ್ತಿದ್ದ ಗುಡಿಸಲಲ್ಲೇ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನುಳಿದ ನಾಲ್ವರ ಪೈಕಿ ಇಬ್ಬರು ಗಂಗಾವಳಿ ನದಿಗೆ ಹಾರಿ ಸತ್ತಿದ್ದು, ಇನ್ನಿಬ್ಬರು ನದಿ ತಟದ ಮಾಸ್ತಿಕಟ್ಟೆಯಲ್ಲಿ ನೇಣಹಾಕಿಕೊಂಡು ಪ್ರಾಣ ಬಿಟ್ಟಿದ್ದಾರೆ.

ಬೀರಮ್ಮ (19), ಮೀರಾ (16), ಶಶಿಕಲಾ (14), ಜ್ಯೋತಿ (12) ಮೀನಾಕ್ಷಿ (25), ಶ್ರೀಕಾಂತ (23), ತಾರಾ (21) ಮತ್ತು ಕಿರಣ್‌ (8) - ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟರು. ಮೀನಾಕ್ಷಿ ಹಾಗೂ ಶ್ರೀಕಾಂತ ನೇಣು ಹಾಕಿಕೊಂಡಿದ್ದರೆ, ತಾರಾ ಮತ್ತು ಕಿರಣ್‌ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಗಳವಾಡಿಕೊಂಡು ಕಚ್ಚಿ ಓಡುತ್ತಿದ್ದ ಗಣಪತಿ ನಾಯ್ಕನಿಗೆ ಕಚ್ಚು ಗಣಪತಿ ಎಂಬ ಹೆಸರು ಬಂತು. ಕಳೆದ ತಿಂಗಳ 26ರಂದು ತನ್ನ ಎದುರು ಮನೆಯ ವಾಸುದೇವ ಎಂಬುವರ ಮೇಲೆ ಹಲ್ಲೆ ಮಾಡಿದ್ದ ಗಣಪತಿ, ಫೆಬ್ರವರಿ 9ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಪತಿಯ ಮಗನೊಬ್ಬನ ಮೇಲೂ ಮೊಕದ್ದಮೆ ಹೂಡಲಾಗಿತ್ತು. ಫೆಬ್ರವರಿ 22ರಂದು ತಂದೆ- ಮಕ್ಕಳ ನಡುವೆ ಪ್ರಕರಣ ಕುರಿತಂತೆ ಅಂಕೋಲಾ ಕೋರ್ಟಿನ ಹೊರಗಡೆ ವಾಗ್ವಾದ ನಡೆಯಿತು ಎನ್ನಲಾಗಿದೆ. ಅದಾದ ನಂತರ ಅಂದೇ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರಬಹುದು ಎದು ಪೊಲೀಸರು ಹೇಳಿದ್ದಾರೆ.

ಒಂದು ದಿನದ ನಂತರ ಗುಡಿಸಲಿಂದ ದುರ್ವಾಸನೆ ಬಂದ ಕಾರಣ ಗ್ರಾಮಸ್ಥರು ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅದರ ಜಾಡು ಹಿಡಿದು ಶಂಕೆಯ ಮೇಲೆ ನೀರು ಪಾಲಾದವರು ಹಾಗೂ ನೇಣು ಹಾಕಿಕೊಂಡವರನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ತನಿಖೆ ಮುಂದುವರೆದಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+