Get Updates
Get notified of breaking news, exclusive insights, and must-see stories!

ಹೊಸಗಾಳಿಯ ಸಹಸ್ರಮಾನದ ಜೈವಿಕ ತಂತ್ರಜ್ಞಾನ ನೀತಿ

ಬೆಂಗಳೂರು : ಸಹಸ್ರಮಾನದ ಜೈವಿಕ ತಂತ್ರಜ್ಞಾನ ನೀತಿಯನ್ನು ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಘೋಷಿಸಿದ್ದಾರೆ.

ರಾಜ್ಯದ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಇರುವ ಅವಕಾಶಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಇತರ ಕ್ಷೇತ್ರಗಳ ಕುರಿತ ಅಧ್ಯಯನಕ್ಕೆ ಮೂಲಭೂತ ಸೌಕರ್ಯಗಳನ್ನು ಮತ್ತು ಮಾನವ ಸಂಪನ್ಮೂಲಗಳನ್ನು ಕಲ್ಪಿಸಿ ಪ್ರೋತ್ಸಾಹಿಸುವುದು ಶನಿವಾರ ಕೃಷ್ಣ ಪ್ರಕಟಿಸಿರುವ ಜೈವಿಕ ತಂತ್ರಜ್ಞಾನ ನೀತಿಯಲ್ಲಿರುವ ಮುಖ್ಯ ಅಂಶಗಳು.

ರಾಜ್ಯದ ಮೊದಲ ಅಂತರ ರಾಷ್ಟ್ರೀಯ ಜೈವಿಕ ಪಾರ್ಕನ್ನು ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾಗುವುದು. ಕಾರವಾರದ ಮೀನುಗಾರಿಕಾ ಇಲಾಖೆ ಮತ್ತು ಧಾರವಾಡ ಕೃಷಿ ವಿವಿ ಸಹಯೋಗದಲ್ಲಿ ಕಾರವಾರದಲ್ಲಿ ಮತ್ತು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಸಹಯೋಗದಲ್ಲಿ ಇನ್ನೆರಡು ಜೈವಿಕ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಕೃಷ್ಣ ಹೇಳಿದ್ದಾರೆ. ಅಲ್ಲದೆ ಮಾಹಿತಿ ತಂತ್ರಜ್ಞಾನ ಕಾರಿಡಾರ್‌ ಮಾದರಿಯಲ್ಲಿಯೇ ನಗರದ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಹೆಬ್ಬಾಳದ ಕೃಷಿ ವಿವಿ ವರೆಗೆ ಜೈವಿಕ ತಂತ್ರಜ್ಞಾನ ಪಾರ್ಕ್‌ ಆರಂಭಿಸುವುದು ಕೂಡ ನೀತಿಯಲ್ಲಿ ಸೇರಿದೆ.

ನೀತಿಯಲ್ಲಿ ಉಲ್ಲೇಖಿಸಿರುವ ಇತರ ಮುಖ್ಯ ಅಂಶಗಳು :

  • ರಾಜ್ಯದಲ್ಲಿ ಬಯೋ ಇನ್ಫೋರ್ಮಾಟಿಕ್ಸ್‌ನ ಅಭಿವೃದ್ಧಿ ಗೆ ಸಂಸ್ಥೆಯ ಚೌಕಟ್ಟು ನೀಡುವುದು.
  • ಬಯೋ ಟೆಕ್ನಾಲಜಿ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಅನ್ವೇಷಣೆಗಳಿಗೆ ಆದ್ಯತೆ, ನಗರದಲ್ಲಿ ಜೀವಕೋಶಗಳ ಅಧ್ಯಯನ ಕೇಂದ್ರ ಸ್ಥಾಪನೆ
  • ಇಂಧನ ಕ್ಷೇತ್ರಕ್ಕೆ ಬದಲಿ ವ್ಯವಸ್ಥೆ , ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳಲ್ಲಿ ಸಿಗುವ ಕಬ್ಬಿನ ಸಿಪ್ಪೆಯನ್ನು ಇಂಧನವನ್ನಾಗಿ ಬಳಸುವುದು.
  • ಈ ಎಲ್ಲ ಬೆಳವಣಿಗೆಗಳಿಗೆ ಅನುಕೂಲವಾಗುವಂತೆ ಐಟಿ ಕ್ಷೇತ್ರದಲ್ಲಿ ನೀಡಿರುವ ರಿಯಾಯಿತಿಗಳನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೂ ನೀಡುವುದು.
  • ಕಡಿಮೆ ಭೂಮಿಯಲ್ಲಿ ಹೆಚ್ಚು ಕೃಷಿ ಬೆಳೆಯನ್ನು ಪಡೆಯುವ ಕುರಿತ ಅಧ್ಯಯನಕ್ಕೆ ಒತ್ತು.
(ಇನ್ಫೋ ವಾರ್ತೆ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+