ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಲುವು ನಮ್ಮದೇ- ಕುಂಬ್ಳೆ ಅಂತರಂಗದ ಆಲಾಪ...

By Oneindia Staff
|
Google Oneindia Kannada News

* ಸಂದರ್ಶನ : ರಾಮ್‌ ರಾಜ್‌

ತನ್ನ ಬಲಭುಜದ ಶಸ್ತ್ರಚಿಕಿತ್ಸೆಯ ನಂತರ ರೆಸ್ಟ್‌ನಲ್ಲಿರುವ ಈ ಬೆಂಗಳೂರು ಕ್ರಿಕೆಟಿಗನಿಗೆ ಕಾಂಗರೂಗಳ ವಿರುದ್ಧದ ಟೆಸ್ಟ್‌ ಸರಣಿ ಮಿಸ್‌ ಆಗುತ್ತಿರುವುದಕ್ಕೆ ವಿಷಾದವಿದೆ. ಹಾಗಂತ ತಲೆ ಮೇಲೆ ಕೈಹೊತ್ತು ಕೂರುವ ಜಾಯಮಾನದವನಲ್ಲ ಈತ. ಪೌಚ್‌ನಿಂದ ಸುತ್ತಿದ ಬಲಗೈ ಅಲುಗಾಡಿಸದೆಯೂ ಚೆನ್ನೈನ ಮೈದಾನದಲ್ಲಿ ಸ್ಪಿನ್ನರ್‌ಗಳಿಗೆ ಪಾಠ ಹೇಳಿಕ್ಟೊಟಿದ್ದನ್ನು ನಾವು ನೀವು ಮರೆಯಲು ಸಾಧ್ಯವೇ ಇಲ್ಲ. ಹೌದು, ಅದು ಬೇರಾರೂ ಅಲ್ಲ. ನಮ್ಮೂರಿನ ಹೆಮ್ಮೆಯ ಆಟಗಾರ ಕುಂಬ್ಳೆ. ಮೊನ್ನೆಯಷ್ಟೇ ಶ್ರೀನಾಥ್‌ ಮಾತುಗಳನ್ನು ಕೊಟ್ಟ ನಿಮಗೆ ಕುಂಬ್ಳೆ ಮನದ ಆಲಾಪಗಳನ್ನೂ ಕಟ್ಟಿಕೊಡಲು ಹರ್ಷಿಸುತ್ತೇವೆ. ಓದಿಕೊಳ್ಳಿ...

  • ಕಣದಿಂದ ಹೊರಗುಳಿದಿರುವ ನೀವು, ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಏನನ್ನುವಿರಿ?
    ಅದೊಂದು ಕಠಿಣ ಟಂಗಾಟುಂಗಿ ಅನ್ನೋದರಲ್ಲಿ ಎರಡು ಮಾತಿಲ್ಲ. 1998ರಲ್ಲೂ ನಾವು ಹೆಣಗಾಡಿದ್ದೆವು. ಈಗಂತೂ ಅವರು ಜಯವೀರರು. ಯಾವುದೇ ಸಂದರ್ಭದಲ್ಲೂ ಆಸ್ಟ್ರೇಲಿಯನ್ನರನ್ನು ಸೋಲಿಸುವುದು ಸುಲಭವಲ್ಲ.
  • ತವರ ನೆಲ ವೇ ಭಾರತೀಯರಿಗೆ ವರದಾನವಾಗಲಿದೆ ಅನ್ನೋದನ್ನ ನೀವು ಒಪ್ಪುವಿರಾ?
    ಭಾರತಕ್ಕೆ ಬಂದು, ಭಾರತದ ವಿರುದ್ಧ ಆಡುವ ಯಾವುದೇ ತಂಡವೂ ವ್ಯತಿರಿಕ್ತ ಪರಿಸ್ಥಿತಿಯ ನಡುವೆ ಆಡಬೇಕಾಗುತ್ತದೆ. ಇಲ್ಲಿನ ಹವೆ, ಜನ ಬೆಂಬಲ ಎಲ್ಲಾ ಆಸ್ಟ್ರೇಲಿಯಾದವರಿಗೆ ಒತ್ತಡವೇ. 1999ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಗಿಂತ ಇದು ಅಕ್ಷರಶಃ ಭಿನ್ನವಾಗಿರುತ್ತದೆ.
  • 1998ರಲ್ಲಿ ಗಾಯಾಳಾಗಿದ್ದ ಮೆಕ್‌ಗ್ರಾತ್‌ ಭಾರತಕ್ಕೆ ಬಂದಿರಲಿಲ್ಲ. ಈಗ ಬಂದಿದ್ದಾರೆ. ಭಾರತದ ಮಟ್ಟಿಗೆ ಇದೊಂದು ದೊಡ್ಡ ಎಡರು ಅನ್ನೋದು ಕೆಲವರ ಅಭಿಪ್ರಾಯ. ಇದಕ್ಕೆ ನೀವೇನಂತೀರಿ?
    ಮೆಕ್‌ಗ್ರಾತ್‌ ಅತ್ಯುತ್ತಮ ವೇಗಿ ಅನ್ನೋದು ನಿಜ. ಆದರೆ ಭಾರತದ ಪಿಚ್‌ಗಳು ಅವರಿಗೆ ಹೆಚ್ಚು ಬೌನ್ಸ್‌ ಒದಗಿಸಲಾರವು. ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಆತನ ದಾಳಿಯನ್ನು ಎದುರಿಸುವ ಶಕ್ತಿ ಖಂಡಿತ ಇದೆ.
  • ಮಾಧ್ಯಮಗಳ ಮೂಲಕ ಆಸ್ಟ್ರೇಲಿಯಾ ಸಾರಿರುವ ಮಾತುಗಳ ಸಮರ ಭಾರತದ ಆಟದ ಮೇಲೆ ಪರಿಣಾಮ ಬೀರಲಿದೆಯೇ?
    ಖಂಡಿತ ಇಲ್ಲ. ಆಸ್ಟ್ರೇಲಿಯಾ ಇಂಥ ಹೇಳಿಕೆಗಳನ್ನು ಕೊಡುತ್ತಿರುವುದು ಇದೇ ಮೊದಲೇನಲ್ಲ. 1999ರ ಆಸ್ಟ್ರೇಲಿಯಾ ಪ್ರವಾಸದ ವೇಳೆಯೂ, ಪ್ರವಾಸಕ್ಕೆ ಮುನ್ನವೇ ಇಂಥ ಹೇಳಿಕೆಗಳನ್ನು ಕೊಟ್ಟಿತ್ತು. ನಮ್ಮ ಮಾಧ್ಯಮಗಳೂ ಆಸ್ಟ್ರೇಲಿಯನ್ನರ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಿಕೊಡುತ್ತವೆ. ಇವೆಲ್ಲವುಗಳ ನಡುವೆ ನಾವು ಮಾನಸಿಕವಾಗಿ ಶಕ್ತರಾಗಿರಬೇಕು. ನಮ್ಮ ಆಟಗಾರರು ಹಾಗಿದ್ದಾರೆ ಅನ್ನೋದು ನನ್ನ ಅಭಿಪ್ರಾಯ.
  • ಯುವ ಸ್ಪಿನ್ನರ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು, ಚೆನ್ನೈ ಕ್ಯಾಂಪ್‌ನಲ್ಲಿ ನೀವು ಹೇಗೆ ತೊಡಗಿಕೊಂಡಿದ್ದಿರಿ?
    ಸ್ಪಿನ್ನರ್‌ಗಳಿಗೆ ಇದೊಂದು ಉತ್ತಮ ಅವಕಾಶ. ಕೋಚ್‌ ಜಾನ್‌ ರೈಟ್‌ ನನ್ನನ್ನು ಬರಹೇಳಿದರು. ನೆಟ್‌ನಲ್ಲಿ ಸ್ಪಿನ್ನರ್‌ಗಳಿಗೆ ನನಗೆ ಗೊತ್ತಿರುವಷ್ಟು ಹೇಳಿಕೊಟ್ಟೆ ಅಷ್ಟೆ.
  • ಕ್ಯಾಂಪ್‌ ಹಾಗೂ ಜಾನ್‌ ರೈಟ್‌ ಕುರಿತು ನೀವು ಏನಂತೀರಿ?
    ಚೆನ್ನೈನ ಅಲ್ಪಾವಧಿಯ ಕ್ಯಾಂಪ್‌ ಬಿಟ್ಟರೆ ನಾನು ರೈಟ್‌ ಅವರ ಜೊತೆ ಹೆಚ್ಚು ಸಂವಾದ ಮಾಡಿಲ್ಲ. ಹೀಗಾಗಿ ಅವರ ಬಗ್ಗೆ ಹೆಚ್ಚು ಆಳವಾಗಿ ನನಗೆ ಗೊತ್ತಿಲ್ಲ. ಕ್ಯಾಂಪ್‌ ಮಾತ್ರ ಬಹಳ ಸಂಯೋಜಿತವಾಗಿತ್ತು. ಪ್ರತಿಯಾಬ್ಬನ ಅಭಿವ್ಯಕ್ತಿಗೂ ಅದೊಂದು ವೇದಿಕೆ. ಎಲ್ಲರಿಗೂ ಅವರವರದೇ ಆದ ಜವಾಬ್ದಾರಿ. ಕೊಡು-ಕೊಳ್ಳುವಿಕೆ. ಒಟ್ಟಾರೆ ತಂತ್ರದ ಬಗ್ಗೆ ಚರ್ಚೆ. ಒಟ್ಟಿನಲ್ಲಿ ಅಲ್ಲಿನ ಘಳಿಗೆಗಳು ತುಂಬಾ ಚೆನ್ನಿದ್ದವು.
  • ನಿಮ್ಮ ದೃಷ್ಟಿಯಲ್ಲಿ ಒಟ್ಟಾರೆ ಸರಣಿಯ ಸಂಭವನೀಯತೆ ಏನು?
    ಕಾಂಗರೂಗಳನ್ನು ಸೋಲಿಸುವ ಒಳ್ಳೆಯ ಅವಕಾಶ ನಮ್ಮದು. ಭಾರತೀಯರೇ ನನ್ನ ಫೇವರೇಟ್ಸ್‌. ಮೊದಲ ಇನ್ನಿಂಗ್ಸ್‌ನಲ್ಲಿ ಸಾಕಷ್ಟು ರನ್‌ ದೋಚಿದರೆ, 20 ವಿಕೆಟ್‌ ಕಿತ್ತು ಪಂದ್ಯ ಗೆಲ್ಲುವುದು ಅಷ್ಟೇನೂ ಕಷ್ಟವಲ್ಲ. ಸ್ಕೋರ್‌ಬೋರ್ಡನ್ನು ರನ್‌ ತುಂಬಿದರೆ ಆಸ್ಟ್ರೇಲಿಯನ್ನರ ಮನಸ್ಸಿನಲ್ಲೂ ತಂತಾನೇ ಒತ್ತಡ ತುಂಬುತ್ತದೆ. ಈಗಾಗಲೇ ಮುಗಿದಿರುವ 3 ದಿನಗಳ 2 ಪಂದ್ಯಗಳಲ್ಲಿ ಆಸ್ಟ್ರೇಲಿಯ್ನನರ ಪರದಾಟವನ್ನ ನೀವು ಗಮನಿಸಿರಬಹುದು. ಎಲ್ಲೋ ಕೆಲವು ಆಟಗಾರರು ರನ್‌ ಗಳಿಸುವಲ್ಲಿ ಸಫಲರಾದರೇ ವಿನಃ ಒಟ್ಟಾರೆ ತಂಡ ಸದಾ ಒತ್ತಡದಲ್ಲೇ ಮುಳುಗಿತ್ತು.
  • ಶಸ್ತ್ರಚಿಕಿತ್ಸೆ ನಂತರ ನಿಮ್ಮ ಭುಜ ಹೇಗಿದೆ?
    ಆಪರೇಷನ್‌ ಆಗಿ ಒಂದು ತಿಂಗಳಾಯಿತು. ಈಗ ಪರವಾಗಿಲ್ಲ. ನಾನು ಕೆಲವು ಗುರಿಗಳನ್ನು ಇಟ್ಟುಕೊಂಡಿದ್ದೇನೆ. ವಾರದಲ್ಲಿಷ್ಟು, ಹದಿನೈದು ದಿನಗಳಲ್ಲಿಷ್ಟು ಕೆಲಸ ಮಾಡಬೇಕೆಂದು. ಅವನ್ನು ಮಾಡಮಾಡುತ್ತಾ ಭುಜ ಮಾಮೂಲಿನ ಸ್ಥಿತಿಗೆ ಬರುತ್ತದೆಂಬ ನಂಬುಗೆ ನನ್ನದು.
    • ಆ್ಯಂಡ್ರೂ (ಭಾರತದ ದೈಹಿಕ ತಜ್ಞ ಲೀಪಸ್‌) ನನಗೆ ಸಾಕಷ್ಟು ನೆರವು ಕೊಟ್ಟಿದ್ದಾರೆ. ಮಾರ್ಚ್‌ ಎರಡನೇ ವಾರ ಡಾ. ಮಾರ್ಕ್‌ ಫಗ್ಯೂಸನ್‌ ( ಕುಂಬ್ಳೆ ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯ) ಅವರನ್ನು ನೋಡಲು ದಕ್ಷಿಣ ಆಫ್ರಿಕಕ್ಕೆ ಹೋಗುವವನಿದ್ದೇನೆ. ಈಗಲೂ ಅವರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇನೆ. ಖುದ್ದು ಅವರನ್ನು ಕಂಡುಬರುವುದು ಯಾವುದಕ್ಕೂ ಒಳಿತಲ್ಲವೇ, ಅದಕ್ಕೆ ಹೋಗಲು ತೀರ್ಮಾನಿಸಿದೆ. ಈವ್ತತಿನ ಪರಿಸ್ಥಿತಿಯಲ್ಲಿ ನಾನು ಕ್ರಿಕೆಟ್‌ ಮೈದಾನಕ್ಕೆ ಯಾವಾಗ ಮರಳುತ್ತೇನೆ ಅಂತ ಹೇಳೋದು ಅಸಾಧ್ಯ.
    ಸಾಧನೆಯ ಹಾದಿಯಲ್ಲಿ ಕುಂಬ್ಳೆ ಹೂಳಬೇಕಾದ ಮೈಲುಗಲ್ಲುಗಳು ಬಹಳಷ್ಟಿವೆ. ಅದಕ್ಕೆ ಅಗತ್ಯವಾದ ತುಡಿತ, ಮೊನಚೂ ಅವರಲ್ಲಿವೆ. ಕುಂಬ್ಳೆ ಸಿಕ್‌ ಲೀವ್‌ ಬೇಗ ಮುಗಿಯಲಿ. ಕಣದಲ್ಲಿ ಅವರ ಫ್ಲಿಪ್ಪರ್‌ ಬೇಗ ಪುಟಿಯಲಿ.

    ವಾರ್ತಾಸಂಚಯ
    ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X