ಕಲ್ಲಂಗಡಿಯಲ್ಲಿ ನೀರನಿಟ್ಟವರಾರು !
ಬೇಸಿಗೆಯ ಬಿಸಿಲಿನಿಂದ ತೀರದ ದಾಹ ಇಂಗಿಸಲು ಬಂದಿದೆ ಎಲ್ಲೆಡೆ ಕಲ್ಲಂಗಡಿ. ಕಲ್ಲಂಗಡಿ ಹಸಿರು ಮೈಬಣ್ಣದ, ಕೆಂಪು ಹುರುಳಿನ ಜಲಯುಕ್ತ ಫಲವತ್ತಾದ ಫಲ. ಬೆಂಗಳೂರಿನ ರಸ್ತೆಯಂಚಿನಲ್ಲಿ ಈಗ ಎಲ್ಲನೋಡಿದರಲ್ಲಿ ಕಲ್ಲಂಗಡಿ, ಸೆಖೆ ತರುವ ಬವಣೆಗೆ ಎತ್ತಂಗಡಿ !
ಕಲ್ಲಂಗಡಿಯ ಮಾರಾಟ ಎಲ್ಲೆಡೆ ಭರದಿಂದ ಸಾಗಿದೆ. ಹಣ್ಣಿನ ಗಾತ್ರಕ್ಕನುಗುಣವಾಗಿ ಬೆಲೆ. ಪೂರ್ಣ ಹಸಿರು ಮೈತೊಗಟೆಯ ಸ್ವಾದಿಷ್ಟ ಕಲ್ಲಂಗಡಿಯಾಂದಕ್ಕೆ 20-25 ರುಪಾಯಿ ಆದರೆ, ಸಾಧಾರಣ ಗಾತ್ರದ ಬಿಳಿ ಪಟ್ಟೆಯ - ಹಸಿರು ತೊಗಟೆಯ ಕಲ್ಲಂಗಡಿ ಬೆಲೆ 10ರಿಂದ 15ರುಪಾಯಿ. ಕೆ.ಜಿ.ಗೆ 2-50, 3, 3-50 ಹೀಗೆ.
ಕಲ್ಲಂಗಡಿಯ ಜತೆ ಎಳನೀರಿನ ಮಾರಾಟವೂ ಹೆಚ್ಚಿದೆ. ದಿನಕ್ಕೆ 100 ಎಳನೀರು ಮಾರುತ್ತಿದ್ದವರು 200-250 ಎಳನೀರು ಮಾರುತ್ತಿದ್ದರೆ, ರಸ್ತೆಯಂಚಿನಲ್ಲಿ ದಿನವೂ 300ಕ್ಕೂ ಹೆಚ್ಚು ಕಲ್ಲಂಗಡಿ ಹಣ್ಣು ಮಾರುವವರಿದ್ದಾರೆ. ಬೆಂಗಳೂರಿನ ಬಹುತೇಕ ಎಲ್ಲ ತರಕಾರಿ ಅಂಗಡಿಗಳಿಗೂ ಕಲ್ಲಂಗಡಿ ಕಾಲಿಟ್ಟಿದೆ. ಎಲ್ಲ ಮುಖ್ಯರಸ್ತೆಗಳ ಫುಟ್‌ಪಾತ್‌ನಲ್ಲೂ ಕಲ್ಲಂಗಡಿಯ ರಾಶಿ ಕಾಣಿಸಿಕೊಳ್ಳುತ್ತಿದೆ.
ಬೇಸಿಗೆ ಎಂದು ಬೇಸರಪಟ್ಟುಕೊಳ್ಳದೆ, ಶಿವರಾತ್ರಿಯ ಜಾಗರಣೆಗೆ ಮೊದಲೇ ಕಲ್ಲಂಗಡಿ ತಿನ್ನುತ್ತಾ ಜನ ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಿದ್ದಾರೆ. ಬೇಸಿಗೆಯೇನೂ ದಿಢೀರನೆ ಬರುವುದಿಲ್ಲ. ಚಳೆ ಹಂತಹಂತವಾಗಿ ಕಡಿಮೆಯಾಗುತ್ತಿದ್ದಂತೆ, ಬಿಸಿಲೂ ಹಂತಹಂತವಾಗಿ ಮೇಲೇರುತ್ತದೆ. ಆದರೆ, ಈ ಬಾರಿ ಬೆಂಗಳೂರಲ್ಲಿ ಸಡನ್ ಎಂದು ಬಿಸಿಲೇರಿತು ಎನ್ನುವುದು ಕೆಲವರ ವಾದ.
ಏರಿದ ಬಿಸಿಲಿನಿಂದ ಸ್ವಾಭಾವಿಕವಾಗಿ ದಾಹವೂ ಹೆಚ್ಚಿದೆ. ಪೆಪ್ಸಿ, ಕೋಲಾಗಳ ಸಮರದ ನಡುವೆಯೂ ದೇಶೀಯ ಕಲ್ಲಂಗಡಿ ತನ್ನ ಹಿರಿಮೆ ಉಳಿಸಿಕೊಂಡಿದೆ. ಉಂಡಿಗೆ (ಚಂದ್ರಿಕೆ) ಹಾಕಿಸಿ, ತಾವು ಕೊಂಡ ಹಣ್ಣು ಒಳಗೆ ಕಂಪಗಿದೆ ಎಂಬುದನ್ನು ಖಾತ್ರಿ ಮಾಡಿಕೊಂಡು ಮನೆಗೆ ಕೊಂಡೊಯ್ದು, ಮಡದಿ ಮಕ್ಕಳ ಜತೆ ಹಣ್ಣು ತಿನ್ನುವವರ ಸಂಖ್ಯೆಯೂ ಏರಿದೆ.
ಪಾನಕ, ಫ್ರೂಟ್ ಜ್ಯೂಸ್‌ಗೂ ಬೇಡಿಕೆ ಬಂದಿದೆ. ಜ್ಯೂಸ್ ಅಂಗಡಿಗಳ ಮುಂದೆಯೂ ಜನಜಂಗುಳಿ ಕಾಣಿಸಿಕೊಳ್ಳುತ್ತಿದೆ. ಜ್ಯೂಸ್, ಎಳನೀರು , ಕಲ್ಲಂಗಡಿ, ಕರಬೂಜ ...ಉರಿವ ಬಿಸಿಲಿನ ಲಾಭಪಡೆದು ನಾಲ್ಕಾರು ಕಾಸು ಮಾಡಿಕೊಳ್ಳಲು ವರ್ತಕರು ಭರದ ಮಾರಾಟ ಮುಂದುವರಿಸಿದ್ದಾರೆ. ಈ ಬಾರಿ ಕಲ್ಲಂಗಡಿ ಫಸಲೂ ಚೆನ್ನಾಗೇ ಇದೆ.
ಒಂದು ಮಾತು : ರಸ್ತೆ ಬದಿಯಲ್ಲಿ ಮಾರುವ , ಕಟ್ ಫ್ರೂಟ್ಸ್ ತಿನ್ನಬೇಡಿ. ರೋಗರುಜಿನ ತಂದುಕೊಳ್ಳಬೇಡಿ .
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications