ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

80 ಸಾವಿರ ಅನಗತ್ಯ ಹುದ್ದೆ ರದ್ದು - ಎಸ್‌.ಎಂ. ಕೃಷ್ಣ

By Oneindia Staff
|
Google Oneindia Kannada News

ಬೆಂಗಳೂರು : ಅನವಶ್ಯಕವೆನಿಸಿರುವ 80 ಸಾವಿರ ಹುದ್ದೆಗಳನ್ನು ರದ್ದುಪಡಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಹೇಳಿದ್ದಾರೆ.

ಅವರು, ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡುವ ಉದ್ದೇಶ ಹೊತ್ತಿರುವ ಬೆಂಗಳೂರು ಕಾರ್ಯ ನಿರತ ಪಡೆಯ ಎರಡನೇ ಶೃಂಗ ಸಭೆಯನ್ನು ಉದ್ದೇಶಿಸಿ ಭಾನುವಾರ ಮಾತನಾಡುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಈ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಆದರೂ ಸರಕಾರದ ಕೆಲಸಗಳು ಯಾವುದೇ ತೊಂದರೆಯಿಲ್ಲದೇ ನಡೆದುಕೊಂಡು ಬಂದಿವೆ. ಆದ್ದರಿಂದ ಈ ಹುದ್ದೆಗಳನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಹುದ್ದೆಗಳ ಕಡಿತದ ನಿರ್ಧಾರವನ್ನು, ಹುದ್ದೆಗಳ ಪುನಾರಚನೆ ಎಂದು ವ್ಯಾಖ್ಯಾನಿಸಬೇಕು ಎಂದು ಹೇಳಿದ ಮುಖ್ಯಮಂತ್ರಿಗಳು, ಶೇ 80ರಷ್ಟು ಹುದ್ದೆಗಳನ್ನು ಈ ವರ್ಷವೇ ರದ್ದುಪಡಿಸಲಾಗುವುದು ಎಂದರು. ನಗರ ಪಾಲಿಕೆಯಲ್ಲಿಯೂ ಕೆಲವು ಖಾಲಿ ಹುದ್ದೆಗಳಿವೆ. ಆ ಬಗ್ಗೆ ಮುಂದಿನ ವರ್ಷದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರು ಮಹಾನಗರಪಾಲಿಕೆ ತನ್ನ ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲ ಕ್ರೋಢೀಕರಿಸಿಕೊಳ್ಳಬೇಕು. ಎಲ್ಲದಕ್ಕೂ ಸರಕಾರವನ್ನೇ ಅವಲಂಭಿಸುವುದು ಸರಿಯಲ್ಲ ಎಂದೂ ಕೃಷ್ಣ ಈ ಸಂದರ್ಭದಲ್ಲಿ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X