ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಆರ್ಥಿಕ ವಿಷಯದಲ್ಲಿ ಅಭಿವೃದ್ಧಿ. ವ್ಯಾಪಾರದಲ್ಲಿ ಮುನ್ನಡೆ. ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ. ಧೈರ್ಯವಾಗಿ ಹೆಜ್ಜೆ ಇಡಿ.ವೃಷಭ : ಅದು ಬೇಕು, ಇದು ಬೇಕು, ಎಲ್ಲವೂ ಬೇಕು ಎನ್ನಿಸುತ್ತದೆ. ಆಸೆಯೇ ದುಃಖಕ್ಕೆ ಕಾರಣ. ಉದ್ಯೋಗದಲ್ಲಿ ಶ್ರದ್ಧೆ ತೋರಿದರೆ ಪ್ರಗತಿ.
ಮಿಥುನ : ಚೋರ ಭಯವಿದೆ. ಧನ ಹಾನಿಯೂ ಆದೀತು. ಎಷ್ಟು ಎಚ್ಚರದಿಂದಿದ್ದರೆ ಅಷ್ಟೂ ಒಳ್ಳೆಯದು. ಕುಲದೇವರ ಪೂಜೆಯಿಂದ ಕಷ್ಟ ಪರಿಹಾರ.
ಕಟಕ : ಗೆಳೆಯರೊಂದಿಗೆ ಪ್ರಯಾಣ. ಆನಂದ, ಉತ್ಸಾಹ. ನಿಮ್ಮ ಆಸೆಯೆಲ್ಲಾ ಕೈಗೂಡುತ್ತದೆ. ಮನೆಯಲ್ಲಿ ಮಂಗಳ ಕಾರ್ಯದ ಮಾತುಕತೆ.
ಸಿಂಹ : ಸಾಕಪ್ಪಾ ಸಾಕು ಈ ಜೀವನ, ಏಕೆ ಬೇಕು ಈ ಬದುಕು ಎನಿಸಿದೆ ನಿಮಗೆ. ಇದೇನೂ ಸ್ಥಿರವಾಗಿರುವುದಿಲ್ಲ. ಒಳ್ಳೆಯ ದಿನ ಬರುತ್ತದೆ ಕಾಯುವ ತಾಳ್ಮೆ , ಉತ್ಸಾಹ ಉಳಿಸಿಕೊಳ್ಳಿ.
ಕನ್ಯಾ : ಸಮಯದಲ್ಲಿ ಒಂದು ಹುಲ್ಲುಕಡ್ಡಿಯೇ ಆಸರೆಯಾಗುತ್ತದೆ. ಯಾರನ್ನೂ ಉಪೇಕ್ಷಿಸಬೇಡಿ. ನೌಕರಿಯಲ್ಲಿ ಅನುಕೂಲಕರ ವಾತಾವರಣ ಇದೆ.
ತುಲಾ : ನಿಮ್ಮ ಹೊಸ ಯೋಜನೆಗಳು ಕೈಗೂಡಲಿವೆ. ಯಶಸ್ಸು ನಿಮ್ಮನ್ನು ಅರಸಿ ಬಂದಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಅಪರೂಪದ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ.
ವೃಶ್ಚಿಕ : ಕೋರ್ಟು ವ್ಯವಹಾರಕ್ಕೆ ಕೈ ಇಟ್ಟೀರಿ ಜೋಕೆ. ಇಲ್ಲದ ಗೊಂದಲ, ಆತಂಕ ಕಾಡುತ್ತದೆ. ಮನಸ್ಸನ್ನು ಬಿಗಿ ಮಾಡಿ. ಮನೆದೇವರ ಪೂಜೆ ಮಾಡಿ.
ಧನಸ್ಸು : ಬಿಲ್ಲಿನಂತೆಯೇ ನಿಮ್ಮ ಮನಸ್ಸೂ ಬಗ್ಗಿ ಹೋಗಿದೆ. ಏನೇನೋ ಯೋಚನೆಗಳು. ಎಲ್ಲವನ್ನೂ ಮರೆತು ತೀರ್ಥಯಾತ್ರೆ ಕೈಗೊಳ್ಳಿ. ಇಂದಂತೂ ನಿಮಗೆ ಧನಯೋಗ ಇದೆ.
ಮಕರ : ಮನೆಯಲ್ಲಿ ವಿಶ್ರಾಂತಿ ಪಡೆಯುವ ಯೋಚನೆ ಇದೆ. ಆದರೆ, ಕರ್ತವ್ಯ ಕರೆಯುತ್ತಿದೆ. ಮನರಂಜನೆಯಲ್ಲಿ ಉತ್ಸಾಹ ಇಡಿ. ಲಾಟರಿ ಕೊಂಡರೆ ನಷ್ಟು ಖಂಡಿತಾ ಇಲ್ಲ.
ಕುಂಭ : ಮನೆಯಲ್ಲಿ ಸಂತಸದ ವಾತಾವರಣ. ಭೂಮಿ ವ್ಯವಹಾರದಲ್ಲಿ ಕಲಹ. ಕೋರ್ಟ್ ವ್ಯವಹಾರದಲ್ಲಿ ಜಯ. ಅಭ್ಯಾಗತರ ಆಗಮನ.
ಮೀನ : ನಿಮ್ಮ ಬುದ್ಧಿಶಕ್ತಿಯಿಂದ ಕಾರ್ಯಸಿದ್ಧಿ. ವಿಪರೀತ ಖರ್ಚು. ಎಷ್ಟು ಹಣ ಬಂದರೂ ಸಾಲದು. ವಿದ್ಯಾರ್ಥಿಗಳಿಗೆ ಸುದಿನ. ವ್ಯಾಪಾರದಲ್ಲಿ ಧನಲಾಭ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications